Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 13:1 - ಪರಿಶುದ್ದ ಬೈಬಲ್‌

1 ಯೇಸು ದೇವಾಲಯದಿಂದ ಹೊರಡುತ್ತಿರಲು ಆತನ ಶಿಷ್ಯರಲ್ಲಿ ಒಬ್ಬನು ಆತನಿಗೆ, “ಗುರುವೇ, ನೋಡು! ಈ ದೇವಾಲಯ ಎಂಥಾ ದೊಡ್ಡ ಕಲ್ಲುಗಳಿಂದ ಮಾಡಿದ ಎಂಥಾ ಸುಂದರ ಕಟ್ಟಡಗಳನ್ನು ಹೊಂದಿದೆ” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ಯೇಸು ದೇವಾಲಯದಿಂದ ಹೊರಗೆ ಹೋಗುತ್ತಿದ್ದಾಗ ಆತನ ಶಿಷ್ಯರಲ್ಲಿ ಒಬ್ಬನು ಆತನಿಗೆ, “ಗುರುವೇ, ನೋಡು, ಎಂಥಾ ಅದ್ಭುತವಾದ ಕಲ್ಲುಗಳು! ಎಂಥಾ ಮಹಾಕಟ್ಟಡಗಳು!” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

1 ಯೇಸುಸ್ವಾಮಿ ದೇವಾಲಯದಿಂದ ಹೊರಗೆ ಬರುತ್ತಿದ್ದಾಗ ಅವರ ಶಿಷ್ಯರಲ್ಲಿ ಒಬ್ಬನು, “ಗುರುವೇ, ಅತ್ತ ನೋಡಿ; ಎಂಥ ಬಾರಿ ಕಲ್ಲುಗಳು! ಎಷ್ಟು ರಮ್ಯವಾದ ಕಟ್ಟಡಗಳು!” ಎಂದು ವರ್ಣಿಸತೊಡಗಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

1 ಯೇಸು ದೇವಾಲಯವನ್ನು ಬಿಟ್ಟು ಹೋಗುತ್ತಿರಲು ಆತನ ಶಿಷ್ಯರಲ್ಲಿ ಒಬ್ಬನು ಆತನಿಗೆ - ಗುರುವೇ, ನೋಡು, ಎಂಥಾ ಕಲ್ಲುಗಳು! ಎಂಥಾ ಕಟ್ಟಣಗಳು! ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

1 ಯೇಸು ದೇವಾಲಯದೊಳಗಿಂದ ಹೊರಗೆ ಹೋಗುತ್ತಿದ್ದಾಗ ಅವರ ಶಿಷ್ಯರಲ್ಲಿ ಒಬ್ಬನು ಯೇಸುವಿಗೆ, “ಬೋಧಕರೇ, ಇಲ್ಲಿ ಎಂಥಾ ಭಾರಿ ಕಲ್ಲುಗಳು ಮತ್ತು ಎಂಥಾ ಮಹಾ ಕಟ್ಟಡಗಳು ಇವೆ ನೋಡಿರಿ!” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

1 ಜೆಜು ದೆವಾಚ್ಯಾ ಗುಡಿತ್ನಾ ಬಾಯ್ರ್ ಯೆತಾನಾ, ತೆಚ್ಯಾ ಶಿಸಾನಿತ್ಲೊ ಎಕ್ಲೊ “ಗುರುಜಿ! ಅಬಕ್, ಕವ್ಡೆ ಬರೆ ಗುಂಡೆ ಅನಿ ಭಾಂದಾಪ್”, ಮಟ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 13:1
9 ತಿಳಿವುಗಳ ಹೋಲಿಕೆ  

ಕೆರೂಬಿದೂತರು ರೆಕ್ಕೆಗಳನ್ನು ಚಾಚಿ ಹಾರಿದವು. ಅವು ಆಲಯವನ್ನು ಬಿಟ್ಟುಹೋಗುವದನ್ನು ನೋಡಿದೆನು. ಚಕ್ರಗಳು ಅವುಗಳೊಂದಿಗೆ ಹೋದವು. ಅವು ಯೆಹೋವನಾಲಯದ ಪೂರ್ವದ ಬಾಗಿಲ ಬಳಿ ನಿಂತವು. ಇಸ್ರೇಲಿನ ದೇವರ ಮಹಿಮೆಯು ಅವುಗಳ ಮೇಲೆ ಇತ್ತು.


ಯೆಹೋವನ ಮಹಿಮೆಯು ಕೆರೂಬಿದೂತರ ಮೇಲಿನಿಂದ ಹೊರಟು ಆಲಯದ ಹೊಸ್ತಿಲಿಗೆ ಬಂದಿತು. ಆಗ ಮೋಡವು ಆಲಯದಲ್ಲಿ ತುಂಬಿಕೊಂಡಿತು. ಯೆಹೋವನ ಮಹಿಮೆಯ ಪ್ರಕಾಶವು ಇಡೀ ಅಂಗಳವನ್ನು ತುಂಬಿಕೊಂಡಿತು.


ಆಗ ದೇವರು ನನಗೆ, “ನರಪುತ್ರನೇ, ನನ್ನನ್ನು ನನ್ನ ಆಲಯದಿಂದ ಓಡಿಸಲು ಇಲ್ಲಿ ಇಸ್ರೇಲರು ಮಾಡುತ್ತಿರುವ ಭಯಂಕರವಾದ ಕೃತ್ಯಗಳು ನಿನಗೆ ಕಾಣುತ್ತಿಲ್ಲವೇ? ಆದರೆ ಇದಕ್ಕಿಂತಲೂ ಹೆಚ್ಚಿನ ದುಷ್ಕೃತ್ಯಗಳನ್ನು ನೀನು ನೋಡುವೆ” ಎಂದು ಹೇಳಿದನು.


ಯೆರೆಮೀಯನು ಸೆರಾಯನಿಗೆ ಹೀಗೆ ಹೇಳಿದನು: “ಸೆರಾಯನೇ, ಬಾಬಿಲೋನಿಗೆ ಹೋಗು. ಎಲ್ಲರಿಗೂ ಕೇಳಿಸುವಂತೆ ಈ ಸಂದೇಶವನ್ನು ಖಂಡಿತವಾಗಿ ಓದು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು