Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪ್ರಕಟನೆ 21:25 - ಪರಿಶುದ್ದ ಬೈಬಲ್‌

25 ನಗರದ ಬಾಗಿಲುಗಳು ಎಂದಿಗೂ ಮುಚ್ಚುವುದೇ ಇಲ್ಲ. ಏಕೆಂದರೆ ಅಲ್ಲಿ ರಾತ್ರಿಯೇ ಇಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

25 ಅದರ ಹೆಬ್ಬಾಗಿಲುಗಳನ್ನು ಹಗಲಿನಲ್ಲಿ ಮುಚ್ಚುವುದೇ ಇಲ್ಲ. ಅಲ್ಲಿ ರಾತ್ರಿಯಂತೂ ಇಲ್ಲವೇ ಇಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

25 ಹಗಲಿನಲ್ಲಿ ಅದರ ಹೆಬ್ಬಾಗಿಲುಗಳನ್ನು ಮುಚ್ಚುವಂತಿಲ್ಲ. ರಾತ್ರಿಯೆಂಬುದು ಅಲ್ಲಿ ಇಲ್ಲವೇ ಇಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

25 ಅದರ ಬಾಗಿಲುಗಳನ್ನು ಹಗಲಿನಲ್ಲಿ ಮುಚ್ಚುವದೇ ಇಲ್ಲ; ರಾತ್ರಿಯಂತೂ ಅಲ್ಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

25 ಅದರ ಹೆಬ್ಬಾಗಿಲುಗಳು ಒಂದು ದಿನವೂ ಮುಚ್ಚುವುದೇ ಇಲ್ಲ. ಇರುಳಂತೂ ಇರುವುದೇ ಇಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

25 ಸಗ್ಳೊ ದಿಸ್‍ಬರ್ ಶಾರಾಚಿ ದಾರಾ ಉಗ್ಡಿ ರ್‍ಹಾತ್ಯಾತ್, ತಿ ಕನ್ನಾಬಿ ಧಾಪುನ್ ಹೊಯ್‍ನ್ಯಾತ್, ಕಶ್ಯಾಕ್ ಮಟ್ಲ್ಯಾರ್ ಥೈ ರಾತ್ ಮನ್ತಲಿ ರ್‍ಹಾಯ್ನಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪ್ರಕಟನೆ 21:25
7 ತಿಳಿವುಗಳ ಹೋಲಿಕೆ  

ನಿನ್ನ ದ್ವಾರಗಳು ಯಾವಾಗಲೂ ತೆರೆಯಲ್ಪಡುತ್ತವೆ. ಅವು ಹಗಲಲ್ಲಾಗಲಿ ರಾತ್ರಿಯಲ್ಲಾಗಲಿ ಮುಚ್ಚಲ್ಪಡುವದಿಲ್ಲ. ರಾಜ್ಯಗಳೂ ರಾಜರುಗಳೂ ತಮ್ಮ ಐಶ್ವರ್ಯವನ್ನು ನಿನ್ನ ಬಳಿಗೆ ತರುವರು.


ಅಲ್ಲಿ ರಾತ್ರಿಯೆಂಬುದೇ ಇರುವುದಿಲ್ಲ. ಜನರಿಗೆ ದೀಪದ ಬೆಳಕಾಗಲಿ ಸೂರ್ಯನ ಬೆಳಕಾಗಲಿ ಬೇಕಾಗುವುದಿಲ್ಲ. ಪ್ರಭುವಾದ ದೇವರೇ ಅವರಿಗೆ ಬೆಳಕನ್ನು ನೀಡುತ್ತಾನೆ. ಅವರು ಯುಗಯುಗಾಂತರಗಳಲ್ಲಿ ರಾಜರುಗಳಂತೆ ಆಳುತ್ತಾರೆ.


ನಿನ್ನ ಸೂರ್ಯನು ಮತ್ತೆ ಅಸ್ತಮಾನವಾಗುವದಿಲ್ಲ. ನಿನ್ನ ಚಂದ್ರನು ಮತ್ತೆಂದಿಗೂ ಕಪ್ಪಾಗುವದಿಲ್ಲ. ಯಾಕೆಂದರೆ ಯೆಹೋವನು ನಿನ್ನ ನಿರಂತರದ ಬೆಳಕಾಗಿರುವನು. ನಿನ್ನ ದುಃಖದ ಕಾಲವು ಅಂತ್ಯವಾಗುವದು.


ನಗರದ ಮೇಲೆ ಸೂರ್ಯನಾಗಲಿ ಚಂದ್ರನಾಗಲಿ ಪ್ರಕಾಶಿಸುವ ಅಗತ್ಯವಿರಲಿಲ್ಲ. ದೇವರ ಪ್ರಭಾವವೇ ಆ ನಗರಕ್ಕೆ ಬೆಳಕನ್ನು ನೀಡುತ್ತಿತ್ತು. ಕುರಿಮರಿಯಾದಾತನು ನಗರಕ್ಕೆ ದೀಪವಾಗಿದ್ದನು.


ಆ ನಗರಕ್ಕೆ ಹನ್ನೆರಡು ಬಾಗಿಲುಗಳುಳ್ಳ ಅತ್ಯಂತ ಎತ್ತರವಾದ ಗೋಡೆಯಿತ್ತು. ಆ ಬಾಗಿಲುಗಳ ಬಳಿಯಲ್ಲಿ ಹನ್ನೆರಡು ಮಂದಿ ದೇವದೂತರಿದ್ದರು. ಪ್ರತಿಯೊಂದು ಬಾಗಿಲಿನ ಮೇಲೂ ಇಸ್ರೇಲಿನ ಹನ್ನೆರಡು ಕುಲಗಳಲ್ಲಿ ಒಂದು ಕುಲದ ಹೆಸರನ್ನು ಬರೆಯಲಾಗಿತ್ತು.


ನನ್ನ ಸಂಗಡ ಮಾತನಾಡಿದ ದೇವದೂತನ ಬಳಿಯಲ್ಲಿ ಚಿನ್ನದ ಅಳತೆಗೋಲಿತ್ತು. ಆ ನಗರವನ್ನು, ಅದರ ಬಾಗಿಲುಗಳನ್ನು ಮತ್ತು ಅದರ ಗೋಡೆಯನ್ನು ದೇವದೂತನು ಆ ಕೋಲಿನಿಂದ ಅಳೆಯುತ್ತಿದ್ದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು