Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ನ್ಯಾಯಸ್ಥಾಪಕರು 9:18 - ಪರಿಶುದ್ದ ಬೈಬಲ್‌

18 ಆದರೆ ನೀವು ಈಗ ನಮ್ಮ ತಂದೆಯ ಕುಟುಂಬದವರನ್ನು ವಿರೋಧಿಸುತ್ತಿದ್ದೀರಿ. ನೀವು ನಮ್ಮ ತಂದೆಯ ಎಪ್ಪತ್ತು ಮಕ್ಕಳನ್ನು ಏಕಕಾಲದಲ್ಲಿ ಕೊಲೆಮಾಡಿದ್ದೀರಿ. ನೀವು ಅಬೀಮೆಲೆಕನನ್ನು ಶೆಕೆಮಿನ ಅರಸನನ್ನಾಗಿ ಮಾಡಿದ್ದೀರಿ. ಅವನು ನಿಮ್ಮ ರಕ್ತ ಸಂಬಂಧಿ ಎಂಬ ಕಾರಣದಿಂದ ಅವನನ್ನು ಅರಸನನ್ನಾಗಿ ಮಾಡಿದ್ದೀರಿ. ಆದರೆ ಅವನು ಕೇವಲ ನಮ್ಮ ತಂದೆಯ ದಾಸಿ ಪುತ್ರ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

18 ಆದರೆ ನೀವು ಈಗ ನನ್ನ ತಂದೆಯ ಮನೆಗೆ ವಿರೋಧವಾಗಿ ನಿಂತು, ಅವನ ಎಪ್ಪತ್ತು ಮಂದಿ ಮಕ್ಕಳನ್ನು ಒಂದೇ ಬಂಡೆಯ ಮೇಲೆ ವಧಿಸಿ, ಅವನ ದಾಸಿಯ ಮಗನಾದ ಅಬೀಮೆಲೆಕನನ್ನು ನಮ್ಮ ಬಂಧುವೆಂದು ಹೇಳಿ, ಶೆಕೆಮಿನ ಅರಸನನ್ನಾಗಿ ಮಾಡಿಕೊಂಡಿದ್ದೀರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

18 ಆದರೆ ನೀವು ಈಗ ನನ್ನ ತಂದೆಯ ಮನೆಗೆ ವಿರೋಧವಾಗಿ ನಿಂತು ಅವನ ಎಪ್ಪತ್ತು ಮಂದಿ ಮಕ್ಕಳನ್ನು ಒಂದೇ ಬಂಡೆಯ ಮೇಲೆ ವಧಿಸಿದ ಅವನ ದಾಸಿಯ ಮಗನಾದ ಅಬೀಮೆಲೆಕನನ್ನು ನಿಮ್ಮ ಬಂಧುವೆಂದು ಹೇಳಿ ಶೆಕೆಮಿನ ಅರಸನನ್ನಾಗಿ ಮಾಡಿಕೊಂಡಿದ್ದೀರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

18 ಆದರೆ ನೀವು ಈಗ ನನ್ನ ತಂದೆಯ ಮನೆಗೆ ವಿರೋಧವಾಗಿ ನಿಂತು ಅವನ ಎಪ್ಪತ್ತು ಮಂದಿ ಮಕ್ಕಳನ್ನು ಒಂದೇ ಬಂಡೆಯ ಮೇಲೆ ವಧಿಸಿ ಅವನ ದಾಸಿಯ ಮಗನಾದ ಅಬೀಮೆಲೆಕನನ್ನು ನಮ್ಮ ಬಂಧುವೆಂದು ಹೇಳಿ ಶೆಕೆವಿುನ ಅರಸನನ್ನಾಗಿ ಮಾಡಿಕೊಂಡಿದ್ದೀರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

18 ನೀವು ಈ ಹೊತ್ತು ನನ್ನ ತಂದೆಯ ಮನೆಗೆ ವಿರೋಧವಾಗಿ ಎದ್ದು, ಅವನ ಎಪ್ಪತ್ತು ಮಕ್ಕಳನ್ನು ಒಂದೇ ಬಂಡೆ ಮೇಲೆ ಕೊಂದು, ಅವನ ದಾಸಿಯ ಮಗನಾದ ಅಬೀಮೆಲೆಕನನ್ನು, ಅವನು ನಿಮ್ಮ ಸಹೋದರನಾಗಿರುವುದರಿಂದ ಶೆಕೆಮಿನ ಜನರ ಮೇಲೆ ಅರಸನಾಗಿ ಇಟ್ಟದ್ದು,

ಅಧ್ಯಾಯವನ್ನು ನೋಡಿ ನಕಲು ಮಾಡಿ




ನ್ಯಾಯಸ್ಥಾಪಕರು 9:18
8 ತಿಳಿವುಗಳ ಹೋಲಿಕೆ  

ನಾನು ಅವರನ್ನು ಪ್ರೀತಿಸಿದರೂ ಅವರು ನನ್ನನ್ನು ದ್ವೇಷಿಸುವರು. ನಾನಾದರೋ ನಿನಗೆ ಪ್ರಾರ್ಥಿಸುತ್ತಿದ್ದೇನೆ.


“ಕೊನೆಗೆ ಎಲ್ಲ ಮರಗಳು ಮುಳ್ಳುಪೊದೆಗೆ, ‘ನೀನು ಬಂದು ನಮ್ಮ ಅರಸನಾಗು’ ಎಂದು ಕೇಳಿದವು.


ಯೆರುಬ್ಬಾಳನು ಅನೇಕ ಸತ್ಕಾರ್ಯಗಳನ್ನು ಮಾಡಿದರೂ ಸಹ ಇಸ್ರೇಲರು ಅವನ ಕುಟುಂಬದವರಿಗೆ ಕೃತಜ್ಞತೆಯುಳ್ಳವರಾಗಿರಲಿಲ್ಲ.


ಶೆಕೆಮಿನ ಹಿರಿಯರಿಗೆ, “‘ಯೆರುಬ್ಬಾಳನ ಎಪ್ಪತ್ತು ಮಂದಿ ಮಕ್ಕಳು ನಿಮ್ಮನ್ನು ಆಳುವುದು ಒಳ್ಳೆಯದೋ ಅಥವಾ ನಾನೊಬ್ಬನೇ ನಿಮ್ಮನ್ನು ಆಳುವುದು ಒಳ್ಳೆಯದೋ’ ಎಂಬ ಪ್ರಶ್ನೆಯನ್ನು ಕೇಳಿದ್ದಲ್ಲದೆ ನಾನು ನಿಮ್ಮ ರಕ್ತಸಂಬಂಧಿ ಎಂಬುದನ್ನು ನೆನಪಿಡಿ” ಎಂದು ಹೇಳಿದನು.


ಆದರೆ ನಿಮಗೆ ನಮ್ಮ ತಂದೆಯು ಏನು ಮಾಡಿದನೆಂಬುದನ್ನು ಯೋಚಿಸಿರಿ. ನಮ್ಮ ತಂದೆಯು ನಿಮಗೋಸ್ಕರ ಯುದ್ಧ ಮಾಡಿದನು. ಅವನು ಮಿದ್ಯಾನ್ಯರಿಂದ ನಿಮ್ಮನ್ನು ರಕ್ಷಿಸಲು ತನ್ನ ಜೀವವನ್ನು ಅಪಾಯಕ್ಕೆ ಒಡ್ಡಿದನು.


ನೀವು ಇಂದು ಯೆರುಬ್ಬಾಳನಿಗೂ ಅವನ ಮನೆಯವರಿಗೂ ಮಾಡಿದ್ದು ನ್ಯಾಯವೂ ಧರ್ಮವೂ ಆಗಿದ್ದರೆ ನೀವು ಅಬೀಮೆಲೆಕನನ್ನು ನಿಮ್ಮ ಅರಸನೆಂದು ಒಪ್ಪಿ ಸಂತೋಷದಿಂದ ಇದ್ದುಬಿಡಿ. ಅವನೂ ನಿಮ್ಮ ಜೊತೆ ಸಂತೋಷದಿಂದ ಇರಲಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು