Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪ್ರಲಾಪಗಳು 4:22 - ಪರಿಶುದ್ದ ಬೈಬಲ್‌

22 ಚೀಯೋನೇ, ನಿನಗಾಗಬೇಕಿದ್ದ ದಂಡನೆಯು ಸಂಪೂರ್ಣವಾಯಿತು. ಮತ್ತೆ ನೀನು ಸೆರೆವಾಸಕ್ಕೆ ಹೋಗುವುದಿಲ್ಲ. ಆದರೆ ಎದೋಮಿನ ಜನರೇ, ನಿಮ್ಮ ಪಾಪಗಳಿಗಾಗಿ ಯೆಹೋವನು ನಿಮ್ಮನ್ನು ದಂಡಿಸುವನು. ಆತನು ನಿಮ್ಮ ಪಾಪಗಳನ್ನು ಬಹಿರಂಗಪಡಿಸುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

22 ಚೀಯೋನೆಂಬ ಕನ್ಯೆಯೇ, ನಿನ್ನ ದೋಷಫಲವೆಲ್ಲಾ ತೀರಿತು, ಯೆಹೋವನು ನಿನ್ನನ್ನು ಇನ್ನು ಸೆರೆಗೆ ಒಯ್ಯನು. ಎದೋಮೆಂಬ ಕನ್ಯೆಯೇ, ನಿನ್ನ ದೋಷದ ನಿಮಿತ್ತ ಯೆಹೋವನು ನಿನ್ನನ್ನು ದಂಡಿಸಿ ನಿನ್ನ ಪಾಪಗಳನ್ನು ಬೈಲಿಗೆ ತರುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

22 ‘ಸಿಯೋನ್’ ನಾರಿಮಣಿಯೇ, ನಿನ್ನ ದೋಷದ ಫಲವನ್ನು ಅನುಭವಿಸಿ ಆಗಿದೆ. ಸರ್ವೇಶ್ವರನು ಮತ್ತೆ ಒಯ್ಯನು ನಿನ್ನನ್ನು ಸೆರೆಗೆ. ‘ಎದೋಮ್’ ನಾರಿಮಣಿಯೇ, ನಿನ್ನ ದೋಷದ ನಿಮಿತ್ತ ಸರ್ವೇಶ್ವರನು ನಿನ್ನನ್ನು ದಂಡಿಸುವನು ನಿನ್ನ ಪಾಪಾಕ್ರಮಗಳನ್ನು ಬಯಲಿಗೆ ಎಳೆಯುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

22 ಚೀಯೋನೆಂಬ ಯುವತಿಯೇ, ನಿನ್ನ ದೋಷಫಲವೆಲ್ಲಾ ಅನುಭವಿಸಿ ತೀರಿತು, ಯೆಹೋವನು ನಿನ್ನನ್ನು ಇನ್ನು ಸೆರೆಗೆ ಒಯ್ಯನು; ಎದೋಮೆಂಬ ಯುವತಿಯೇ, ನಿನ್ನ ದೋಷದ ನಿವಿುತ್ತ ಯೆಹೋವನು ನಿನ್ನನ್ನು ದಂಡಿಸಿ ನಿನ್ನ ಪಾಪಗಳನ್ನು ಬೈಲಿಗೆ ತರುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

22 ಚೀಯೋನ್ ಪುತ್ರಿಯೇ, ನಿನ್ನ ಅಕ್ರಮದ ಶಿಕ್ಷೆಯು ತೀರಿ ಹೋಯಿತು. ಅವರು ಇನ್ನು ಮೇಲೆ ನಿನ್ನ ಗಡಿಪಾರನ್ನು ಹೆಚ್ಚಿಸುವುದಿಲ್ಲ. ಎದೋಮಿನ ಪುತ್ರಿಯೇ, ಅವರು ನಿನ್ನ ಅಕ್ರಮವನ್ನು ವಿಚಾರಿಸುವನು. ಆತನು ನಿನ್ನ ಪಾಪಗಳನ್ನು ಬಹಿರಂಗಪಡಿಸುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪ್ರಲಾಪಗಳು 4:22
17 ತಿಳಿವುಗಳ ಹೋಲಿಕೆ  

ಜೆರುಸಲೇಮಿನೊಂದಿಗೆ ಕರುಣೆಯಿಂದ ಮಾತಾಡು. ಜೆರುಸಲೇಮಿಗೆ ಹೀಗೆ ಹೇಳು, ‘ನಿನ್ನ ಸೆರೆವಾಸದ ಸಮಯವು ಅಂತ್ಯವಾಯಿತು. ನೀನು ನಿನ್ನ ಪಾಪಗಳ ಶಿಕ್ಷೆಯನ್ನು ಅನುಭವಿಸಿದೆ.’ ಜೆರುಸಲೇಮ್ ಮಾಡಿದ ಪ್ರತಿಯೊಂದು ಪಾಪಕೃತ್ಯಗಳಿಗಾಗಿ ಯೆಹೋವನು ಎರಡು ಬಾರಿ ಶಿಕ್ಷಿಸಿದನು.”


ಇದು ಯೆಹೋವನ ನುಡಿ. “ಆ ಸಮಯದಲ್ಲಿ ಜನರು ಇಸ್ರೇಲಿನ ದೋಷವನ್ನು ಕಂಡುಹಿಡಿಯಲು ಪ್ರಯತ್ನಿಸುವರು. ಆದರೆ ಯಾವ ದೋಷಗಳೂ ಇರುವದಿಲ್ಲ. ಜನರು ಯೆಹೂದದ ಪಾಪಗಳನ್ನು ಹುಡುಕುವ ಪ್ರಯತ್ನ ಮಾಡುವರು. ಆದರೆ ಯಾವ ಪಾಪಗಳೂ ಸಿಕ್ಕುವದಿಲ್ಲ. ಏಕೆಂದರೆ ಇಸ್ರೇಲಿನ ಮತ್ತು ಯೆಹೂದದ ಜನರಲ್ಲಿ ಅಳಿದುಳಿದ ಕೆಲವು ಜನರನ್ನು ನಾನು ರಕ್ಷಿಸುತ್ತೇನೆ. ಅವರ ಪಾಪಗಳನ್ನೆಲ್ಲ ಕ್ಷಮಿಸಿದ್ದೇನೆ.”


ಯೆಹೋವನೇ ನಿಶ್ಚಯವಾಗಿ ಎದೋಮ್ಯರನ್ನು ದಂಡಿಸು. ಯಾಕೆಂದರೆ ಜೆರುಸಲೇಮ್ ಸೆರೆಹಿಡಿಯಲ್ಪಟ್ಟಾಗ ಅವರು, “ಅದರ ಕಟ್ಟಡಗಳನ್ನು ಕೆಡವಿಹಾಕಿ. ಅವುಗಳನ್ನು ಅಸ್ತಿವಾರ ಸಹಿತ ಹಾಳುಮಾಡಿರಿ” ಎಂದು ಆರ್ಭಟಿಸಿದರು.


ಎದೋಮ್ಯರು ಒಂದುವೇಳೆ ಹೀಗೆ ಹೇಳಿಯಾರು: “ನಾವು ನಾಶವಾಗಿದ್ದೇವೆ. ಹೌದು, ಆದರೆ ನಾವು ಹಿಂದೆ ಹೋಗಿ ತಿರುಗಿ ನಮ್ಮ ಪಟ್ಟಣಗಳನ್ನು ಕಟ್ಟುವೆವು.” ಸರ್ವಶಕ್ತನಾದ ಯೆಹೋವನು, “ಅವರು ಪಟ್ಟಣಗಳನ್ನು ತಿರುಗಿ ಕಟ್ಟಿದರೆ ನಾನು ತಿರುಗಿ ನಾಶಮಾಡುವೆನು” ಎಂದು ಹೇಳುತ್ತಾನೆ. ಇದಕ್ಕಾಗಿಯೇ ಜನರು, “ಎದೋಮ್ ದುಷ್ಟ ಪ್ರಾಂತ್ಯವಾಗಿದೆ, ಯೆಹೋವನು ನಿರಂತರವಾಗಿ ಅದನ್ನು ದ್ವೇಷಿಸುತ್ತಾನೆ” ಎಂದು ಅನ್ನುವರು.


ಇತರ ದೇಶಗಳವರು ನಾನು ಯೆಹೋವನೆಂದು ತಿಳಿಯುವರು. ಇಸ್ರೇಲರನ್ನು ನನ್ನ ವಿಶೇಷ ಜನರೆಂದು ಅವರಿಗೆ ತಿಳಿದುಬರುವದು. ಯಾಕೆಂದರೆ ಅವರ ಮಧ್ಯೆ ನನ್ನ ಪರಿಶುದ್ಧ ಸ್ಥಾನವನ್ನು ನಿರಂತರಕ್ಕೂ ಇರಿಸುವೆನು.’”


ಎದೋಮಿನ ಜನರೇ, ಸಂತೋಷವಾಗಿರಿ. ಊಚ್ ದೇಶದಲ್ಲಿ ವಾಸವಾಗಿರುವ ಜನರೇ, ಸಂತೋಷವಾಗಿರಿ. ಆದರೆ ಜ್ಞಾಪಕದಲ್ಲಿಟ್ಟುಕೊಂಡಿರಿ, ಯೆಹೋವನ ಕೋಪದ ಪಾತ್ರೆಯು ನಿಮ್ಮ ಬಳಿಗೂ ಬರುವುದು. ನೀವು ಆ ಪಾತ್ರೆಯಿಂದ ಕುಡಿಯುವಾಗ ಮತ್ತೇರಿದವರಾಗಿ ನಿಮ್ಮನ್ನು ನೀವೇ ಬೆತ್ತಲು ಮಾಡಿಕೊಳ್ಳುವಿರಿ.


ನನ್ನ ಜನರ ಪಾಪವು ಬಹಳವಾಗಿತ್ತು. ಅವರ ಪಾಪವು ಸೊದೋಮ್ ಪಟ್ಟಣದ ಪಾಪಕ್ಕಿಂತಲೂ ಹೆಚ್ಚಾಗಿತ್ತು. ಸೊದೋಮ್ ಇದ್ದಕ್ಕಿದ್ದಂತೆ ನಾಶವಾಯಿತು. ಅದು ನಾಶವಾದದ್ದು ಯಾವ ಮಾನವನಿಂದಲೂ ಅಲ್ಲ.


ಅವರು ನನ್ನ ವಿರುದ್ಧ ಪಾಪಗಳನ್ನು ಮಾಡಿದರೂ ಅವರ ಪಾಪಗಳನ್ನು ತೊಳೆದುಬಿಡುವೆನು. ಅವರು ನನ್ನ ವಿರುದ್ಧ ಕಾದಾಡಿದರೂ ಅವರನ್ನು ಕ್ಷಮಿಸುವೆನು.


“‘ನಾನು ಇಸ್ರೇಲರ ಮತ್ತು ಯೆಹೂದ್ಯರ ಸಂಗಡ ಶಾಶ್ವತವಾದ ಒಂದು ಒಡಂಬಡಿಕೆಯನ್ನು ಮಾಡಿಕೊಳ್ಳುವೆನು. ಈ ಒಡಂಬಡಿಕೆಗನುಸಾರವಾಗಿ ನಾನು ಅವರಿಗೆ ವಿಮುಖನಾಗುವುದೇ ಇಲ್ಲ. ನಾನು ಯಾವಾಗಲೂ ಅವರಿಗೆ ಒಳ್ಳೆಯವನಾಗಿರುತ್ತೇನೆ. ನನ್ನನ್ನು ಗೌರವಿಸಬೇಕೆಂಬ ಇಚ್ಛೆಯನ್ನು ಅವರಲ್ಲಿ ಬರಮಾಡುತ್ತೇನೆ. ಆಗ ಅವರೆಂದಿಗೂ ನನಗೆ ವಿಮುಖರಾಗುವದಿಲ್ಲ.


ಇನ್ನು ಮುಂದೆ ಮತ್ತೆ ಹಿಂಸಾಚಾರದ ವರ್ತಮಾನವು ನಿನ್ನಲ್ಲಿರುವದಿಲ್ಲ. ಜನರು ಇನ್ನೆಂದಿಗೂ ನಿನ್ನ ಮೇಲೆರಗಿ ನಿನ್ನನ್ನು ದೋಚುವದಿಲ್ಲ. ನಿನ್ನ ಗೋಡೆಗಳಿಗೆ ‘ರಕ್ಷಣೆ’ ಎಂದೂ ದ್ವಾರಗಳಿಗೆ ‘ಸ್ತೋತ್ರ’ವೆಂದೂ ಹೆಸರಿಡುವಿ.


ಚೀಯೋನೇ, ಎಚ್ಚರಗೊಳ್ಳು, ಎದ್ದೇಳು! ನಿನ್ನ ಉಡುಪನ್ನು ಹಾಕಿಕೊ; ನಿನ್ನ ಪ್ರತಾಪವನ್ನು ಧರಿಸಿಕೊ. ಪರಿಶುದ್ಧ ಜೆರುಸಲೇಮೇ, ಎದ್ದುನಿಲ್ಲು. ಸುನ್ನತಿಯಿಲ್ಲದವರೂ ಅಶುದ್ಧರೂ ನಿನ್ನಲ್ಲಿಗೆ ಮತ್ತೇ ಪ್ರವೇಶಿಸರು.


ಯೆಹೂದ ಮತ್ತು ಇಸ್ರೇಲುಗಳಿಗೆ ಮತ್ತೊಮ್ಮೆ ಒಳ್ಳೆಯದಾಗುವಂತೆ ಮಾಡುವೆನು. ಅವರನ್ನು ನಾನು ಮೊದಲಿನಂತೆ ಶಕ್ತಿಶಾಲಿಗಳನ್ನಾಗಿ ಮಾಡುವೆನು.


ಆದರೆ ಏಸಾವನಿಂದ ನಾನು ಎಲ್ಲವನ್ನು ಕಿತ್ತುಕೊಳ್ಳುವೆನು. ಅವನು ಅಡಗಿಕೊಳ್ಳುವ ಎಲ್ಲಾ ಸ್ಥಳಗಳನ್ನು ನಾನು ಪತ್ತೆ ಹಚ್ಚುವೆನು. ಅವನು ನನ್ನ ಕಣ್ಣು ತಪ್ಪಿಸಲು ಸಾಧ್ಯವಿಲ್ಲ. ಅವನ ಮಕ್ಕಳು, ಬಂಧುಗಳು ಮತ್ತು ನೆರೆಹೊರೆಯವರು ಸತ್ತುಹೋಗುವರು.


ದೂರದಲ್ಲಿರುವ ಜನರು ರೋಗಗಳಿಂದ ಸಾಯುವರು. ಹತ್ತಿರದಲ್ಲಿರುವವರು ಕತ್ತಿಯಿಂದ ಸಾಯುವರು. ತಪ್ಪಿಸಿಕೊಂಡವರೂ ಉಳಿಸಲ್ಪಟ್ಟವರೂ ಹಸಿವೆಯಿಂದ ಸಾಯುವರು. ಆಗಲೇ ನನ್ನ ಕೋಪವು ಶಮನವಾಗುವದು.


ಏಸಾವನನ್ನು ನಾನು ಸ್ವೀಕರಿಸಲಿಲ್ಲ. ಏಸಾವನಿರುವ ಬೆಟ್ಟಪ್ರದೇಶವನ್ನು ನಾನು ಹಾಳುಮಾಡಿದೆನು. ಈಗ ಕಾಡುನಾಯಿಗಳು ಮಾತ್ರ ಅಲ್ಲಿ ವಾಸಿಸುತ್ತವೆ.” ಎಂದು ಹೇಳಿದನು.


ನೀನು ನಾಚಿಕೆಯಿಂದ ಮುಚ್ಚಲ್ಪಡುವೆ, ನಿರಂತರಕ್ಕೂ ನಾಶವಾಗುವೆ. ಯಾಕೆಂದರೆ ನೀನು ನಿನ್ನ ಸಹೋದರನಾದ ಯಾಕೋಬನೊಂದಿಗೆ ಕ್ರೂರವಾಗಿ ನಡೆದುಕೊಂಡೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು