Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ನ್ಯಾಯಸ್ಥಾಪಕರು 3:21 - ಪರಿಶುದ್ದ ಬೈಬಲ್‌

21 ಅರಸನು ತನ್ನ ಸಿಂಹಾಸನದಿಂದ ಎದ್ದುನಿಂತಾಗ ಏಹೂದನು ತನ್ನ ಎಡಗೈಯನ್ನು ಚಾಚಿ ತನ್ನ ಬಲತೊಡೆಗೆ ಕಟ್ಟಿದ್ದ ಕತ್ತಿಯನ್ನು ಹೊರತೆಗೆದನು. ಏಹೂದನು ಆ ಖಡ್ಗವನ್ನು ಅರಸನ ಹೊಟ್ಟೆಗೆ ತಿವಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

21 ಆಗ ಏಹೂದನು ಎಡಗೈ ಚಾಚಿ ಬಲಗಡೆಯ ಸೊಂಟಕ್ಕೆ ಕಟ್ಟಿದ್ದ ಕತ್ತಿಯನ್ನು ಹಿರಿದು ಅವನ ಹೊಟ್ಟೆಯಲ್ಲಿ ತಿವಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

21 ಆಗ ಏಹೂದನು ಎಡಗೈ ಚಾಚಿ, ಬಲಗಡೆಯ ಸೊಂಟಕ್ಕೆ ಕಟ್ಟಿದ್ದ ಕತ್ತಿಯನ್ನು ಹಿರಿದು ಅವನ ಹೊಟ್ಟೆಯನ್ನು ತಿವಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

21 ಆಗ ಏಹೂದನು ಎಡಗೈ ಚಾಚಿ ಬಲಗಡೆಯ ಸೊಂಟಕ್ಕೆ ಕಟ್ಟಿದ್ದ ಕತ್ತಿಯನ್ನು ಹಿರಿದು ಅವನ ಹೊಟ್ಟೆಯಲ್ಲಿ ತಿವಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

21 ಏಹೂದನು ತನ್ನ ಎಡಗೈಯನ್ನು ಚಾಚಿ, ತನ್ನ ಬಲಗಡೆ ತೊಡೆಯಲ್ಲಿದ್ದ ಕಠಾರಿಯನ್ನು ತೆಗೆದುಕೊಂಡು, ಅವನ ಹೊಟ್ಟೆಯಲ್ಲಿ ತಿವಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ನ್ಯಾಯಸ್ಥಾಪಕರು 3:21
8 ತಿಳಿವುಗಳ ಹೋಲಿಕೆ  

ಹೀಗಿರಲಾಗಿ, ಲೋಕವು ಜನರ ವಿಷಯವಾಗಿ ಯೋಚಿಸುವಂತೆ ಇಂದಿನಿಂದ ನಾವು ಯಾರ ಬಗ್ಗೆಯೂ ಯೋಚಿಸುವುದಿಲ್ಲ. ಲೋಕವು ಯೋಚಿಸುವಂತೆ ಹಿಂದಿನ ಕಾಲದಲ್ಲಿ ನಾವು ಕ್ರಿಸ್ತನ ಬಗ್ಗೆ ಯೋಚಿಸಿಕೊಂಡಿದ್ದೆವು. ಆದರೆ ಈಗ ನಾವು ಆ ರೀತಿಯಲ್ಲಿ ಯೋಚಿಸುವುದಿಲ್ಲ.


ಯಾವನಾದರೂ ಪ್ರವಾದಿಸುವದನ್ನು ಮಂದುವರಿಸಿದರೆ ಅವನು ಶಿಕ್ಷೆಗೆ ಗುರಿಯಾಗುವನು. ‘ನೀನು ಯೆಹೋವನ ಹೆಸರಿನಲ್ಲಿ ಸುಳ್ಳನ್ನು ಹೇಳಿರುವೆ. ಆದ್ದರಿಂದ ನೀನು ಸಾಯಲೇಬೇಕು’ ಎಂದು ಅವನ ಸ್ವಂತ ತಂದೆತಾಯಿಗಳು ಅವನಿಗೆ ಹೇಳುವರು. ಅವನ ಸ್ವಂತ ತಂದೆ ತಾಯಿಗಳು ಅವನು ಸುಳ್ಳು ಪ್ರವಾದನೆ ಹೇಳಿದ್ದಕ್ಕೆ ಅವನನ್ನು ಖಡ್ಗದಿಂದ ಕೊಲ್ಲಿಸುವರು.


ಅವನು ಅದನ್ನು ಕೀಳಲು ಅದು ಬೆನ್ನಿನಿಂದ ಬರುವುದು; ಥಳಥಳಿಸುವ ಬಾಣದ ತುದಿಯು ಪಿತ್ತಕೋಶದೊಳಗಿಂದ ಬರುವುದು. ಅವನು ಅಪಾಯದಿಂದ ದಿಗ್ಭ್ರಾಂತನಾಗುವನು.


ಆದರೆ ಸಮುವೇಲನು ಅಗಾಗನಿಗೆ, “ನಿನ್ನ ಕತ್ತಿಯು ಅನೇಕ ತಾಯಂದಿರಿಗೆ ಮಕ್ಕಳಿಲ್ಲದಂತೆ ಮಾಡಿದೆ. ಆದ್ದರಿಂದ ಈಗ ನಿನ್ನ ತಾಯಿಗೆ ಮಕ್ಕಳಿಲ್ಲದಂತಾಯಿತು” ಎಂದು ಹೇಳಿ ಅಗಾಗನನ್ನು ಗಿಲ್ಗಾಲಿನ ಯೆಹೋವನ ಸನ್ನಿಧಿಯಲ್ಲೇ ಕಡಿದುಹಾಕಿದನು.


ಏಹೂದನು ಅರಸನಾದ ಎಗ್ಲೋನನ ಹತ್ತಿರಕ್ಕೆ ಹೋದನು. ಎಗ್ಲೋನನು ತಂಪಾದ ಅರಮನೆಯ ಮಹಡಿಯ ಕೋಣೆಯಲ್ಲಿ ಒಬ್ಬಂಟಿಗನಾಗಿ ಕುಳಿತಿದ್ದನು. ಆಗ ಏಹೂದನು, “ದೇವರಿಂದ ನಾನು ನಿನಗೆ ಒಂದು ಸಂದೇಶವನ್ನು ತಂದಿದ್ದೇನೆ” ಎಂದನು. ಅರಸನು ತನ್ನ ಸಿಂಹಾಸನದಿಂದ ಎದ್ದುನಿಂತನು. ಅವನು ಏಹೂದನಿಗೆ ತುಂಬ ಹತ್ತಿರದಲ್ಲಿದ್ದನು.


ಏಹೂದನು ಕತ್ತಿಯನ್ನು ಜೋರಾಗಿ ಒತ್ತಿದ್ದರಿಂದ ಅದು ಹಿಡಿಯ ಸಹಿತ ಮುಳುಗಿ ಹೋಯಿತು. ಅರಸನ ಕೊಬ್ಬಿದ ದೇಹದಲ್ಲಿ ಕತ್ತಿಯು ಸಂಪೂರ್ಣವಾಗಿ ಮುಚ್ಚಿಕೊಂಡಿತು. ಆದ್ದರಿಂದ ಏಹೂದನು ಎಗ್ಲೋನನ ಹೊಟ್ಟೆಯಲ್ಲಿಯೇ ಖಡ್ಗವನ್ನು ಬಿಟ್ಟನು. ಮಲವು ಹೊರಗೆ ಬಂದಿತು.


ಏಹೂದನು ತನಗೊಂದು ಖಡ್ಗವನ್ನು ಮಾಡಿಕೊಂಡನು. ಆ ಖಡ್ಗವು ಇಬ್ಬಾಯಿ ಖಡ್ಗವಾಗಿದ್ದು ಹದಿನೆಂಟು ಅಂಗುಲ ಉದ್ದವಾಗಿತ್ತು. ಅದನ್ನು ಅವನು ತನ್ನ ಬಲತೊಡೆಗೆ ಕಟ್ಟಿಕೊಂಡು ತನ್ನ ಬಟ್ಟೆಗಳಿಂದ ಮುಚ್ಚಿಕೊಂಡನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು