ಮಾರ್ಕ 14:31 - ಪರಿಶುದ್ದ ಬೈಬಲ್31 ಆದರೆ ಪೇತ್ರನು ಖಚಿತವಾಗಿ, “ನಾನು ನಿನ್ನೊಂದಿಗೆ ಸಾಯಬೇಕಾದರೂ ಸರಿಯೇ, ನಿನ್ನನ್ನು ತಿಳಿದೇ ಇಲ್ಲವೆಂದು ನಾನೆಂದಿಗೂ ಹೇಳುವುದಿಲ್ಲ” ಎಂದು ಉತ್ತರಿಸಿದನು. ಉಳಿದ ಶಿಷ್ಯರು ಸಹ ಇದೇ ರೀತಿ ಹೇಳಿದರು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201931 ಆದರೆ ಅವನು, “ನಾನು ನಿನ್ನ ಸಂಗಡ ಸಾಯಬೇಕಾಗಿ ಬಂದರೂ ನಿನ್ನನ್ನು ನಿರಾಕರಿಸುವುದೇ ಇಲ್ಲವೆಂದು” ಬಹು ಖಂಡಿತವಾಗಿ ಹೇಳಿದನು. ಅದರಂತೆಯೇ ಶಿಷ್ಯರೆಲ್ಲರೂ ಹೇಳಿದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)31 ಆದರೆ ಪೇತ್ರನು, “ನಾನು ತಮ್ಮೊಡನೆ ಸಾಯಬೇಕಾಗಿ ಬಂದರೂ ತಮ್ಮನ್ನು ಮಾತ್ರ ನಿರಾಕರಿಸೆನು,” ಎಂದು ಆವೇಶಪೂರಿತನಾಗಿ ನುಡಿದನು. ಹಾಗೆಯೇ ಉಳಿದವರೂ ಹೇಳಿದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)31 ಆದರೆ ಅವನು - ನಾನು ನಿನ್ನ ಸಂಗಡ ಸಾಯಬೇಕಾದರೂ ನಿನ್ನನ್ನು ಅರಿಯೆನೆಂಬದಾಗಿ ಹೇಳುವದೇ ಇಲ್ಲವೆಂದು ಬಹು ಖಂಡಿತವಾಗಿ ಮಾತಾಡಿದನು. ಅದರಂತೆ ಅವರೆಲ್ಲರೂ ಹೇಳಿದರು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ31 ಅದಕ್ಕೆ ಪೇತ್ರನು, “ನಾನು ನಿಮ್ಮೊಂದಿಗೆ ಸಾಯಬೇಕಾದರೂ ನಿಮ್ಮನ್ನು ನಿರಾಕರಿಸುವುದೇ ಇಲ್ಲ,” ಎಂದು ಬಹು ಆವೇಶದಿಂದ ಹೇಳಿದನು. ಅದರಂತೆಯೇ ಶಿಷ್ಯರೆಲ್ಲರೂ ಹೇಳಿದರು. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್31 ಖರೆ ಪೆದ್ರು “ಅನಿ ವಿಶ್ವಾಸಾನ್ ಮಾಕಾ ತುಜೆ ವಾಂಗ್ಡಾ ಮರ್‍ತಲೊ ಎಳ್ ಯೆಲ್ಯಾರ್ಬಿ, ತುಜಿ ಮಾಕಾ ವಳಕುಚ್ ನಾ ಮನುನ್ ಎವ್ಡೆ, ಕನ್ನಾಬಿ ಸಾಂಗಿನಾ” ಮನುನ್ ಸಾಂಗ್ತಾನಾ ಸಗ್ಳಿ ಶಿಸಾಬಿ ತಸೆಚ್ ಮನುಲಾಲಿ. ಅಧ್ಯಾಯವನ್ನು ನೋಡಿ |