ಮಾರ್ಕ 6:21 - ಪರಿಶುದ್ದ ಬೈಬಲ್21 ಒಮ್ಮೆ ಯೋಹಾನನನ್ನು ಮರಣಕ್ಕೆ ಈಡುಮಾಡುವ ಸುಸಮಯ ಹೆರೋದ್ಯಳಿಗೆ ದೊರೆಯಿತು. ಅಂದು ಹೆರೋದನ ಹುಟ್ಟುಹಬ್ಬದ ದಿನವಾಗಿತ್ತು. ಹೆರೋದನು ರಾಜಾಧಿಕಾರಿಗಳಿಗೂ ಸೇನಾಧಿಪತಿಗಳಿಗೂ ಮತ್ತು ಗಲಿಲಾಯದ ಪ್ರಮುಖರಿಗೂ ಒಂದು ಔತಣಕೂಟವನ್ನು ಏರ್ಪಡಿಸಿದನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201921 ಆದರೆ ಹೆರೋದ್ಯಳಿಗೆ ಅನುಕೂಲವಾದ ದಿನ ಬಂದಿತು; ಹೇಗೆಂದರೆ ಹೆರೋದನು ತನ್ನ ಜನ್ಮದಿನದಂದು ಪ್ರಭುಗಳಿಗೂ, ಸಹಸ್ರಾಧಿಪತಿಗಳಿಗೂ, ಗಲಿಲಾಯ ಸೀಮೆಯ ಮುಖ್ಯಸ್ಥರಿಗೂ ಔತಣವನ್ನು ಏರ್ಪಡಿಸಿದಾಗ, ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)21 ಕಡೆಗೊಮ್ಮೆ, ಹೆರೋದಿಯಳಿಗೆ ಅನುಕೂಲವಾದ ಸಂದರ್ಭ ಒದಗಿತು. ಹೆರೋದನು ತನ್ನ ಹುಟ್ಟುಹಬ್ಬದ ದಿನಾಚರಣೆಯಂದು, ಆಸ್ಥಾನಿಕರಿಗೂ ಸೇನಾಧಿಪತಿಗಳಿಗೂ ಗಲಿಲೇಯ ಪ್ರಾಂತ್ಯದ ಪ್ರಮುಖರಿಗೂ ಔತಣಕೂಟವನ್ನು ಏರ್ಪಡಿಸಿದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)21 ಹೀಗಿರಲಾಗಿ ಅವಳಿಗೆ ಅನುಕೂಲವಾದ ದಿವಸ ಬಂತು; ಹೇಗಂದರೆ ಹೆರೋದನು ತಾನು ಹುಟ್ಟಿದ ದಿವಸದಲ್ಲಿ ಪ್ರಭುಗಳಿಗೂ ಸಹಸ್ರಾಧಿಪತಿಗಳಿಗೂ ಗಲಿಲಾಯ ಸೀಮೆಯ ಮುಖ್ಯಸ್ಥರಿಗೂ ಔತಣವನ್ನು ಮಾಡಿಸಿದಾಗ ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ21 ಕೊನೆಗೆ ಅನುಕೂಲವಾದ ಸಮಯ ಸಿಕ್ಕಿತು. ತನ್ನ ಜನ್ಮ ದಿನದಂದು ಹೆರೋದನು ತನ್ನ ಉನ್ನತ ಅಧಿಕಾರಿಗಳಿಗೆ, ಸೇನಾಧಿಪತಿಗಳಿಗೆ ಹಾಗೂ ಗಲಿಲಾಯದ ಪ್ರಮುಖರಿಗೆ ಔತಣವನ್ನು ಏರ್ಪಡಿಸಿದನು. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್21 ಆಕ್ರಿಕ್, ಹೆರೊದಿಯಾಸಾಕ್ ಎಕ್ ಬರೊ ಅವ್ಕಾಸ್ ಗಾವ್ಲೊ, ಹೆರೊದಾನ್ ಅಪ್ನಾಚ್ಯಾ ಜಲ್ಮಾಚ್ಯಾ ದಿಸಿ, ಅಪ್ನಾಚ್ಯಾ ರಾಜಾತ್ಲ್ಯಾ ಸಗ್ಳ್ಯಾ ಅದಿಕಾರ್‍ಯಾಕ್ನಿ, ಸೈನಿಕಾಂಚ್ಯಾ ಮುಖಂಡಾಕ್ನಿ ಅನಿ ಗಾಲಿಲಿಯಾಚ್ಯಾ ಮೊಟ್ಯಾ-ಮೊಟ್ಯಾ ಲೊಕಾಕ್ನಿ ಎಕ್ ಮೊಟೆ ಜೆವಾನ್ ಥವಲ್ಲ್ಯಾನ್. ಅಧ್ಯಾಯವನ್ನು ನೋಡಿ |
ಮೊದಲು, ನಂಬಿಕೆಯಿಲ್ಲದ ಜನರು ಮಾಡುವಂತಹ ಕಾರ್ಯಗಳನ್ನು ಮಾಡುತ್ತಾ ಬಹಳ ಕಾಲವನ್ನು ವ್ಯರ್ಥಗೊಳಿಸಿ ಬಿಟ್ಟಿರುವಿರಿ. ನೀವು ಲೈಂಗಿಕ ಪಾಪಗಳನ್ನು ಮಾಡುತ್ತಿದ್ದಿರಿ; ಇಷ್ಟವಾದ ಕೆಟ್ಟಕಾರ್ಯಗಳನ್ನು ಮಾಡುತ್ತಿದ್ದಿರಿ; ಕುಡುಕರಾಗಿದ್ದಿರಿ, ಕ್ರೂರಿಗಳಾಗಿದ್ದಿರಿ; ಅಸಹ್ಯಕರವಾದ ನಿರರ್ಥಕ ಗೋಷ್ಠಿಗಳನ್ನು ಮತ್ತು ಮದ್ಯಪಾನಗೋಷ್ಠಿಗಳನ್ನು ನಡೆಸುತ್ತಿದ್ದಿರಿ; ವಿಗ್ರಹಾರಾಧನೆ ಮಾಡುತ್ತಿದ್ದಿರಿ.