ಪ್ರಕಟನೆ 19:6 - ಪರಿಶುದ್ದ ಬೈಬಲ್6 ನಂತರ ಅನೇಕಾನೇಕ ಜನರ ಮಹಾಶಬ್ದದಂತಿದ್ದ ಧ್ವನಿಯೊಂದು ನನಗೆ ಕೇಳಿಸಿತು. ಅದು ಪ್ರವಾಹದ ನೀರಿನ ಘೋಷದಂತೆಯೂ ಗಟ್ಟಿಯಾದ ಗುಡುಗಿನ ಶಬ್ದದಂತೆಯೂ ಇತ್ತು. ಆ ಜನರು ಹೀಗೆ ಹೇಳುತ್ತಿದ್ದರು: “ಹಲ್ಲೆಲೂಯಾ! ನಮ್ಮ ದೇವರಾದ ಪ್ರಭುವು ಆಳಲಾರಂಭಿಸಿದ್ದಾನೆ. ಆತನು ಸರ್ವಶಕ್ತನಾಗಿದ್ದಾನೆ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20196 ತರುವಾಯ ಬಹುದೊಡ್ಡ ಜನರ ಸಮೂಹದ ಶಬ್ದವು ಜಲಪ್ರವಾಹದ ಘೋಷದಂತೆಯೂ ಭಯಂಕರವಾದ ಗುಡುಗಿನ ಶಬ್ದದಂತೆಯೂ ಇದ್ದ ಒಂದು ಸ್ವರವನ್ನು ಕೇಳಿದೆನು. ಅದು, “ಹಲ್ಲೆಲೂಯಾ, ಸರ್ವಶಕ್ತನಾಗಿರುವ ನಮ್ಮ ದೇವರಾದ ಕರ್ತನು ಆಳುತ್ತಾನೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)6 ತರುವಾಯ ನನಗೆ ಮತ್ತೊಂದು ಧ್ವನಿ ಕೇಳಿಸಿತು. ಅದು ದೊಡ್ಡ, ಜನಸಮೂಹದ ಆರ್ಭಟದಂತೆಯೂ ಭೋರ್ಗರೆಯುವ ಜಲಪ್ರವಾಹದ ಮೊರೆತದಂತೆಯೂ ಭಾರಿ ಗುಡುಗಿನ ಗರ್ಜನೆಯಂತೆಯೂ ಇತ್ತು. ಅದು ಇಂತೆಂದಿತು : “ಅಲ್ಲೆಲೂಯ ! ಸರ್ವಶಕ್ತ ನಮ್ಮ ಪ್ರಭು ದೇವ ರಾಜ್ಯವಾಳುತಿಹನಾತ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)6 ತರುವಾಯ ಜನರ ದೊಡ್ಡ ಗುಂಪಿನ ಶಬ್ದದಂತೆಯೂ ಜಲಪ್ರವಾಹಘೋಷದಂತೆಯೂ ಗಟ್ಟಿಯಾದ ಗುಡುಗಿನ ಶಬ್ದದಂತೆಯೂ ಇದ್ದ ಒಂದು ಶಬ್ದವನ್ನು ಕೇಳಿದೆನು. ಅದು - ಹಲ್ಲೆಲೂಯಾ; ಸರ್ವಶಕ್ತನಾಗಿರುವ ನಮ್ಮ ದೇವರಾದ ಕರ್ತನು ಆಳುತ್ತಾನೆ; ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ6 ತರುವಾಯ ಜನರ ದೊಡ್ಡ ಗುಂಪಿನ ಶಬ್ದವನ್ನು ಕೇಳಿದೆನು. ಅದು ಹೀಗೆ ಹೇಳಿತು: “ಹಲ್ಲೆಲೂಯಾ! ಸರ್ವಶಕ್ತ ಆಗಿರುವ ನಮ್ಮ ಕರ್ತದೇವರು ಆಳುತ್ತಾರೆ. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್6 ತನ್ನಾ ಲೊಕಾಂಚ್ಯಾ ತಾಂಡ್ಯಾ ಸರ್ಕೊ ಪಾನಿಯಾಚ್ಯಾ ದಬ್‍ದಬ್ಯಾಚ್ಯಾ ಸರ್ಕೊ ಅವಾಜ್, ಮೊಟ್ಯಾ ಗುಡ್ಗುಡ್ಯಾಚ್ಯಾ ಸರ್ಕೊ ಆವಾಜ್ ಮಿಯಾ ಆಯಿಕ್ಲೊ. ತೆನಿ, “ದೆವಾಕ್ ಹೊಗ್ಳಾಪ್! ಕಶ್ಯಾಕ್ ಮಟ್ಲ್ಯಾರ್ ಸರ್ವೆಸ್ವರ್ ಅಮ್ಚೊ ಸಗ್ಳ್ಯಾನಿಕಿ ಮೊಟೊ ದೆವ್, ರಾಜಾ ತೊ! ಅಧ್ಯಾಯವನ್ನು ನೋಡಿ |