ಪ್ರಕಟನೆ 17:15 - ಪರಿಶುದ್ದ ಬೈಬಲ್15 ನಂತರ ದೇವದೂತನು ನನಗೆ ಹೀಗೆ ಹೇಳಿದನು: “ಆ ವೇಶ್ಯೆಯು ಕುಳಿತುಕೊಳ್ಳುವ ನೀರುಗಳನ್ನು ನೀನು ನೋಡಿದೆ. ಈ ನೀರುಗಳು ಈ ಲೋಕದ ಅನೇಕ ಜನರನ್ನೂ ವಿವಿಧ ಜನಾಂಗಗಳನ್ನೂ ಪ್ರಜೆಗಳನ್ನೂ ಭಾಷೆಗಳನ್ನೂ ಸೂಚಿಸು ತ್ತವೆ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201915 ಇನ್ನೂ ಆ ದೇವದೂತನು ನನಗೆ ಹೇಳಿದ್ದೇನಂದರೆ, “ಆ ಜಾರಸ್ತ್ರೀ ಕುಳಿತ್ತಿದ್ದ ನೀರನ್ನು ನೀನು ನೋಡಿದೆಯಲ್ಲ, ಅವು ಜನಾಂಗಳನ್ನು, ಜನ ಸಮೂಹಗಳನ್ನು, ರಾಷ್ಟ್ರಗಳನ್ನು, ಭಾಷೆಗಳನ್ನು ಸೂಚಿಸುತ್ತದೆ ಎಂದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)15 ಆ ದೇವದೂತನು ಮುಂದುವರೆದು ಹೀಗೆ ನುಡಿದನು : “ಜಲರಾಶಿಗಳ ಮೇಲೆ ನಿಂತಿದ್ದ ಆ ವೇಶ್ಯೆಯನ್ನು ನೋಡಿದೆಯಲ್ಲಾ ! ಆ ಜಲರಾಶಿಯು ಜನಾಂಗಗಳನ್ನೂ ಜನಸಮೂಹವನ್ನೂ ರಾಷ್ಟ್ರಗಳನ್ನೂ ಭಾಷೆಗಳನ್ನೂ ಸೂಚಿಸುತ್ತದೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)15 ಇನ್ನೂ ಆ ದೇವದೂತನು ನನಗೆ ಹೇಳಿದ್ದು - ಆ ಜಾರಸ್ತ್ರೀಯು ವಾಸಿಸಿರುವ ನೀರುಗಳನ್ನು ಕಂಡಿಯಲ್ಲ? ಅವು ಪ್ರಜೆ ಸಮೂಹ ಜನ ಭಾಷೆಗಳನ್ನು ಸೂಚಿಸುತ್ತವೆ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ15 ಅನಂತರ ದೂತನು ನನಗೆ, “ಜಾರಸ್ತ್ರೀ ಕೂತಿದ್ದ ಕಡೆ ನೀನು ಕಂಡ ನೀರುಗಳು, ಪ್ರಜೆಗಳನ್ನೂ ಸಮೂಹಗಳನ್ನೂ ರಾಷ್ಟ್ರಗಳನ್ನೂ ಭಾಷೆಗಳನ್ನೂ ಸೂಚಿಸುತ್ತವೆ. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್15 ದೆವಾಚ್ಯಾ ದುತಾನ್ ಅಸೆಬಿ ಮಾಕಾ ಸಾಂಗಟ್ಲ್ಯಾನ್, “ತಿ ವ್ಯೆಭಿಚಾರ್ ಕರ್ತಲಿ ಬಾಯ್ಕೊಮನುಸ್ ಬಸಲ್ಲೆ ತಿಯಾ ಬಗ್ತಲೆ ಪಾನಿ ಕಾಯ್ ಮಟ್ಲ್ಯಾರ್, ದೆಶಾ, ಘರಾನ್ಯಾಚೆ ಕುಳಿಯಾ ಅನಿ ಬಾಶಾಂಚಿ ಲೊಕಾ. ಅಧ್ಯಾಯವನ್ನು ನೋಡಿ |