Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ನ್ಯಾಯಸ್ಥಾಪಕರು 17:10 - ಪರಿಶುದ್ದ ಬೈಬಲ್‌

10 ಆಗ ಮೀಕನು ಅವನಿಗೆ, “ನಮ್ಮಲ್ಲಿಯೇ ಇರು. ನಮಗೆ ತಂದೆಯೂ ಯಾಜಕನೂ ಆಗಿರು. ನಾನು ನಿನಗೆ ಪ್ರತಿವರ್ಷ ನಾಲ್ಕು ಔನ್ಸ್ ಬೆಳ್ಳಿಯನ್ನೂ ಊಟವನ್ನೂ ವಸ್ತ್ರಗಳನ್ನೂ ಕೊಡುತ್ತೇನೆ” ಎಂದು ಹೇಳಿದನು. ಮೀಕನು ಹೇಳಿದಂತೆ ಆ ಲೇವಿಯು ಮಾಡಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

10 ಮೀಕನು ಅವನಿಗೆ, “ನೀನು ನಮ್ಮಲ್ಲಿರು; ನಮಗೆ ತಂದೆಯೂ, ಯಾಜಕನೂ ಆಗು. ನಿನಗೆ ವರ್ಷಕ್ಕೆ ಹತ್ತು ಬೆಳ್ಳಿ ನಾಣ್ಯಗಳನ್ನೂ, ಬಟ್ಟೆಯನ್ನೂ, ಆಹಾರವನ್ನೂ ಕೊಡುತ್ತೇನೆ” ಅನ್ನಲು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

10 ಮೀಕನು ಅವನಿಗೆ, “ನೀನು ನಮ್ಮಲ್ಲಿರು; ನಮಗೆ ತಂದೆಯೂ ಯಾಜಕನೂ ಆಗಿರು. ನಿನಗೆ ವರ್ಷಕ್ಕೆ ಹತ್ತು ಬೆಳ್ಳಿ ನಾಣ್ಯಗಳನ್ನು, ಉಡಿಗೆತೊಡಿಗೆಯನ್ನು ಹಾಗು ಆಹಾರವನ್ನು ಕೊಡುತ್ತೇನೆ,” ಎನ್ನಲು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

10 ಮೀಕನು ಅವನಿಗೆ - ನೀನು ನಮ್ಮಲ್ಲಿರು; ನಮಗೆ ತಂದೆಯೂ ಯಾಜಕನೂ ಆಗು. ನಿನಗೆ ವರುಷಕ್ಕೆ ಹತ್ತು ರೂಪಾಯಿಗಳನ್ನೂ ಒಂದು ದುಸ್ತು ಬಟ್ಟೆಯನ್ನೂ ಆಹಾರವನ್ನೂ ಕೊಡುತ್ತೇನೆ ಅನ್ನಲು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

10 ಮೀಕನು ಅವನಿಗೆ, “ನೀನು ನನ್ನ ಬಳಿಯಲ್ಲಿ ವಾಸಮಾಡಿ ನನಗೆ ತಂದೆಯಾಗಿಯೂ, ಯಾಜಕನಾಗಿಯೂ ಇರು. ನಾನು ನಿನಗೆ ವರುಷಕ್ಕೆ ಹತ್ತು ಬೆಳ್ಳಿಯ ನಾಣ್ಯಗಳನ್ನೂ, ಒಂದು ದುಸ್ತು ವಸ್ತ್ರಗಳನ್ನೂ, ಆಹಾರವನ್ನೂ ಕೊಡುವೆನು,” ಎಂದನು. ಹಾಗೆಯೇ ಲೇವಿಯನು ಹೋದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ನ್ಯಾಯಸ್ಥಾಪಕರು 17:10
17 ತಿಳಿವುಗಳ ಹೋಲಿಕೆ  

ನೀವು ಜವಾಬ್ದಾರಿ ವಹಿಸಿಕೊಂಡಿರುವ ಸಭೆಯನ್ನು ಪರಿಪಾಲಿಸಬೇಕೆಂದು ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ. ಅವರು ದೇವರ ಮಂದೆ. ನೀವು ಆ ಮಂದೆಯನ್ನು ಕಾಯಿರಿ, ಏಕೆಂದರೆ ಅದು ನಿಮ್ಮ ಬಯಕೆಯಾಗಿದೆ; ಅದು ಬಲವಂತದಿಂದ ಹೊರಿಸಿದ ಹೊರೆಯಲ್ಲ. ದೇವರು ಅದನ್ನೇ ಇಷ್ಟಪಡುತ್ತಾನೆ. ನೀವು ಆ ಮಂದೆಯನ್ನು ಕಾಯುವುದು ಹಣದ ನಿಮಿತ್ತವಲ್ಲ, ದೇವರ ಸೇವೆ ಮಾಡಲು ನಿಮಗಿರುವ ಸಂತಸದ ನಿಮಿತ್ತವಾಗಿಯೇ.


ಹಣದಾಸೆಯು ಎಲ್ಲಾ ವಿಧವಾದ ಕೆಟ್ಟತನಕ್ಕೆ ಮೂಲವಾಗುತ್ತದೆ. ಕೆಲವು ಜನರು ಹೆಚ್ಚುಹೆಚ್ಚು ಹಣವನ್ನು ಗಳಿಸಿಕೊಳ್ಳುವುದಕ್ಕಾಗಿ ಸತ್ಯೋಪದೇಶವನ್ನು ತೊರೆದುಬಿಟ್ಟಿದ್ದಾರೆ. ಆದರೆ ಅವರು ತಮ್ಮನ್ನು ತಾವೇ ಹೆಚ್ಚು ವೇದನೆಗೆ ಗುರಿಪಡಿಸಿಕೊಂಡಿದ್ದಾರೆ.


ಆದರೆ ಯೂದನಿಗೆ ಬಡವರ ಬಗ್ಗೆ ನಿಜವಾಗಿಯೂ ಚಿಂತೆಯಿರಲಿಲ್ಲ. ಅವನು ಕಳ್ಳನಾಗಿದ್ದುದರಿಂದ ಹಾಗೆ ಹೇಳಿದನು. ಶಿಷ್ಯಸಮುದಾಯಕ್ಕೋಸ್ಕರವಿದ್ದ ಹಣದ ಪೆಟ್ಟಿಗೆಯು ಅವನ ವಶದಲ್ಲಿತ್ತು. ಅವನು ಆಗಾಗ್ಗೆ ಆ ಪೆಟ್ಟಿಗೆಯಿಂದ ಹಣವನ್ನು ಕದ್ದುಕೊಳ್ಳುತ್ತಿದ್ದನು.


“ಯೇಸುವನ್ನು ನಿಮಗೆ ಹಿಡಿದುಕೊಟ್ಟರೆ ನೀವು ನನಗೆ ಎಷ್ಟು ಹಣ ಕೊಡುವಿರಿ?” ಎಂದು ಕೇಳಿದನು. ಮಹಾಯಾಜಕರು ಮೂವತ್ತು ಬೆಳ್ಳಿಯ ನಾಣ್ಯಗಳನ್ನು ಯೂದನಿಗೆ ಕೊಟ್ಟರು.


ಜನರೆದುರಿನಲ್ಲಿ ನನಗೆ ನೀವು ಮಹತ್ವವನ್ನು ಕೊಡುವದಿಲ್ಲ. ಸ್ವಲ್ಪ ಬಾರ್ಲಿಗಾಗಿಯೂ ಕೆಲವು ತುಂಡು ರೊಟ್ಟಿಗಾಗಿಯೂ ನೀವು ನನಗೆ ವಿರುದ್ಧವಾಗಿ ವರ್ತಿಸುತ್ತೀರಿ. ನನ್ನ ಜನರಿಗೆ ನೀವು ಸುಳ್ಳನ್ನು ಆಡುತ್ತೀರಿ. ಅವರಿಗೆ ಸುಳ್ಳೆಂದರೆ ಬಹಳ ಪ್ರೀತಿ. ನೀವು ಸಾಯತಕ್ಕಲ್ಲದವರನ್ನು ಸಾವಿಗೀಡು ಮಾಡುತ್ತೀರಿ. ಬದುಕತಕ್ಕಲ್ಲದವರನ್ನು ಜೀವಂತವಾಗಿಡುತ್ತೀರಿ.


ನಿನ್ನ ಬಟ್ಟೆಯನ್ನು ತೆಗೆದು ಆ ಸೇವಕನಿಗೆ ಕೊಡುವೆನು. ನಿನ್ನ ರಾಜದಂಡವನ್ನು ಅವನಿಗೆ ಕೊಡುವೆನು. ನಿನ್ನ ವಿಶೇಷ ಹುದ್ದೆಯನ್ನು ಅವನಿಗೆ ಕೊಡುವೆನು. ಆ ಸೇವಕನು ಯೆಹೂದದ ಜನರಿಗೂ ಜೆರುಸಲೇಮಿನ ಜನರಿಗೂ ತಂದೆಯಂತಿರುವನು.


ನಾನು ಬಡವರಿಗೆ ತಂದೆಯಂತಿದ್ದೆನು. ತೊಂದರೆಯಲ್ಲಿದ್ದ ಅಪರಿಚಿತರ ವ್ಯಾಜ್ಯವನ್ನು ವಿಚಾರಿಸುತ್ತಿದ್ದೆನು.


ಎಲೀಷನು ಕಾಯಿಲೆ ಬಿದ್ದನು. ತರುವಾಯ, ಈ ಕಾಯಿಲೆಯಿಂದ ಎಲೀಷನು ಸತ್ತುಹೋದನು. ಇಸ್ರೇಲಿನ ರಾಜನಾದ ಯೋವಾಷನು ಎಲೀಷನ ಬಳಿಗೆ ಹೋದನು. ಯೋವಾಷನು ಎಲೀಷನಿಗಾಗಿ ಗೋಳಾಡಿದನು. ಯೋವಾಷನು, “ನನ್ನ ತಂದೆಯೇ, ನನ್ನ ತಂದೆಯೇ, ದೇವರು ಬಂದು ನಿನ್ನನ್ನು ತೆಗೆದುಕೊಂಡು ಹೋಗಲು ಇದು ಸಕಾಲವೇ?” ಎಂದು ಹೇಳಿದನು.


ಅರಾಮ್ಯರ ಸೇನೆಯನ್ನು ಇಸ್ರೇಲಿನ ರಾಜನು ನೋಡಿ ಎಲೀಷನಿಗೆ, “ನನ್ನ ತಂದೆಯೇ, ನಾನು ಅವರನ್ನು ಕೊಲ್ಲಲೇ? ಅವರನ್ನು ಕೊಂದುಹಾಕಿಬಿಡಲೇ?” ಎಂದು ಕೇಳಿದನು.


ಆಗ ನಿನ್ನ ಕುಟುಂಬದವರಲ್ಲಿ ಉಳಿದವರೆಲ್ಲ ಬಂದು ಈ ಯಾಜಕನಿಗೆ ಅಡ್ಡಬೀಳುವರು. ಈ ಜನರೆಲ್ಲ ಅವನಲ್ಲಿ ಬಿಡಿಕಾಸನ್ನೂ ರೊಟ್ಟಿಯ ಚೂರನ್ನೂ ಬೇಡುವರು. ಅವರೆಲ್ಲ, “ನಮಗೆ ದೇವಸ್ಥಾನದಲ್ಲಿ ಯಾಜಕನ ಹುದ್ದೆಯನ್ನು ಕೊಡು, ಅದರಿಂದ ಹೊಟ್ಟೆ ತುಂಬಿಸಿಕೊಳ್ಳುತ್ತೇವೆ ಎಂದು ಬೇಡಿಕೊಳ್ಳುವರು”’” ಎಂದನು.


ಆ ತರುಣ ಲೇವಿಯು ಮೀಕನಲ್ಲಿಯೇ ಇರಲು ಒಪ್ಪಿಕೊಂಡನು. ಆ ತರುಣನು ಮೀಕನ ಒಬ್ಬ ಮಗನಂತೆಯೇ ಆದನು.


ನನ್ನನ್ನು ಇಲ್ಲಿಗೆ ಕಳುಹಿಸಿದ್ದು ನಿಮ್ಮ ತಪ್ಪಲ್ಲ. ಅದು ದೇವರ ಯೋಜನೆ. ದೇವರು ನನ್ನನ್ನು ಫರೋಹನ ಅತ್ಯುನ್ನತವಾದ ಅಧಿಕಾರಿಯನ್ನಾಗಿ ಮಾಡಿದ್ದಾನೆ. ನಾನು ಅವನ ಮನೆಗೆಲ್ಲಾ ಮತ್ತು ಈಜಿಪ್ಟಿಗೆಲ್ಲಾ ರಾಜ್ಯಪಾಲನಾಗಿದ್ದೇನೆ” ಎಂದು ಹೇಳಿದನು.


ಮೀಕನು ಅವನನ್ನು, “ನೀನು ಎಲ್ಲಿಂದ ಬಂದಿರುವೆ?” ಎಂದು ಕೇಳಿದನು. ಆ ತರುಣನು, “ನಾನು ಯೆಹೂದ ಪ್ರದೇಶದ ಬೆತ್ಲೆಹೇಮಿನವನಾದ ಲೇವಿಯನು. ನಾನು ವಾಸಮಾಡುವುದಕ್ಕೆ ಒಂದು ಸ್ಥಳವನ್ನು ಹುಡುಕುತ್ತಿದ್ದೇನೆ” ಎಂದು ಹೇಳಿದನು.


ಮೀಕನು ತನಗಾಗಿ ಮಾಡಿದ ಎಲ್ಲಾ ವ್ಯವಸ್ಥೆಯನ್ನು ಅವರಿಗೆ ವಿವರಿಸಿ, “ನಾನು ಮೀಕನ ಯಾಜಕನಾಗಿ ಕೆಲಸ ಮಾಡುತ್ತಿದ್ದೇನೆ. ಅವನು ನನಗೆ ಸಂಬಳ ಕೊಡುತ್ತಾನೆ” ಎಂದು ಹೇಳಿದನು.


ಎಲೀಷನು ಅದನ್ನು ನೋಡಿ, “ನನ್ನ ತಂದೆಯೇ! ನನ್ನ ತಂದೆಯೇ! ಇಸ್ರೇಲಿಗೆ ರಥರಥಾಶ್ವಗಳೂ ಮತ್ತು ಅಶ್ವದಳವೂ ಆಗಿದ್ದವನೇ!” ಎಂದು ಕೂಗಿಕೊಂಡನು. ಎಲೀಷನು ಎಲೀಯನನ್ನು ಮತ್ತೆ ನೋಡಲಿಲ್ಲ. ಎಲೀಷನು ತನ್ನ ಬಟ್ಟೆಗಳನ್ನು ಹಿಡಿದುಕೊಂಡು, ತನ್ನ ದುಃಖವನ್ನು ತೋರ್ಪಡಿಸಲು ಅವುಗಳನ್ನು ಹರಿದು ತುಂಡುತುಂಡು ಮಾಡಿದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು