ಮಾರ್ಕ 15:46 - ಪರಿಶುದ್ದ ಬೈಬಲ್46 ಯೋಸೇಫನು ನಾರುಬಟ್ಟೆಯನ್ನು ತೆಗೆದುಕೊಂಡು ಬಂದು, ಶಿಲುಬೆಯಿಂದ ದೇಹವನ್ನು ಇಳಿಸಿ, ಅದನ್ನು ಆ ಬಟ್ಟೆಯಿಂದ ಸುತ್ತಿದನು. ಅನಂತರ, ಬಂಡೆಯ ಸಮಾಧಿಯಲ್ಲಿ ಅದನ್ನಿರಿಸಿ ಆ ಸಮಾಧಿಯ ಬಾಗಿಲಿಗೆ ದೊಡ್ಡ ಬಂಡೆಯನ್ನು ಉರುಳಿಸಿ ಮುಚ್ಚಿದನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201946 ಯೋಸೇಫನು ನಾರುಮಡಿಯನ್ನು ಕೊಂಡುತಂದು ಯೇಸುವನ್ನು ಶಿಲುಬೆಯಿಂದ ಇಳಿಸಿ ನಾರುಮಡಿಯಲ್ಲಿ ಸುತ್ತಿ ಬಂಡೆಯಲ್ಲಿ ಕೊರೆದಿದ್ದ ಸಮಾಧಿಯಲ್ಲಿಟ್ಟು ಸಮಾಧಿಯ ಬಾಗಿಲಿಗೆ ಕಲ್ಲನ್ನು ಉರುಳಿಸಿದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)46 ಜೋಸೆಫನು ನಾರುಮಡಿ ವಸ್ತ್ರವನ್ನು ಕೊಂಡುಕೊಂಡು ಬಂದು, ಯೇಸುವನ್ನು ಶಿಲುಬೆಯಿಂದ ಇಳಿಸಿ, ಆ ವಸ್ತ್ರದಿಂದ ಸುತ್ತಿದನು. ಅನಂತರ ಬಂಡೆಯಲ್ಲಿ ಕೊರೆದಿದ್ದ ಸಮಾಧಿಯಲ್ಲಿ ಅದನ್ನಿರಿಸಿ, ಸಮಾಧಿಯ ದ್ವಾರಕ್ಕೆ ದೊಡ್ಡ ಕಲ್ಲನ್ನು ಉರುಳಿಸಿ ಮುಚ್ಚಿದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)46 ಯೋಸೇಫನು ನಾರು ಮಡಿಯನ್ನು ಕೊಂಡುತಂದು ಆತನನ್ನು ಇಳಿಸಿ ನಾರುಮಡಿಯಲ್ಲಿ ಸುತ್ತಿ ಬಂಡೆಯಲ್ಲಿ ತೋಡಿದ್ದ ಸಮಾಧಿಯಲ್ಲಿಟ್ಟು ಸಮಾಧಿಯ ಬಾಗಿಲಿಗೆ ಕಲ್ಲನ್ನು ಉರುಳಿಸಿದನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ46 ಅವನು ಶುಭ್ರವಾದ ನಾರುಬಟ್ಟೆಯನ್ನು ಕೊಂಡುಕೊಂಡು ಬಂದು ಯೇಸುವನ್ನು ಶಿಲುಬೆಯಿಂದ ಇಳಿಸಿ ಆ ನಾರುಬಟ್ಟೆಯಲ್ಲಿ ಅದನ್ನು ಸುತ್ತಿ ಬಂಡೆಯಲ್ಲಿ ತೋಡಿಸಿದ್ದ ಸಮಾಧಿಯಲ್ಲಿಟ್ಟು ಯೇಸುವಿನ ಸಮಾಧಿಯ ದ್ವಾರಕ್ಕೆ ಒಂದು ಬಂಡೆಯನ್ನು ಉರುಳಿಸಿದನು. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್46 ಜುಜೆನ್ ಮಡೆ ಸಮಾದಿ ಕರುಕ್ ವಾಪರ್ತಲೊ ಮ್ಹಾಗ್ರೊ ಕಪ್ಡೊ ಇಕಾತ್ ಘೆವ್ನ್ ಯೆಲ್ಯಾನ್, ಅನಿ ಜೆಜುಚೆ ಮಡೆ ಕುರ್ಸಾ ವೈನಾ ಉತ್ರುನ್ ತ್ಯಾ ಕಪ್ಡ್ಯಾತ್ ಲಪ್ಟುನ್ ಸಮಾದಿತ್ ಥವ್ಲ್ಯಾನಿ. ತಿ ಸಮಾದಿ ಎಕುಚ್ ಎಕ್ ಗುಂಡ್ಯಾತ್ ಕೆದರಲ್ಲಿ ಸಮಾದಿ ಹೊತ್ತಿ. ತೆನಿ ಸಮಾದಿಚ್ಯಾ ದಾರ್ ಎಕ್ ಮೊಟೊ ಗುಂಡೊ ಗುಳ್ವುನ್ ಧಾಪ್ಲ್ಯಾನ್. ಅಧ್ಯಾಯವನ್ನು ನೋಡಿ |