Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪ್ರಸಂಗಿ 11:7 - ಪರಿಶುದ್ದ ಬೈಬಲ್‌

7 ಬೆಳಕು ಹಿತ! ಸೂರ್ಯನ ಬೆಳಕು ನೋಡಲು ಚೆಂದ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

7 ನಿಜವಾಗಿ ಬೆಳಕು ಇಂಪಾಗಿಯೂ, ಮತ್ತು ಸೂರ್ಯನನ್ನು ಕಾಣುವುದು ಕಣ್ಣಿಗೆ ಹಿತವಾಗಿಯೂ ಇರುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

7 ಬೆಳಕು ಬಹಳ ಇಂಪು; ಸೂರ್ಯನ ಕಾಂತಿ ಕಣ್ಣುಗಳಿಗೆ ಸೊಂಪು. ಮಾನವನು ಎಷ್ಟೇ ಧೀರ್ಘಕಾಲ ಬದುಕಿರಲಿ ತನ್ನ ಬಾಳಿನ ದಿನಗಳಲ್ಲೆಲ್ಲಾ ಆನಂದಿಸಲಿ; ಆದರೆ ಅಂಧಕಾರದ ದಿನಗಳು ಸಹ ಬಹಳ ಇವೆ ಎಂಬುದನ್ನು ನೆನಪಿಗೆ ತಂದುಕೊಳ್ಳಲಿ. ಆ ಬಳಿಕ ಬರುವುದೆಲ್ಲಾ ನಿರರ್ಥಕ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

7 ಬಹು ವರುಷ ಬದುಕುವವನು ಅವುಗಳಲ್ಲೆಲ್ಲಾ ಆನಂದಿಸಲಿ;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

7 ಬೆಳಕು ಹಿತಕರ. ಸೂರ್ಯನ ಕಾಂತಿ ಕಣ್ಣುಗಳಿಗೆ ಮೆಚ್ಚಿಕೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪ್ರಸಂಗಿ 11:7
10 ತಿಳಿವುಗಳ ಹೋಲಿಕೆ  

ನಿನಗೆ ಆಸ್ತಿಯಿದ್ದರೆ ಜ್ಞಾನವು ಮತ್ತಷ್ಟು ಉಪಯುಕ್ತವಾಗಿದೆ. ನಿಜವಾಗಿಯೂ ಜ್ಞಾನಿಗಳು ಐಶ್ವರ್ಯವನ್ನು ಹೇರಳವಾಗಿ ಪಡೆದುಕೊಳ್ಳುವರು.


ಆಗ ನೀವು ಪರಲೋಕದಲ್ಲಿರುವ ನಿಮ್ಮ ತಂದೆಯ ನಿಜವಾದ ಮಕ್ಕಳಾಗುವಿರಿ. ನಿಮ್ಮ ತಂದೆಯು ಒಳ್ಳೆಯವರಿಗಾಗಿ ಮತ್ತು ಕೆಟ್ಟವರಿಗಾಗಿ ಸೂರ್ಯನನ್ನು ಉದಯಿಸುತ್ತಾನೆ ಮತ್ತು ಮಳೆಯನ್ನು ಸುರಿಸುತ್ತಾನೆ.


ನಗುಮುಖವು ಜನರನ್ನು ಸಂತೋಷಗೊಳಿಸುವುದು; ಒಳ್ಳೆಯ ಸುದ್ದಿಯಿಂದ ಜನರ ಆರೋಗ್ಯ ಹೆಚ್ಚುವುದು.


ಯೆಹೋವ ದೇವರು ನಮ್ಮ ಸಂರಕ್ಷಕನೂ ಮಹಿಮಾ ಪೂರ್ಣನಾದ ರಾಜನೂ ಆಗಿದ್ದಾನೆ. ಯೆಹೋವನು ನಮಗೆ ದಯೆಯನ್ನೂ ಘನತೆಯನ್ನೂ ಅನುಗ್ರಹಿಸುವನು. ಆತನು ಎಲ್ಲಾ ಒಳ್ಳೆಯವುಗಳನ್ನು ತನ್ನ ಭಕ್ತರಿಗೆ ಕೊಡುವನು.


ಒಂದು ರೀತಿಯಲ್ಲಿ ಬಡವನಿಗೂ ಅವನನ್ನು ಕುಗ್ಗಿಸುವವನಿಗೂ ವ್ಯತ್ಯಾಸವಿಲ್ಲ; ಅವರಿಬ್ಬರಿಗೂ ಜೀವಕೊಟ್ಟಾತನು ಯೆಹೋವನೇ; ಅವರಿಬ್ಬರನ್ನು ಸೃಷ್ಟಿಮಾಡಿದವನು ಯೆಹೋವನೇ.


ಅದು ಸೂರ್ಯನನ್ನು ನೋಡಲೇ ಇಲ್ಲ. ಅದಕ್ಕೆ ತಿಳಿವಳಿಕೆಯೂ ಇಲ್ಲ. ಆದರೆ ದೇವರು ಅನುಗ್ರಹಿಸಿದವುಗಳಲ್ಲಿ ಸಂತೋಷಪಡದವನಿಗಿಂತ ಆ ಮಗುವೇ ಹೆಚ್ಚು ವಿಶ್ರಾಂತಿಯನ್ನು ಪಡೆದುಕೊಳ್ಳುವುದು.


ಯಾಕೆಂದರೆ ನೀನು ನನ್ನನ್ನು ಮರಣದಿಂದ ರಕ್ಷಿಸಿದೆ; ನೀನು ನನ್ನನ್ನು ಸೋಲಿನಿಂದ ತಪ್ಪಿಸಿದೆ. ಆದ್ದರಿಂದ, ಜೀವಂತರಾಗಿರುವ ಜನರು ಮಾತ್ರ ನೋಡಬಹುದಾದ ಬೆಳಕಿನಲ್ಲಿ ನಾನು ದೇವರನ್ನು ಆರಾಧಿಸುವೆನು.


ದೇವರು ನನ್ನ ಆತ್ಮವನ್ನು ಪಾತಾಳಕ್ಕೆ ಹೋಗದಂತೆ ರಕ್ಷಿಸಿದನು. ಆದ್ದರಿಂದ ನಾನು ಜೀವನದಲ್ಲಿ ಮತ್ತೆ ಸುಖಪಡುವಂತಾಯಿತು’ ಎಂದು ಅರಿಕೆಮಾಡಿಕೊಳ್ಳುವನು.


ನೀನು ಮುದುಕನಾದಾಗ, ಸೂರ್ಯ, ಚಂದ್ರ, ನಕ್ಷತ್ರಗಳ ಬೆಳಕು ನಿನಗೆ ಕತ್ತಲೆಯಂತೆ ಕಾಣುತ್ತದೆ. ಮಳೆಯಾದ ಮೇಲೆಯೂ ಮತ್ತೆಮತ್ತೆ ಮೋಡಗಳಂತೆ ನಿನ್ನ ಜೀವನದಲ್ಲಿ ಕಷ್ಟಗಳು ತುಂಬಿರುತ್ತವೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು