ಮಾರ್ಕ 10:32 - ಪರಿಶುದ್ದ ಬೈಬಲ್32 ಯೇಸು ಮತ್ತು ಆತನ ಜೊತೆಯಲ್ಲಿದ್ದ ಜನರು ಜೆರುಸಲೇಮಿಗೆ ಹೋಗುತ್ತಿರಲು ಯೇಸು ಅವರೆಲ್ಲರಿಗಿಂತ ಮುಂದೆ ಹೋಗುತ್ತಿದ್ದನು. ಅದನ್ನು ನೋಡಿ ಯೇಸುವಿನ ಶಿಷ್ಯರು ಬೆರಗಾದರು. ಅವರನ್ನು ಹಿಂಬಾಲಿಸಿ ಬರುತ್ತಿದ್ದ ಜನರು ಭಯಗೊಂಡರು. ಯೇಸು ಹನ್ನೆರಡು ಜನ ಅಪೊಸ್ತಲರನ್ನು ತನ್ನ ಬಳಿಗೆ ಕರೆದು, ಜೆರುಸಲೇಮಿನಲ್ಲಿ ತನಗೆ ಸಂಭವಿಸಲಿರುವುದನ್ನು ಅವರಿಗೆ ಹೇಳುತ್ತಾ, ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201932 ಅವರು ಯೆರೂಸಲೇಮಿಗೆ ಪ್ರಯಾಣ ಮಾಡುತ್ತಿರುವಾಗ ಯೇಸು ಅವರೆಲ್ಲರಿಗಿಂತ ಮುಂದಾಗಿ ನಡೆದುಹೋದದ್ದರಿಂದ ಶಿಷ್ಯರು ಆಶ್ಚರ್ಯಪಟ್ಟರು. ಆತನನ್ನು ಹಿಂಬಾಲಿಸುವವರು ಭಯಪಟ್ಟರು. ಆಗ ಆತನು ತನ್ನ ಹನ್ನೆರಡು ಮಂದಿ ಶಿಷ್ಯರನ್ನು ಪುನಃ ಕರೆದುಕೊಂಡು ಮುಂದೆ ತನಗೆ ಸಂಭವಿಸುವ ಸಂಗತಿಯನ್ನು ಹೇಳುವುದಕ್ಕೆ ಪ್ರಾರಂಭಿಸಿದನು; ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)32 ಜೆರುಸಲೇಮಿಗೆ ಪ್ರಯಾಣಮಾಡುತ್ತ ಇದ್ದಾಗ ಯೇಸುಸ್ವಾಮಿ ಎಲ್ಲರಿಗಿಂತ ಮುಂದೆ ನಡೆಯುತ್ತಿದ್ದರು. ಅದನ್ನು ನೋಡಿ ಶಿಷ್ಯರು ಆಶ್ಚರ್ಯಪಟ್ಟರು. ಅವರ ಹಿಂದೆ ಬರುತ್ತಿದ್ದವರು ದಿಗಿಲುಗೊಂಡರು. ಆಗ ಯೇಸು ಹನ್ನೆರಡುಮಂದಿ ಶಿಷ್ಯರನ್ನು ತಮ್ಮ ಬಳಿಗೆ ಕರೆದು, ತಮಗೆ ಸಂಭವಿಸಲಿರುವ ವಿಷಯಗಳನ್ನು ಮತ್ತೊಮ್ಮೆ ಅವರಿಗೆ ಹೇಳತೊಡಗಿದರು: ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)32 ಅವರು ಯೆರೂಸಲೇವಿುನ ದಾರಿಯನ್ನು ಹಿಡಿದು ಹೋಗುತ್ತಿರುವಾಗ ಯೇಸು ಅವರ ಮುಂದೆ ಮುಂದೆ ಹೋಗುತ್ತಿದ್ದನು. ಅವರು [ನೋಡಿ] ಬೆರಗಾದರು; ಆತನ ಹಿಂದೆ ಬರುವವರು ಭಯಪಡುವವರಾದರು. ಆಗ ಆತನು ತನ್ನ ಹನ್ನೆರಡು ಮಂದಿ ಶಿಷ್ಯರನ್ನು ತಿರಿಗಿ ಕರೆದುಕೊಂಡು ಮುಂದೆ ತನಗಾಗುವದನ್ನು ಹೇಳುವದಕ್ಕೆ ತೊಡಗಿ ಅವರಿಗೆ - ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ32 ಅವರು ಯೆರೂಸಲೇಮಿಗೆ ಹೋಗುವ ದಾರಿಯಲ್ಲಿದ್ದರು. ಯೇಸು ಅವರ ಮುಂದಾಗಿ ಹೋದದ್ದರಿಂದ ಶಿಷ್ಯರು ಆಶ್ಚರ್ಯಪಟ್ಟರು. ಯೇಸುವಿನ ಹಿಂದೆ ಬರುತ್ತಿದ್ದವರು ಭಯಪಟ್ಟರು. ಯೇಸು ತಮ್ಮ ಹನ್ನೆರಡು ಮಂದಿಯನ್ನು ತಿರುಗಿ ಕರೆದು ತನಗೆ ಸಂಭವಿಸುವ ಸಂಗತಿಗಳನ್ನು ಅವರಿಗೆ ಹೇಳಲಾರಂಭಿಸಿದರು: ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್32 ಜೆಜು ಅನಿ ತೆಚ್ಯಾ ವಾಂಗ್ಡಾ ಹೊತ್ತಿ ಲೊಕಾ ಜೆರುಜಲೆಮಾಚ್ಯಾ ವಾಟೆನ್ ಜಾವ್ನಗೆತ್ ರಾತಾನಾ, ಜೆಜು ಶಿಸಾಂಚ್ಯಾ ಫಿಡೆ-ಫಿಡೆ ಜಾವ್ನಗೆತ್ ಹೊತ್ತೊ, ಶಿಸಾ ಭಿಂಯಾವಲ್ಲ್ಯಾ ಸರ್ಕಿ ಹೊಲ್ಲಿ, ಅನಿ ತೆಂಚ್ಯಾ ವಾಂಗ್ಡಾ ಹೊತ್ತಿ ಲೊಕಾ ಭಿಂಯಾವಲ್ಲಿ. ಅನಿ ಎಗ್ದಾ ಜೆಜು ಬಾರಾ ಜಾನಾ ಶಿಸಾಕ್ನಿ ಕಡೆಕ್ ಬಲ್ವುನ್ ಘೆವ್ನ್ ಅಧ್ಯಾಯವನ್ನು ನೋಡಿ |