Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪರಮಗೀತೆ 1:17 - ಪರಿಶುದ್ದ ಬೈಬಲ್‌

17 ನಮ್ಮ ಮನೆಯ ತೊಲೆಗಳು ದೇವದಾರು ಮರದ ತೊಲೆಗಳು. ನಮ್ಮ ಮನೆಯ ಜಂತೆಗಳು ತುರಾಯಿ ಮರದ ಜಂತೆಗಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

17 ನಮ್ಮ ಮನೆಯ ಛಾವಣಿ ತುರಾಯಿ ಮರಗಳೇ; ತೊಲೆಗಳು ದೇವದಾರು ವೃಕ್ಷಗಳೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

17 ನಮ್ಮ ಹಾಸಿಗೆ ಪಚ್ಚೆಪಸರೇ, ನಮ್ಮ ಮೇಲ್ಛಾವಣಿ ತುರಾಯಿ ಮರಗಳೇ ಅದರ ತೊಲೆಗಳು ದೇವದಾರು ವೃಕ್ಷಗಳೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

17 ನಮ್ಮ ಮನೆಯ ತೊಲೆಗಳು ದೇವದಾರು ವೃಕ್ಷಗಳು, ಜಂತೆಗಳು ತುರಾಯಿ ಮರಗಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

17 ನಮ್ಮ ಮನೆಯ ತೊಲೆಗಳು ದೇವದಾರು ಮರಗಳು. ನಮ್ಮ ಮೇಲ್ಛಾವಣಿ ತುರಾಯಿ ಮರಗಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪರಮಗೀತೆ 1:17
13 ತಿಳಿವುಗಳ ಹೋಲಿಕೆ  

ಅಬ್ರಹಾಮನು ಶಾಶ್ವತವಾದ ಅಡಿಪಾಯಗಳುಳ್ಳ ನಗರಕ್ಕಾಗಿ ಕಾದಿದ್ದನು. ದೇವರೇ ಸಂಕಲ್ಪಿಸಿ, ನಿರ್ಮಿಸಿದ ನಗರಕ್ಕಾಗಿ ಅವನು ಕಾದಿದ್ದನು.


ನೀತಿವಂತರಾದರೋ ಯೆಹೋವನ ಆಲಯದಲ್ಲಿ ಬೆಳೆಯುತ್ತಿರುವ ಲೆಬನೋನಿನ ದೇವದಾರು ವೃಕ್ಷದಂತಿರುವರು. ನೀತಿವಂತರಾದರೋ ನಮ್ಮ ದೇವಾಲಯದ ಅಂಗಳದಲ್ಲಿ ಮೊಗ್ಗು ಬಿಡುತ್ತಿರುವ ಖರ್ಜೂರದ ಮರಗಳಂತಿರುವರು.


ಆ ಕಟ್ಟಡವು ಮೂರು ಅಂತಸ್ತಿನಷ್ಟು ಎತ್ತರವಿದ್ದು ಅದಕ್ಕೆ ಅನೇಕ ಮೇಲಂತಸ್ತುಗಳಿದ್ದವು. ಇಪ್ಪತ್ತು ಮೊಳದ ಒಳಗಿನ ಪ್ರಾಕಾರವು ಆಲಯಕ್ಕೂ ಕಟ್ಟಡಕ್ಕೂ ನಡುವೆ ಇತ್ತು. ಎದುರಿನ ಕೋಣೆಗಳು ಹೊರಗಿನ ಪ್ರಾಕಾರದ ನೆಲಗಟ್ಟಿಗೆ ಮುಖಮಾಡಿದ್ದವು.


ಗೋಡೆಗಳಿಗೆ ಮರದ ಹಲಗೆಗಳು ಹೊದಿಸಲ್ಪಟ್ಟಿದ್ದವು. ಎಲ್ಲಾ ಕಿಟಕಿ ಬಾಗಿಲುಗಳಿಗೆ ಮರದ ಹೊದಿಕೆಯಿತ್ತು. ದ್ವಾರದ ಪಕ್ಕದಲ್ಲಿ ಆಲಯದ ಗೋಡೆಗೆ ನೆಲದಿಂದ ಹಿಡಿದು ಕಿಟಕಿಯ ತನಕ ಮರದ ಹಲಗೆಯ ಹೊದಿಕೆ ಇತ್ತು.


ಆಕೆ ಕೋಟೆಯಾಗಿದ್ದರೆ ಅದರ ಮೇಲೆ ಬೆಳ್ಳಿಯ ಗೋಪುರಗಳನ್ನು ಕಟ್ಟುತ್ತಿದ್ದೆವು. ಆಕೆ ಬಾಗಿಲಾಗಿದ್ದರೆ, ಶ್ರೇಷ್ಠವಾದ ದೇವದಾರು ಮರದ ಹಲಗೆಗಳಿಂದ ಅದನ್ನು ಹೊದಿಸುತ್ತಿದ್ದೆವು.


ನಿನ್ನ ತಲೆಯು ಕರ್ಮೆಲ್ ಬೆಟ್ಟದಂತಿದೆ. ನಿನ್ನ ತಲೆಕೂದಲು ರೇಷ್ಮೆಯಂತಿದೆ. ನಿನ್ನ ಉದ್ದವಾದ, ಸುಂದರವಾದ ಕೂದಲು ರಾಜನನ್ನು ಸಹ ಆಕರ್ಷಿಸುತ್ತದೆ!


ಸೊಲೊಮೋನನು ದೇವಾಲಯದ ನಿರ್ಮಾಣವನ್ನು ಮುಗಿಸಿದನು. ದೇವಾಲಯದೊಳಗಿನ ಪ್ರತಿಯೊಂದು ಭಾಗವನ್ನು ದೇವದಾರು ಮರದ ಹಲಗೆಗಳಿಂದ ಹೊದಿಸಿದನು.


ಸೊಲೊಮೋನನು ದೇವಾಲಯದ ಸುತ್ತಲಿನ ಕೊಠಡಿಗಳ ನಿರ್ಮಾಣವನ್ನೂ ಮುಗಿಸಿದನು. ಒಂದೊಂದು ಅಂತಸ್ತು ಏಳೂವರೆ ಅಡಿಗಳಷ್ಟು ಎತ್ತರವಾಗಿತ್ತು. ಈ ಕೊಠಡಿಗಳ ದೇವದಾರು ತೊಲೆಗಳು ದೇವಾಲಯವನ್ನು ಸ್ಪರ್ಶಿಸುತ್ತ್ತಿದ್ದವು.


ದೊಡ್ಡ ಕೋಣೆಯ ಗೋಡೆಗೆ ಸೊಲೊಮೋನನು ತುರಾಯಿ ಮರದ ಹಲಗೆಗಳಿಂದ ಹೊದಿಸಿ ಅದರ ಮೇಲೆ ಬಂಗಾರದ ತಗಡನ್ನು ಹೊದಿಸಿದನು. ಅದರಲ್ಲಿ ಖರ್ಜೂರ ಮರಗಳೂ ಸರಪಣಿಗಳೂ ಬಂಗಾರದಿಂದ ಮಾಡಲ್ಪಟ್ಟು ಜೋಡಿಸಲ್ಪಟ್ಟಿದ್ದವು.


“ಯೆಹೋಯಾಕೀಮನು, ‘ನಾನೇ ಒಂದು ದೊಡ್ಡ ಅರಮನೆಯನ್ನು ಕಟ್ಟಿಸುತ್ತೇನೆ. ನಾನು ಮಹಡಿಯ ಮೇಲೆ ದೊಡ್ಡದೊಡ್ಡ ಕೋಣೆಗಳನ್ನು ಕಟ್ಟಿಸುತ್ತೇನೆ’ ಎಂದು ಹೇಳುತ್ತಾನೆ. ಅವನು ದೊಡ್ಡದೊಡ್ಡ ಕಿಟಕಿಗಳುಳ್ಳ ಮನೆಯನ್ನು ಕಟ್ಟಿಸುತ್ತಾನೆ. ದೇವದಾರಿನ ಹಲಗೆಗಳನ್ನು ಹೊದಿಸುತ್ತಾನೆ. ಅದಕ್ಕೆ ಕೆಂಪು ಬಣ್ಣವನ್ನು ಬಳಿಯುತ್ತಾನೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು