ನ್ಯಾಯಸ್ಥಾಪಕರು 5:12 - ಪರಿಶುದ್ದ ಬೈಬಲ್12 “ಏಳು, ಏಳು ದೆಬೋರಳೇ! ಏಳು, ಎದ್ದೇಳು, ಒಂದು ಗೀತೆಯನ್ನು ಹಾಡು! ಬಾರಾಕನೇ, ಏಳು! ಅಬೀನೋವಮನ ಮಗನೇ, ಹೋಗು; ನಿನ್ನ ಶತ್ರುಗಳನ್ನು ಸೆರೆ ಹಿಡಿದುಕೊ! ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201912 ‘ಎಚ್ಚರವಾಗು, ದೆಬೋರಳೇ! ಎಚ್ಚರವಾಗು, ಎಚ್ಚರವಾಗು, ಎಚ್ಚರವಾಗಿ ಗಾನಮಾಡು. ಬಾರಾಕನೇ, ಏಳು; ಅಬೀನೋವಮನ ಮಗನೇ, ನೀನು ಸೆರೆಹಿಡಿದವರನ್ನು ಸಾಗಿಸಿಕೊಂಡು ಹೋಗು.’ ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)12 ಎಚ್ಚರಗೊಳ್ಳು, ಎಚ್ಚರಗೊಳ್ಳು, ದೆಬೋರಾ, ಎಚ್ಚರಗೊಳ್ಳು, ಎಚ್ಚರಗೊಳ್ಳು, ಮಾಡು ನೀ ಗುಣಗಾನ, ಬಾರಾಕನೇ, ಏಳು; ಅಬೀನೋವಮನ ಮಗನೇ, ಏಳು, ಸೆರೆಹಿಡಿದವರನು ನೀ ಸಾಗಿಸಿಕೊಂಡು ಹೋಗು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)12 ಎಚ್ಚರವಾಗು, ದೆಬೋರಳೇ, ಎಚ್ಚರವಾಗು; ಎಚ್ಚರವಾಗು, ಎಚ್ಚರವಾಗಿ ಗಾನ ಮಾಡು. ಬಾರಾಕನೇ, ಏಳು; ಅಬೀನೋವಮನ ಮಗನೇ, ನೀನು ಸೆರೆಹಿಡಿದವರನ್ನು ಸಾಗಿಸಿಕೊಂಡು ಹೋಗು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ12 ‘ಎಚ್ಚರವಾಗು, ಎಚ್ಚರವಾಗು, ದೆಬೋರಳೇ, ಎಚ್ಚರವಾಗು, ಎಚ್ಚರವಾಗಿ ಹಾಡನ್ನು ಹಾಡು; ಬಾರಾಕನೇ, ಏಳು; ಅಬೀನೋವಮನ ಮಗನೇ, ನಿನ್ನನ್ನು ಸೆರೆಹಿಡಿದವರನ್ನು ಸೆರೆಯಾಗಿ ನಡೆಸು.’ ಅಧ್ಯಾಯವನ್ನು ನೋಡಿ |
ನೀವು ಯುದ್ಧಮಾಡಿ ಇತರರಿಂದ ಸುಲಿದುಕೊಳ್ಳುತ್ತೀರಿ. ಆದರೆ ಅವರು ನಿಮ್ಮಿಂದ ಏನೂ ಕದ್ದುಕೊಳ್ಳಲಿಲ್ಲ. ನೀವು ಜನರಿಗೆ ವಿರುದ್ಧವಾಗಿ ತಿರುಗುತ್ತೀರಿ. ಆದರೆ ಅವರು ನಿಮಗೆ ವಿರುದ್ಧವಾಗಲಿಲ್ಲ. ಆದ್ದರಿಂದ ನೀವು ಕದ್ದುಕೊಳ್ಳುವದನ್ನು ಬಿಟ್ಟಾಗ ಇತರರು ನಿಮ್ಮದನ್ನು ಕದ್ದುಕೊಳ್ಳುತ್ತಾರೆ. ನೀವು ಇತರರಿಗೆ ಹಾನಿ ಮಾಡುವದನ್ನು ನಿಲ್ಲಿಸಿದಾಗ ಇತರರು ನಿಮಗೆ ಹಾನಿ ಮಾಡುವರು. ಆಗ ನೀವು ಹೀಗೆ ಹೇಳುವಿರಿ: