ಪರಮಗೀತೆ 6:9 - ಪರಿಶುದ್ದ ಬೈಬಲ್9 ಆದರೆ ನನ್ನ ಪಾರಿವಾಳವೂ ನಿರ್ಮಲೆಯೂ ಒಬ್ಬಳೇ ಒಬ್ಬಳು. ಆಕೆಯು ತನ್ನ ತಾಯಿಗೆ ಅಚ್ಚುಮೆಚ್ಚಿನವಳು. ಯುವತಿಯರು ಆಕೆಯನ್ನು ಕಂಡು ಹೊಗಳುವರು. ಹೌದು, ರಾಣಿಯರೂ ಉಪಪತ್ನಿಯರೂ ಆಕೆಯನ್ನು ಹೊಗಳುವರು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20199 ನನ್ನ ಪಾರಿವಾಳವು, ನನ್ನ ನಿರ್ಮಲೆಯು ಒಬ್ಬಳೇ, ಇವಳು ಏಕಮಾತ್ರ ಪುತ್ರಿ ತಾಯಿಗೆ, ಮುದ್ದುಮಗಳು ಹೆತ್ತವಳಿಗೆ. ಧನ್ಯಳೆಂದು ಹೊಗಳಿದರು ಯುವತಿಯರು ನೋಡಿ, ರಾಣಿಯರೂ, ಉಪಪತ್ನಿಯರೂ ಕೊಂಡಾಡಿದರು ಈ ರೀತಿ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)9 ನನ್ನ ಪಾರಿವಾಳ, ನನ್ನ ನಿರ್ಮಲೆ ಇವಳೇ ಏಕಮಾತ್ರ ಪುತ್ರಿ ತಾಯಿಗೆ ಮುದ್ದುಮಗಳು ಹೆತ್ತವಳಿಗೆ. ಈಕೆ ಧನ್ಯಳೆಂದು ಹೊಗಳಿದರು ಯುವತಿಯರು ನೋಡಿ ರಾಣಿಯರು, ಉಪಪತ್ನಿಯರು ಕೊಂಡಾಡಿದರು ಈ ಪರಿ : ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)9 ನನ್ನ ಪಾರಿವಾಳವು, ನನ್ನ ನಿರ್ಮಲೆಯು, ಒಬ್ಬಳೇ, ಇವಳು ತಾಯಿಗೆ ಏಕಪುತ್ರಿಯು, ಹೆತ್ತವಳಿಗೆ ಆಪ್ತಳು. ಯುವತಿಯರು ನೋಡಿದಾಗ ಧನ್ಯಳೆಂದು ಹೇಳಿದರು. ರಾಣಿಯರೂ ಉಪಸ್ತ್ರೀಯರೂ ಕಂಡಾಗ ಹೀಗೆ ಪ್ರಶಂಸಿಸಿದರು - ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ9 ಆದರೆ ನನಗೆ ನನ್ನ ಪಾರಿವಾಳವು, ನನ್ನ ಪರಿಪೂರ್ಣಳು ಒಬ್ಬಳೇ. ಇವಳು ತನ್ನ ತಾಯಿಗೆ ಒಬ್ಬಳೇ ಮಗಳು. ತನ್ನ ಹೆತ್ತವಳಿಗೆ ಪ್ರಿಯಳು. ಕನ್ನಿಕೆಯರು ಇವಳನ್ನು ಕಂಡು ಆಶೀರ್ವದಿಸಿದರು. ಹೌದು, ರಾಣಿಯರೂ ಉಪಪತ್ನಿಯರೂ ಇವಳನ್ನು ಹೀಗೆಂದು ಹೊಗಳಿದರು: ಅಧ್ಯಾಯವನ್ನು ನೋಡಿ |