ನ್ಯಾಯಸ್ಥಾಪಕರು 9:15 - ಪರಿಶುದ್ದ ಬೈಬಲ್15 “ಆ ಮುಳ್ಳುಪೊದೆಯು, ‘ನೀವು ನಿಜವಾಗಿಯೂ ನನ್ನನ್ನು ನಿಮ್ಮ ಅರಸನನ್ನಾಗಿ ಮಾಡಬೇಕೆಂದು ಇಚ್ಛೆಪಟ್ಟರೆ, ನೀವು ಬಂದು ನನ್ನ ನೆರಳಿನಲ್ಲಿ ಆಶ್ರಯಪಡೆಯಿರಿ; ನೀವು ಹೀಗೆ ಮಾಡಲು ಒಪ್ಪದಿದ್ದರೆ ನನ್ನಿಂದ ಬೆಂಕಿ ಹೊರಡಲಿ. ಆ ಬೆಂಕಿಯು ಲೆಬನೋನಿನ ದೇವದಾರು ವೃಕ್ಷಗಳನ್ನು ದಹಿಸಿಬಿಡಲಿ’ ಎಂದಿತು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201915 ಅದು, ‘ನೀವು ಯಥಾರ್ಥಮನಸ್ಸಿನಿಂದ ನನಗೆ ರಾಜ್ಯಾಭಿಷೇಕ ಮಾಡಬೇಕೆಂದಿರುವುದಾದರೆ ಬಂದು ನನ್ನ ನೆರಳನ್ನು ಆಶ್ರಯಿಸಿಕೊಳ್ಳಿರಿ; ಇಲ್ಲವಾದರೆ ನನ್ನಿಂದ ಬೆಂಕಿಹೊರಟು ಲೆಬನೋನಿನ ದೇವದಾರು ವೃಕ್ಷಗಳನ್ನು ದಹಿಸಿಬಿಡುವುದು’ ಎಂದಿತು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)15 ಅದಕ್ಕೆ ಆ ಪೊದೆ, ‘ನೀವು ನಿಜವಾದ ಮನಸ್ಸಿನಿಂದ ನನಗೆ ರಾಜ್ಯಾಭಿಷೇಕ ಮಾಡಬೇಕೆಂದಿರುವುದಾದರೆ, ಬನ್ನಿ, ಬಂದು ನನ್ನಿಂದ ಬೆಂಕಿಹೊರಟು ಲೆಬನೋನಿನ ದೇವದಾರುವೃಕ್ಷಗಳನ್ನು ಸುಟ್ಟುಬಿಡುವುದು,’ ಎಂದುಬಿಟ್ಟಿತು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)15 ಅದು - ನೀವು ಯಥಾರ್ಥಮನಸ್ಸಿನಿಂದ ನನಗೆ ರಾಜ್ಯಾಭಿಷೇಕ ಮಾಡಬೇಕೆಂದಿರುವದಾದರೆ ಬಂದು ನನ್ನ ನೆರಳನ್ನು ಆಶ್ರಯಿಸಿಕೊಳ್ಳಿರಿ; ಇಲ್ಲವಾದರೆ ನನ್ನಿಂದ ಬೆಂಕಿಹೊರಟು ಲೆಬನೋನಿನ ದೇವದಾರುವೃಕ್ಷಗಳನ್ನು ದಹಸಿಬಿಡುವದು ಎಂದಿತು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ15 “ಮುಳ್ಳಿನ ಗಿಡವು ಮರಗಳಿಗೆ, ‘ನೀವು ನನ್ನನ್ನು ಅರಸನನ್ನಾಗಿ ಅಭಿಷೇಕ ಮಾಡುವುದು ಸತ್ಯವಾದರೆ, ನನ್ನ ನೆರಳಲ್ಲಿ ಬಂದು ಆಶ್ರಯಿಸಿಕೊಳ್ಳಿರಿ; ಇಲ್ಲದಿದ್ದರೆ ಮುಳ್ಳಿನ ಗಿಡದಿಂದ ಬೆಂಕಿ ಹೊರಟು, ಲೆಬನೋನಿನ ದೇವದಾರುಗಳು ದಹಿಸಿಬಿಡಲಿ,’ ಎಂದಿತು. ಅಧ್ಯಾಯವನ್ನು ನೋಡಿ |
ನನ್ನ ಒಡೆಯನಾದ ಯೆಹೋವನನ್ನು ತುಚ್ಛೀಕರಿಸಲಿಕ್ಕೆ ನೀನು ನಿನ್ನ ಅಧಿಕಾರಿಯನ್ನು ಕಳುಹಿಸಿದೆ. “ನನ್ನಲ್ಲಿ ಬಲ ಸಾಮರ್ಥ್ಯಗಳಿವೆ; ನನ್ನಲ್ಲಿ ಅನೇಕಾನೇಕ ರಥಗಳಿವೆ. ನನ್ನ ಬಲದಿಂದ ನಾನು ಲೆಬನೋನನ್ನು ಸೋಲಿಸಿದೆ. ಲೆಬನೋನಿನ ಉನ್ನತ ಶಿಖರಗಳನ್ನು ನಾನು ಏರಿದೆನು. ಲೆಬನೋನಿನ ಎತ್ತರವಾದ ದೇವದಾರು ಮರಗಳನ್ನೂ ಶ್ರೇಷ್ಠವಾದ ತುರಾಯಿ ಮರಗಳನ್ನೂ (ಸೈನ್ಯ) ನಾನು ಕಡಿದುಹಾಕಿದೆನು. ನಾನು ಅತ್ಯುನ್ನತ ಶಿಖರಕ್ಕೂ ದಟ್ಟವಾದ ಕಾಡಿನೊಳಗೂ ಹೋಗಿದ್ದೇನೆ.