ಪ್ರಸಂಗಿ 4:8 - ಪರಿಶುದ್ದ ಬೈಬಲ್8 ಸ್ವಂತ ಕುಟುಂಬವನ್ನು ಹೊಂದಿಲ್ಲದವನು ಅಂದರೆ ಅಣ್ಣತಮ್ಮಂದಿರಾಗಲಿ ಮಕ್ಕಳಾಗಲಿ ಇಲ್ಲದವನು ಸಹ ಪ್ರಯಾಸಪಟ್ಟು ದುಡಿಯುವನು. ಅವನಿಗೂ ತನ್ನ ಆಸ್ತಿಯಲ್ಲಿ ತೃಪ್ತಿಯಿಲ್ಲ. ಅವನು ಬಿಡುವಿಲ್ಲದೆ ಪ್ರಯಾಸಪಟ್ಟು ದುಡಿಯುವನು. “ನಾನೇಕೆ ಪ್ರಯಾಸಪಟ್ಟು ದುಡಿಯುತ್ತಿರುವೆ? ನಾನೇಕೆ ಜೀವನದ ಸುಖವನ್ನು ಅನುಭವಿಸುತ್ತಿಲ್ಲ?” ಎಂದು ಅವನು ಆಲೋಚಿಸುವುದೇ ಇಲ್ಲ. ಇದು ಸಹ ಕೆಟ್ಟದ್ದೂ ವ್ಯರ್ಥವಾದದ್ದೂ ಆಗಿದೆ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20198 ಒಬ್ಬಂಟಿಗನಾದ ಒಬ್ಬ ಮನುಷ್ಯನಿದ್ದಾನೆ. ಅವನಿಗೆ ಅಣ್ಣತಮ್ಮಂದಿರು ಇಲ್ಲ, ಮಕ್ಕಳೂ ಇಲ್ಲ. ಆದರೂ ಅವನ ಪ್ರಯಾಸಕ್ಕೆ ಅಂತ್ಯವಿಲ್ಲ, ಐಶ್ವರ್ಯದಿಂದ ಅವನ ಕಣ್ಣಿಗೆ ತೃಪ್ತಿಯಿಲ್ಲ. ಅವನು, “ನಾನು ಸುಖವನ್ನು ತೊರೆದು ಯಾರಿಗೋಸ್ಕರ ಪ್ರಯಾಸಪಡುತ್ತಾ ಇದ್ದೇನೆ?” ಅಂದುಕೊಳ್ಳುವನು. ಇದೂ ಸಹ ವ್ಯರ್ಥವೇ. ಕೇವಲ ಪ್ರಯಾಸದ ಕೆಲಸವೇ ಸರಿ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)8 “ನಾನು ಸುಖಾನುಭವವನ್ನು ತೊರೆದು ಯಾರಿಗೋಸ್ಕರ ಒಂದೇ ಸಮನೆ ದುಡಿಯುತ್ತಾ ಇದ್ದೇನೆ?” ಎಂದುಕೊಂಡ. ಇದೂ ಕೂಡ ವ್ಯರ್ಥ, ಕೇವಲ ಪ್ರಯಾಸವೇ ಸರಿ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)8 ಎರಡನೆಯವನಿಲ್ಲದೆ ಒಬ್ಬೊಂಟಿಗನೊಬ್ಬನಿದ್ದಾನೆ; ಅವನಿಗೆ ಅಣ್ಣತಮ್ಮಂದಿರೂ ಇಲ್ಲ, ಮಕ್ಕಳೂ ಇಲ್ಲ; ಆದರೂ ಅವನ ಶ್ರಮೆಗೆ ಪಾರವಿಲ್ಲ, ಧನದಿಂದ ಅವನ ಕಣ್ಣಿಗೆ ತೃಪ್ತಿಯಿಲ್ಲ. ನಾನು ಸುಖವನ್ನು ತೊರೆದು ಯಾರಿಗೋಸ್ಕರ ಪ್ರಯಾಸಪಡುತ್ತಲೇ ಇದ್ದೇನೆ ಅಂದುಕೊಳ್ಳುವನು. ಇದೂ ವ್ಯರ್ಥ, ಕೇವಲ ಪ್ರಯಾಸವೇ ಸರಿ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ8 ಜೊತೆಗಾರನಿಲ್ಲದೆ ಒಬ್ಬಂಟಿಗನಾದ ಒಬ್ಬ ಮನುಷ್ಯನಿದ್ದನು. ಅವನಿಗೆ ಮಗನಾಗಲಿ, ಸಹೋದರನಾಗಲಿ ಇರಲಿಲ್ಲ. ಆದರೂ ಅವನ ಪ್ರಯಾಸಕ್ಕೆ ಕೊನೆಯಿಲ್ಲ. ತನ್ನ ಸಂಪತ್ತಿನಿಂದ ಅವನ ಕಣ್ಣು ತೃಪ್ತಿ ಹೊಂದಿರಲಿಲ್ಲ. ಅವನು, “ನಾನು ಸುಖಸಂತೋಷವನ್ನು ತೊರೆದು, ಯಾರಿಗೋಸ್ಕರ ಕಷ್ಟಪಡುತ್ತಲೇ ಇದ್ದೇನೆ?” ಎಂದುಕೊಂಡನು. ಇದು ಕೂಡ ವ್ಯರ್ಥವೇ, ಪ್ರಯಾಸದ ಕೆಲಸವೇ ಸರಿ. ಅಧ್ಯಾಯವನ್ನು ನೋಡಿ |