Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ನ್ಯಾಯಸ್ಥಾಪಕರು 4:14 - ಪರಿಶುದ್ದ ಬೈಬಲ್‌

14 ಆಗ ದೆಬೋರಳು ಬಾರಾಕನಿಗೆ, “ಈ ದಿನ ಯೆಹೋವನು ಸೀಸೆರನನ್ನು ಸೋಲಿಸಲು ನಿನಗೆ ಸಹಾಯ ಮಾಡುತ್ತಾನೆ. ಯೆಹೋವನು ನಿನಗಾಗಿ ದಾರಿಯನ್ನು ಸುಗಮಗೊಳಿಸಿದ್ದಾನೆಂಬುದು ನಿನಗೆ ಖಚಿತವಾಗಿ ಗೊತ್ತಿದೆ” ಎಂದು ಹೇಳಿದಳು. ಆದ್ದರಿಂದ ಬಾರಾಕನು ಹತ್ತು ಸಾವಿರ ಜನರೊಂದಿಗೆ ತಾಬೋರ್ ಬೆಟ್ಟದಿಂದ ಇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

14 ಆಗ ದೆಬೋರಳು ಬಾರಾಕನಿಗೆ, “ಏಳು, ಯೆಹೋವನು ಸೀಸೆರನನ್ನು ನಿನ್ನ ಕೈಗೆ ಒಪ್ಪಿಸುವ ದಿನವು ಇಂದೇ. ನಿಶ್ಚಯವಾಗಿ ಆತನು ತಾನೇ ನಿನಗೆ ಮುಂದಾಗಿ ಯುದ್ಧಕ್ಕೆ ಹೊರಡುವನು” ಅನ್ನಲು ಬಾರಾಕನು ಬೇಗನೆ ಹತ್ತು ಸಾವಿರ ಜನರ ಸಹಿತವಾಗಿ ತಾಬೋರ್ ಬೆಟ್ಟದಿಂದ ಇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

14 ಆಗ ದೆಬೋರಳು ಬಾರಾಕನಿಗೆ, “ಏಳು, ಸರ್ವೇಶ್ವರ ಸೀಸೆರನನ್ನು ನಿನ್ನ ಕೈಗೆ ಒಪ್ಪಿಸುವ ದಿನ ಇದೇ; ನಿಶ್ಚಯವಾಗಿ ಅವರು ತಾವೇ ನಿನ್ನ ಮುಂದಾಗಿ ಯುದ್ಧಕ್ಕೆ ಹೊರಡುವರು,” ಎಂದಳು. ಬಾರಾಕನು ಬೇಗನೆ ಹತ್ತು ಸಾವಿರ ಜನರ ಸಹಿತ ತಾಬೋರ್ ಬೆಟ್ಟದಿಂದಿಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

14 ಆಗ ದೆಬೋರಳು ಬಾರಾಕನಿಗೆ - ಏಳು, ಯೆಹೋವನು ಸೀಸೆರನನ್ನು ನಿನ್ನ ಕೈಗೆ ಒಪ್ಪಿಸುವ ದಿನವು ಇದೇ; ನಿಶ್ಚಯವಾಗಿ ಆತನು ತಾನೇ ನಿನ್ನ ಮುಂದಾಗಿ ಯುದ್ಧಕ್ಕೆ ಹೊರಡುವನು ಅನ್ನಲು ಬಾರಾಕನು ಬೇಗನೆ ಹತ್ತು ಸಾವಿರ ಜನರ ಸಹಿತವಾಗಿ ತಾಬೋರ್ ಬೆಟ್ಟದಿಂದಿಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

14 ಆಗ ದೆಬೋರಳು ಬಾರಾಕನಿಗೆ, “ನೀನು ಏಳು. ಏಕೆಂದರೆ ಯೆಹೋವ ದೇವರು ಸೀಸೆರನನ್ನು ನಿನ್ನ ಕೈಯಲ್ಲಿ ಒಪ್ಪಿಸಿಕೊಡುವ ದಿನವು ಇದೇ. ಯೆಹೋವ ದೇವರು ನಿನ್ನ ಮುಂದೆ ಹೊರಡಲಿಲ್ಲವೋ?” ಎಂದಳು. ಹೀಗೆ ಬಾರಾಕನು ತನ್ನ ಹಿಂದೆ ಹತ್ತು ಸಾವಿರ ಜನರನ್ನು ತೆಗೆದುಕೊಂಡು, ತಾಬೋರ್ ಬೆಟ್ಟದಿಂದ ಇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ನ್ಯಾಯಸ್ಥಾಪಕರು 4:14
13 ತಿಳಿವುಗಳ ಹೋಲಿಕೆ  

ಮರಗಳ ತುದಿಯಲ್ಲಿರುವ ನಿಮಗೆ ಫಿಲಿಷ್ಟಿಯರು ಯುದ್ಧಕ್ಕೆ ಹೊರಡುವುದು ಕೇಳಿಸುತ್ತದೆ. ಆಗ ನೀನು ತ್ವರಿತಗತಿಯಿಂದ ಕಾರ್ಯನಿರತನಾಗು. ಆಗ ಯೆಹೋವನಾದ ನಾನು ನಿನಗಾಗಿ ಅದೇ ಸಮಯದಲ್ಲಿ ಫಿಲಿಷ್ಟಿಯರನ್ನು ಸೋಲಿಸಲು ನಿಮ್ಮ ಮುಂದೆ ನಾನು ಹೋಗುತ್ತೇನೆ” ಎಂದು ಹೇಳಿದನು.


ಆದರೆ ನಿಮ್ಮ ದೇವರಾದ ಯೆಹೋವನು ನಿಮ್ಮ ಮುಂದೆ ನದಿಯನ್ನು ದಾಟುತ್ತಾನೆಂಬುದು ನಿಮಗೆ ನಿಶ್ಚಯವಾಗಿ ತಿಳಿದಿರಲಿ. ಆತನು ದಹಿಸುವ ಬೆಂಕಿಯಂತಿದ್ದಾನೆ. ಆತನು ಆ ಜನಾಂಗಗಳನ್ನು ಬೇಗನೆ ನಾಶಪಡಿಸುವನು; ನಿಮ್ಮ ಎದುರಿನಲ್ಲಿ ಅವರು ಬಿದ್ದುಹೋಗುವಂತೆ ಮಾಡುವನು. ಇದು ನೆರವೇರುವುದಾಗಿ ಯೆಹೋವನೇ ನಿಮಗೆ ವಾಗ್ದಾನ ಮಾಡಿದ್ದಾನೆ.


ನೀವು ಬಾಬಿಲೋನಿನಿಂದ ಹೊರಗೆ ಬರುವಿರಿ. ತ್ವರೆಪಟ್ಟು ಬರುವಂತೆ ಅವರು ಬಲವಂತ ಮಾಡುವದಿಲ್ಲ. ನೀವು ಓಡಿ ಹೋಗುವಂತೆ ಅವರು ಒತ್ತಾಯಪಡಿಸುವದಿಲ್ಲ. ನೀವು ಹೊರಗೆ ನಡೆಯುವಿರಿ. ಯೆಹೋವನು ನಿಮ್ಮೊಂದಿಗೆ ನಡೆಯುವನು. ಯೆಹೋವನು ನಿಮ್ಮ ಮುಂದೆ ಇರುವನು. ಇಸ್ರೇಲರ ದೇವರು ನಿಮ್ಮ ಹಿಂದೆಯೂ ಇರುವನು.


ಆಗ ಒಡೆದುಹಾಕುವವನು ಜನಗಳ ಮುಂದೆ ಮುನ್ನುಗ್ಗಿ ಹೋಗಿ, ದ್ವಾರಗಳನ್ನು ಒಡೆದುಹಾಕಿದಾಗ ಜನರು ಪಟ್ಟಣವನ್ನು ಬಿಟ್ಟುಹೋಗುವರು. ಅವರು ತಮ್ಮ ರಾಜನನ್ನೂ ಕರ್ತನನ್ನೂ ಹಿಂಬಾಲಿಸಿಕೊಂಡು ಅಲ್ಲಿಂದ ಹೋಗುವರು.


ಮಾರನೆಯ ದಿನ ಬೆಳಗಿನ ಜಾವ, ಸಮುವೇಲನು ಮಾಳಿಗೆಯ ಮೇಲೆ ಮಲಗಿದ್ದ ಸೌಲನನ್ನು ಎಬ್ಬಿಸಿ, “ಎದ್ದೇಳು, ನಿನ್ನನ್ನು ಕಳುಹಿಸಿಕೊಡುತ್ತೇನೆ” ಎಂದು ಹೇಳಿದನು. ಸೌಲನು ಮೇಲೆದ್ದನು ಮತ್ತು ಸಮುವೇಲನೊಂದಿಗೆ ಮನೆಯಿಂದ ಹೊರಗೆ ಹೊರಟನು.


ಆಗ ಲೇವಿಯು ಅವಳಿಗೆ, “ಏಳು, ಹೋಗೋಣ” ಎಂದು ಎಬ್ಬಿಸಿದನು. ಆದರೆ ಅವಳು ಉತ್ತರಕೊಡಲಿಲ್ಲ. ಅವಳು ಸತ್ತುಹೋಗಿದ್ದಳು. ಆ ಲೇವಿಯು, ಅವಳನ್ನು ತನ್ನ ಕತ್ತೆಯ ಮೇಲೆ ಹೇರಿಕೊಂಡು ತನ್ನ ಮನೆಗೆ ಹೋದನು.


“ಈಗ ಹೋಗಿ ಜನರನ್ನು ಶುದ್ಧಗೊಳಿಸು, ನೀನು ಜನರಿಗೆ, ‘ನೀವು ನಿಮ್ಮನ್ನು ಶುದ್ಧಿಗೊಳಿಸಿಕೊಳ್ಳಿರಿ, ನಾಳೆಗಾಗಿ ಸಿದ್ಧರಾಗಿರಿ, ಇಸ್ರೇಲಿನ ದೇವರಾದ ಯೆಹೋವನು ನಾಶಪಡಿಸಬೇಕೆಂದು ಆಜ್ಞಾಪಿಸಿದ ವಸ್ತುಗಳನ್ನು ಕೆಲ ಜನರು ಇಟ್ಟುಕೊಂಡಿದ್ದಾರೆಂದು ಹೇಳುತ್ತಾನೆ. ನೀವು ಆ ವಸ್ತುಗಳನ್ನು ಬಿಸಾಡುವವರೆಗೆ ನಿಮಗೆ ನಿಮ್ಮ ಶತ್ರುಗಳನ್ನು ಸೋಲಿಸಲು ಎಂದಿಗೂ ಸಾಧ್ಯವಿಲ್ಲ.


ಅವರು ನಗರವನ್ನು ಬಿಟ್ಟುಹೋದ ಮೇಲೆ, ಯೋಸೇಫನು ತನ್ನ ಸೇವಕನಿಗೆ, “ಹೋಗು, ಆ ಜನರನ್ನು ಹಿಂಬಾಲಿಸು. ಅವರನ್ನು ತಡೆದು ಅವರಿಗೆ, ‘ನಾವು ನಿಮಗೆ ಒಳ್ಳೆಯವರಾಗಿದ್ದೆವು; ಆದರೆ ನೀವು ನಮಗೇಕೆ ಕೆಟ್ಟದ್ದನ್ನು ಮಾಡಿದಿರಿ? ನನ್ನ ಒಡೆಯನ ಬೆಳ್ಳಿ ಬಟ್ಟಲನ್ನು ನೀವೇಕೆ ಕದ್ದುಕೊಂಡು ಬಂದಿರಿ?


ಆದ್ದರಿಂದ ಲೋಟನು ಹೊರಗೆ ಹೋಗಿ, ತನ್ನ ಹೆಣ್ಣುಮಕ್ಕಳೊಡನೆ ನಿಶ್ಚಿತಾರ್ಥವಾಗಿದ್ದ ಅಳಿಯಂದಿರೊಡನೆ ಮಾತಾಡಿ, “ಬೇಗನೆ ಈ ಪಟ್ಟಣವನ್ನು ಬಿಟ್ಟು ಹೊರಡಿರಿ; ಯೆಹೋವನು ಈ ಪಟ್ಟಣವನ್ನು ನಾಶಮಾಡುವನು” ಎಂದು ಹೇಳಿದನು. ಲೋಟನ ಈ ಮಾತು ಅವರಿಗೆ ತಮಾಷೆಯಂತೆ ಕಂಡಿತು.


ಕೆದೆಷ್ ನಗರದಲ್ಲಿ ಬಾರಾಕನು ಜೆಬುಲೂನ್ ಮತ್ತು ನಫ್ತಾಲಿ ಕುಲದವರನ್ನು ಒಟ್ಟಿಗೆ ಸೇರಿಸಿ ಆ ಕುಲಗಳಿಂದ ಹತ್ತು ಸಾವಿರ ಜನರನ್ನು ತನ್ನೊಂದಿಗೆ ಬರುವಂತೆ ಮಾಡಿದನು. ದೆಬೋರಳು ಸಹ ಬಾರಾಕನ ಸಂಗಡ ಹೋದಳು.


ಯೆಹೋವನು ಯೆಹೋಶುವನಿಗೆ, “ಆ ಸೈನ್ಯಗಳಿಗೆ ಹೆದರಬೇಡ, ನೀನು ಅವರನ್ನು ಸೋಲಿಸುವಂತೆ ಮಾಡುತ್ತೇನೆ. ಆ ಸೈನ್ಯದ ಯಾರೊಬ್ಬರೂ ನಿನ್ನನ್ನು ಸೋಲಿಸಲು ಸಾಧ್ಯವಿಲ್ಲ” ಎಂದು ಹೇಳಿದನು.


ಅಂದು ರಾತ್ರಿ ಯೆಹೋವನು ಗಿದ್ಯೋನನಿಗೆ, “ಏಳು, ನೀನು ಮಿದ್ಯಾನ್ಯರ ಸೈನ್ಯವನ್ನು ಸೋಲಿಸುವಂತೆ ಮಾಡುತ್ತೇನೆ. ಅವರ ಪಾಳೆಯಕ್ಕೆ ಹೋಗು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು