ಪ್ರಕಟನೆ 12:17 - ಪರಿಶುದ್ದ ಬೈಬಲ್17 ಆಗ ಘಟ ಸರ್ಪವು ಆ ಸ್ತ್ರೀಯ ಮೇಲೆ ಬಹಳ ಕೋಪಗೊಂಡು ಆಕೆಯ ಇತರ ಮಕ್ಕಳೆಲ್ಲರ ಮೇಲೆ ಅಂದರೆ ದೇವರ ಆಜ್ಞೆಗಳನ್ನು ಅನುಸರಿಸುವವರ ಮತ್ತು ಯೇಸುವಿನ ಕುರಿತು ಸಾಕ್ಷಿ ಹೇಳುವವರ ಮೇಲೆ ಹೋರಾಟ ಮಾಡಲು ಹೋಯಿತು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201917 ಆಗ ಘಟಸರ್ಪನು ಸ್ತ್ರೀಯ ಮೇಲೆ ಬಹು ಕೋಪಗೊಂಡು, ಆಕೆಯ ಸಂತಾನದವರಲ್ಲಿ ಉಳಿದವರ ಮೇಲೆ ಅಂದರೆ, ದೇವರ ಆಜ್ಞೆಗಳನ್ನು ಕೈಗೊಂಡು ನಡೆದು ಯೇಸುವಿನ ವಿಷಯವಾದ ಸಾಕ್ಷಿಯನ್ನು ಹೊಂದಿದವರ ಮೇಲೆ ಯುದ್ಧಮಾಡುವುದಕ್ಕೆ ಹೊರಟು, ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)17 ಇದರಿಂದಾಗಿ ಘಟಸರ್ಪಕ್ಕೆ ಆ ಮಹಿಳೆಯ ಮೇಲೆ ತೀವ್ರತರ ರೋಷವುಂಟಾಯಿತು. ಆಕೆಯ ಇನ್ನುಳಿದ ಸಂತತಿಯವರ ಮೇಲೆ, ಅಂದರೆ ದೇವರ ಆಜ್ಞೆಗಳನ್ನು ಅನುಸರಿಸಿ ನಡೆಯುವವರ ಮೇಲೆ ಹಾಗೂ ಯೇಸುಸ್ವಾಮಿಯ ಪರವಾಗಿ ಸಾಕ್ಷಿನೀಡುವವರ ಮೇಲೆ, ಯುದ್ಧಮಾಡಲು ಹೊರಟುಹೋಯಿತು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)17 ಆಗ ಘಟಸರ್ಪನು ಸ್ತ್ರೀಯ ಮೇಲೆ ಕೋಪಿಸಿಕೊಂಡು ಆಕೆಯ ಸಂತಾನದವರಲ್ಲಿ ಉಳಿದವರ ಮೇಲೆ ಅಂದರೆ ದೇವರ ಆಜ್ಞೆಗಳನ್ನು ಕೈಕೊಂಡು ನಡೆದು ಯೇಸುವಿನ ವಿಷಯವಾದ ಸಾಕ್ಷಿಯನ್ನು ಹೇಳಿರುವವರ ಮೇಲೆ ಯುದ್ಧ ಮಾಡುವದಕ್ಕೆ ಹೊರಟು ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ17 ಆಗ ಘಟಸರ್ಪನು ಸ್ತ್ರೀಯ ಮೇಲೆ ಬಹುಕೋಪಗೊಂಡು, ಆಕೆಯ ಸಂತಾನದವರಲ್ಲಿ ಉಳಿದವರ ಮೇಲೆ ಎಂದರೆ, ದೇವರ ಆಜ್ಞೆಗಳನ್ನು ಕೈಗೊಂಡು ನಡೆದು, ಯೇಸುವಿನ ಸಾಕ್ಷಿಯನ್ನು ಹೊಂದಿದವರ ಮೇಲೆ ಯುದ್ಧಮಾಡುವುದಕ್ಕೆ ಹೊರಟನು. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್17 ತನ್ನಾ ತೊ ಭಯಾನಕ್ ಸಾಂಪ್ ತ್ಯಾ ಭಾಯ್ಕೊಮನ್ಸಿ ವರ್ತಿ ಲೈ ರಾಗ್ ಹೊಲೊ, ಅನಿ ತೊ ತಿಚ್ಯಾ ಪಿಳ್ಗಿಚ್ಯಾ ಮಟ್ಲ್ಯಾರ್ ದೆವಾಕ್ ಖಾಲ್ತಿ ಹೊವ್ನ್ ಚಲ್ತಲ್ಯಾ, ಅನಿ ಜೆಜುಚಿ ಸಾಕ್ಷಿ ಹೊವ್ನ್ ಹೊತ್ಯಾ ಸಗ್ಳ್ಯಾ ಲೊಕಾಂಚ್ಯಾ ವಿರೊದ್ ಮಾರಾಮಾರಿ ಕರುಕ್ ಉಟಲ್ಲೊ ಹಾಯ್ . ಅಧ್ಯಾಯವನ್ನು ನೋಡಿ |
ನಂತರ ನಾನು ಕೆಲವು ಸಿಂಹಾಸನಗಳನ್ನು ಮತ್ತು ಅವುಗಳ ಮೇಲೆ ಜನರು ಕುಳಿತಿರುವುದನ್ನು ನೋಡಿದೆನು. ಈ ಜನರು ತೀರ್ಪು ನೀಡುವ ಅಧಿಕಾರವನ್ನು ಹೊಂದಿದ್ದರು. ಯೇಸುವಿನ ಸತ್ಯಕ್ಕೆ ಮತ್ತು ದೇವರ ಸಂದೇಶಕ್ಕೆ ನಂಬಿಗಸ್ತರಾಗಿದ್ದರ ನಿಮಿತ್ತವಾಗಿ ಕೊಲ್ಲಲ್ಪಟ್ಟವರ ಜೀವಾತ್ಮಗಳನ್ನು ನಾನು ನೋಡಿದೆನು. ಆ ಜನರು ಮೃಗವನ್ನಾಗಲಿ ಅದರ ವಿಗ್ರಹವನ್ನಾಗಲಿ ಆರಾಧಿಸಿರಲಿಲ್ಲ. ಅವರು ತಮ್ಮ ಹಣೆಯ ಮೇಲಾಗಲಿ ಕೈಗಳ ಮೇಲಾಗಲಿ ಮೃಗದ ಗುರುತನ್ನು ಹಾಕಿಸಿಕೊಂಡಿರಲಿಲ್ಲ. ಆ ಜನರು ಮತ್ತೆ ಜೀವವನ್ನು ಪಡೆದು ಕ್ರಿಸ್ತನೊಂದಿಗೆ ಒಂದುಸಾವಿರ ವರ್ಷ ಆಳಿದರು.
“ಉತ್ತರದ ರಾಜನು ತನ್ನ ಮನಸ್ಸಿಗೆ ಬಂದದ್ದನ್ನು ಮಾಡುವನು; ಬಡಾಯಿ ಕೊಚ್ಚಿಕೊಳ್ಳುವನು. ಅವನು ತನ್ನನ್ನು ತಾನು ಹೊಗಳಿಕೊಳ್ಳುವನು ಮತ್ತು ದೇವರಿಗಿಂತ ತಾನು ಹೆಚ್ಚಿನವನೆಂದು ಭಾವಿಸುವನು. ಅವನು ಯಾರೂ ಎಂದೂ ಕೇಳದ ಸಂಗತಿಗಳನ್ನು ಹೇಳುವನು. ಅವನು ಮಹೋನ್ನತನಾದ ದೇವರ ವಿರುದ್ಧವಾಗಿ ಅಂತಹ ಸಂಗತಿಗಳನ್ನು ಹೇಳುವನು. ಎಲ್ಲ ಕೆಟ್ಟ ಸಂಗತಿಗಳು ಜರಗುವವರೆಗೂ ಅವನು ಜಯ ಪಡೆಯುವನು. ಏನು ನಡೆಯಬೇಕೆಂದು ದೇವರು ನಿಶ್ಚಯ ಮಾಡಿರುವನೋ ಅದು ನಡೆಯುವದು.