ಫಿಲೆಮೋನನಿಗೆ 1:16 - ಪರಿಶುದ್ದ ಬೈಬಲ್16 ಇನ್ನು ಮೇಲೆ ಅವನು ನಿನಗೆ ಕೇವಲ ಗುಲಾಮನಾಗಿರದೆ ಗುಲಾಮನಿಗಿಂತಲೂ ಹೆಚ್ಚಿನ ಪ್ರಿಯ ಸಹೋದರನಾಗಿದ್ದಾನೆ. ಅವನನ್ನು ಬಹಳವಾಗಿ ಪ್ರೀತಿಸುತ್ತೇನೆ. ಆದರೆ ನೀನು ಅವನನ್ನು ಮತ್ತಷ್ಟು ಹೆಚ್ಚಾಗಿ ಪ್ರೀತಿಸುವೆ. ನೀನು ಅವನನ್ನು ಮನುಷ್ಯನೆಂದು ಮತ್ತು ಪ್ರಭುವಿನಲ್ಲಿ ಒಬ್ಬ ಸಹೋದರನೆಂದು ಪ್ರೀತಿಸುವೆ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201916 ಇನ್ನು ಮೇಲೆ ಅವನು ದಾಸನಂತಾಗಿರದೆ ದಾಸನಿಗಿಂತ ಮಿಗಿಲಾಗಿ ಉತ್ತಮವಾದ ಪ್ರಿಯ ಸಹೋದರನಂತಾಗಬೇಕು. ಅವನು ನನಗೆ ಬಹಳ ಪ್ರಿಯನಾಗಿರುವಲ್ಲಿ ನಿನಗೆ ಲೋಕದ ಪ್ರಕಾರವಾಗಿಯೂ, ಕರ್ತನ ಸಂಬಂಧದಲ್ಲಿಯೂ ಇನ್ನೂ ಹೆಚ್ಚು ಪ್ರಿಯನಾಗಿರುವನಲ್ಲವೇ? ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)16 ಈಗ ಅವನು ನಿನ್ನ ಬಳಿಗೆ ಬರುತ್ತಿರುವುದು ಕೇವಲ ಗುಲಾಮನಂತೆ ಅಲ್ಲ. ಅದಕ್ಕಿಂತಲೂ ಬಹಳ ಮೇಲಾದವನಂತೆ, ಕ್ರಿಸ್ತಯೇಸುವಿನಲ್ಲಿ ಪ್ರಿಯ ಸಹೋದರನಂತೆ, ಅವನೆಂದರೆ ನನಗೆಷ್ಟೋ ಪ್ರೀತಿ. ಹಾಗಾದರೆ ನಿನ್ನ ಸೇವಕನೂ ನಮ್ಮ ಪ್ರಭುವಿನಲ್ಲಿ ನಿನ್ನ ಪ್ರಿಯ ಸಹೋದರನೂ ಆಗಿರುವ ಅವನ ಬಗ್ಗೆ ನಿನಗೆ ಮತ್ತಷ್ಟು ಪ್ರೀತಿ ಇರಬೇಕಲ್ಲವೇ? ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)16 ಇನ್ನು ಮೇಲೆ ಅವನು ದಾಸನಾಗದೆ ದಾಸನಿಗಿಂತ ಉತ್ತಮನಾಗಿ ಪ್ರಿಯ ಸಹೋದರನಂತಾಗಬೇಕು. ಅವನು ನನಗೆ ಬಹಳ ಪ್ರಿಯನಾಗಿರುವಲ್ಲಿ ನಿನಗೆ ಲೋಕಸಂಬಂಧದಲ್ಲಿಯೂ ಕರ್ತನ ಸಂಬಂಧದಲ್ಲಿಯೂ ಇನ್ನೂ ಎಷ್ಟೋ ಪ್ರಿಯನಾಗಿರುವನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ16 ಇನ್ನು ಮೇಲೆ ಅವನು ದಾಸನಾಗದೆ, ದಾಸನಿಗಿಂತ ಮೇಲಾಗಿ ಪ್ರಿಯ ಸಹೋದರನಂತಾಗಬೇಕು. ಅವನು ವಿಶೇಷವಾಗಿ ನನಗೆ ಬಹು ಪ್ರಿಯನಾಗಿದ್ದಾನೆ. ಆದರೂ ಓನೇಸಿಮನು ನಿನಗೆ ಮಾನವ ರೀತಿಯಲ್ಲಿಯೂ ಕರ್ತ ಯೇಸುವಿನಲ್ಲಿಯೂ ಒಬ್ಬ ಸಹೋದರನಾಗಿ ಇನ್ನು ಎಷ್ಟೋ ಪ್ರಿಯನಾಗಿರಬೇಕಲ್ಲವೇ. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್16 ಅನಿ ಫಿಡೆ ತೊ ಗುಲಾಮ್ ನ್ಹಯ್, ಗುಲಾಮಾಚ್ಯಾನ್ ಮೊಟೊ. ತಸೆ ಮಟ್ಲ್ಯಾರ್ ತುಕಾ ಎಕ್ ಪ್ರೆಮಾಚೊ ಭಾವ್, ಮಾಕಾ ತರ್ ತೊ ಲೈ ಅಪುರ್ಬಾಯೆಚೊಚ್, ಖರೆ ಮಾಜ್ಯಾನ್ಕಿ ತುಕಾ ಲೈ ಅಪುರ್ಬಾಯೆಚೊ. ತುಜೆ ಸಾರ್ಕೊಚ್ ಎಕ್ ಮಾನುಸ್ ಹೊವ್ನ್ ಕ್ರಿಸ್ತಾತ್ ಎಕ್ ಭಾವ್ ತೊ ತುಕಾ ಹೊಲಾ, ಮನ್ತಾನಾ ತುಕಾ ಕವ್ಡೊ ಅಪುರ್ಬಾಯೆಚೊ ತೊ ಅಸಿಲ್? ಅಧ್ಯಾಯವನ್ನು ನೋಡಿ |
ಕೆಲವರಿಗೆ ವಿಶ್ವಾಸಿಗಳಾದ ಯಜಮಾನರಿದ್ದಾರೆ. ಆದ್ದರಿಂದ ಆ ಗುಲಾಮರು ಮತ್ತು ಯಜಮಾನರು ಸಹೋದರರಾಗಿದ್ದಾರೆ. ಆದರೆ ಅವರು ತಮ್ಮ ಯಜಮಾನರಿಗೆ ಕಡಿಮೆ ಗೌರವ ಕೊಡದೆ ತಮ್ಮ ಯಜಮಾನರ ಸೇವೆಯನ್ನು ಇನ್ನೂ ಉತ್ತಮವಾಗಿ ಮಾಡಬೇಕು. ಏಕೆಂದರೆ ಅವರು ಒಳ್ಳೆಯ ಕೆಲಸಗಳಿಗಾಗಿ ತಮ್ಮನ್ನು ಪ್ರತಿಷ್ಠಿಸಿಕೊಳ್ಳುವ ವಿಶ್ವಾಸಿಗಳಾಗಿದ್ದಾರೆ ಮತ್ತು ಸ್ನೇಹಿತರಾಗಿದ್ದಾರೆ. ಈ ಕಾರ್ಯಗಳನ್ನು ಮಾಡುವಂತೆ ನೀನು ಜನರಿಗೆ ಉಪದೇಶಿಸಬೇಕು ಮತ್ತು ತಿಳಿಸಬೇಕು.