ಯಾಕೋಬನು 5:19 - ಪರಿಶುದ್ದ ಬೈಬಲ್19 ನನ್ನ ಸಹೋದರ ಸಹೋದರಿಯರೇ, ನಿಮ್ಮಲ್ಲಿ ಒಬ್ಬನು ಸತ್ಯದಿಂದ ದೂರವಾಗಿ ಅಲೆದಾಡುತ್ತಿದ್ದರೆ, ಮತ್ತೊಬ್ಬನು ಅವನಿಗೆ ಸಹಾಯಮಾಡಿ ಅವನನ್ನು ಸತ್ಯಕ್ಕೆ ನಡೆಸಬೇಕು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201919 ನನ್ನ ಸಹೋದರರೇ, ನಿಮ್ಮಲ್ಲಿ ಯಾರಾದರು ಸತ್ಯ ಮಾರ್ಗವನ್ನು ಬಿಟ್ಟು ತಪ್ಪಿ ನಡೆಯುತ್ತಿದ್ದರೆ ಮತ್ತೊಬ್ಬನು ಅವನನ್ನು ಸನ್ಮಾರ್ಗಕ್ಕೆ ತಂದರೆ; ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)19 ಸಹೋದರರೇ, ನಿಮ್ಮಲ್ಲಿ ಒಬ್ಬನು ಸತ್ಯದ ಮಾರ್ಗವನ್ನು ಬಿಟ್ಟು ತಪ್ಪಿಹೋದಾಗ ಇನ್ನೊಬ್ಬನು ಅವನನ್ನು ಸನ್ಮಾರ್ಗಕ್ಕೆ ತಂದರೆ, ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)19 ನನ್ನ ಸಹೋದರರೇ, ನಿಮ್ಮಲ್ಲಿ ಒಬ್ಬನು ಸತ್ಯಮಾರ್ಗವನ್ನು ತಪ್ಪಿಹೋಗಿರಲಾಗಿ ಮತ್ತೊಬ್ಬನು ಅವನನ್ನು ಸನ್ಮಾರ್ಗಕ್ಕೆ ತಂದರೆ - ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ19 ಪ್ರಿಯರೇ, ನಿಮ್ಮಲ್ಲಿ ಯಾವನಾದರೂ ಸತ್ಯದಿಂದ ತಪ್ಪಿಹೋಗಿರಲಾಗಿ ಮತ್ತೊಬ್ಬನು ಅವನನ್ನು ಯಥಾಸ್ಥಾನಕ್ಕೆ ತಂದರೆ, ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್19 ಮಾಜ್ಯಾ ಭಾವಾನು ಅನಿ ಭೆನಿಯಾನು, ತುಮ್ಚ್ಯಾತ್ಲೊ ಕೊನ್‌ಬಿ ಖರೆಪಾನಾತ್ನಾ ಧುರ್ ಜಾವ್ನ್ ಫಿರುನ್ಗೆತ್ ರ್‍ಹಾಲ್ಯಾರ್, ತುಮ್ಚ್ಯಾತ್ಲೊ ಅನಿಎಕ್ಲೊ ತೆಕಾ ಪರ್ತುನ್ ಹಾನುಚೆ. ಅಧ್ಯಾಯವನ್ನು ನೋಡಿ |
ಆದರೆ ನೀವು ಬಲಹೀನ ಕುರಿಗಳನ್ನು ಬಲಪಡಿಸಲಿಲ್ಲ. ಕಾಯಿಲೆಯಲ್ಲಿರುವ ಕುರಿಗಳನ್ನು ನೀವು ಪರಾಂಬರಿಸಲಿಲ್ಲ. ಗಾಯಗೊಂಡ ಕುರಿಗಳಿಗೆ ಬಟ್ಟೆ ಸುತ್ತಲಿಲ್ಲ. ಕೆಲವು ಕುರಿಗಳು ದಾರಿತಪ್ಪಿ ದೂರ ಹೋದವು. ಆದರೆ ನೀವು ಅದರ ಬೆನ್ನ ಹಿಂದೆ ಹೋಗಿ ಹಿಂತಿರುಗಿ ಬರುವಂತೆ ಮಾಡಲಿಲ್ಲ. ತಪ್ಪಿಹೋದ ಕುರಿಗಳನ್ನು ನೀವು ಹುಡುಕಲಿಲ್ಲ. ನೀವು ಬಹಳ ಕ್ರೂರಿಗಳೂ ದಯೆ ಇಲ್ಲದವರೂ ಆಗಿದ್ದೀರಿ. ಆ ರೀತಿಯಾಗಿ ನೀವು ನಿಮ್ಮ ಕುರಿಗಳನ್ನು ನಡೆಸಿದಿರಿ.