Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ನ್ಯಾಯಸ್ಥಾಪಕರು 15:20 - ಪರಿಶುದ್ದ ಬೈಬಲ್‌

20 ಸಂಸೋನನು ಇಪ್ಪತ್ತು ವರ್ಷ ಇಸ್ರೇಲರ ನ್ಯಾಯಾಧೀಶನಾಗಿದ್ದನು. ಅದು ಫಿಲಿಷ್ಟಿಯರ ಕಾಲವಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

20 ಫಿಲಿಷ್ಟಿಯರ ಪ್ರಾಬಲ್ಯದಲ್ಲಿ ಸಂಸೋನನು ಇಸ್ರಾಯೇಲ್ಯರನ್ನು ಇಪ್ಪತ್ತು ವರ್ಷಗಳ ವರೆಗೆ ಪಾಲಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

20 ಫಿಲಿಷ್ಟಿಯರ ಕಾಲದಲ್ಲಿ ಸಂಸೋನನು ಇಸ್ರಯೇಲರನ್ನು ಇಪ್ಪತ್ತು ವರ್ಷಗಳವರೆಗೆ ಪಾಲಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

20 ಫಿಲಿಷ್ಟಿಯರ ಪ್ರಾಬಲ್ಯದಲ್ಲಿ ಸಂಸೋನನು ಇಸ್ರಾಯೇಲ್ಯರನ್ನು ಇಪ್ಪತ್ತು ವರುಷಗಳವರೆಗೆ ಪಾಲಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

20 ಸಂಸೋನನು ಫಿಲಿಷ್ಟಿಯರ ದಿವಸಗಳಲ್ಲಿ ಇಪ್ಪತ್ತು ವರ್ಷ ಇಸ್ರಾಯೇಲಿಗೆ ನ್ಯಾಯತೀರಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ನ್ಯಾಯಸ್ಥಾಪಕರು 15:20
6 ತಿಳಿವುಗಳ ಹೋಲಿಕೆ  

ಇಸ್ರೇಲರು ಮತ್ತೆ ಯೆಹೋವನಿಗೆ ವಿರೋಧವಾಗಿ ದುಷ್ಕೃತ್ಯಗಳನ್ನು ಮಾಡಿದರು. ಆದ್ದರಿಂದ ಫಿಲಿಷ್ಟಿಯರು ನಲವತ್ತು ವರ್ಷ ಅವರನ್ನು ಆಳುವಂತೆ ಯೆಹೋವನು ಮಾಡಿದನು.


ಸಂಸೋನನ ಸಹೋದರರು ಮತ್ತು ಅವನ ತಂದೆಯ ಕುಟುಂಬದವರೆಲ್ಲರು ಬಂದು ಅವನ ದೇಹವನ್ನು ತೆಗೆದುಕೊಂಡು ಹೋಗಿ ಅವನ ತಂದೆಯ ಸಮಾಧಿಯಲ್ಲಿ ಹೂಳಿಟ್ಟರು. ಅವನ ತಂದೆಯ ಹೆಸರು ಮಾನೋಹ. ಆ ಸಮಾಧಿಯು ಚೊರ್ಗಕ್ಕೂ ಮತ್ತು ಎಷ್ಟಾವೋಲಿಗೂ ಮಧ್ಯದಲ್ಲಿದೆ. ಸಂಸೋನನು ಇಪ್ಪತ್ತು ವರ್ಷ ಇಸ್ರೇಲರ ನ್ಯಾಯಾಧೀಶನಾಗಿದ್ದನು.


ನಾನು ನಿಮಗೆ ಮತ್ತಷ್ಟು ದೃಷ್ಟಾಂತಗಳನ್ನು ಹೇಳುವ ಅಗತ್ಯವಿದೆಯೋ? ನಾನು ಗಿದ್ಯೋನನ, ಬಾರಾಕನ, ಸಂಸೋನನ, ಯೆಫ್ತಾಹನ, ದಾವೀದನ, ಸಮುವೇಲನ ಮತ್ತು ಪ್ರವಾದಿಗಳ ಕುರಿತು ನಿಮಗೆ ಹೇಳುವಷ್ಟು ಸಮಯ ನನಗಿಲ್ಲ.


ಏಕೆಂದರೆ ನೀನು ಗರ್ಭವತಿಯಾಗಿರುವೆ ಮತ್ತು ನಿನಗೊಬ್ಬ ಮಗನು ಹುಟ್ಟಲಿದ್ದಾನೆ. ಅವನು ಹುಟ್ಟಿದಂದಿನಿಂದಲೇ ದೇವರಿಗೆ ಪ್ರತಿಷ್ಠಿತನಾಗಿದ್ದಾನೆ. ಆದ್ದರಿಂದ ಅವನ ಕೂದಲನ್ನು ಕತ್ತರಿಸಕೂಡದು. ಅವನು ಇಸ್ರೇಲರನ್ನು ಫಿಲಿಷ್ಟಿಯರ ಹಿಡಿತದಿಂದ ಬಿಡಿಸುವನು” ಎಂದು ಹೇಳಿದನು.


“ಇತರ ಇಸ್ರೇಲರ ಕುಟುಂಬಗಳಿಗೆ ತೀರ್ಪುಮಾಡುವಂತೆ, ದಾನನು ತನ್ನ ಸ್ವಂತ ಜನರಿಗೆ ತೀರ್ಪು ಮಾಡುತ್ತಾನೆ.


ಯೆಹೋವನ ಪವಿತ್ರ ಪೆಟ್ಟಿಗೆಯ ವಿಚಾರವನ್ನು ಬೆನ್ಯಾಮೀನ್ಯನು ತಿಳಿಸಿದಾಗ, ಏಲಿಯು ಕುರ್ಚಿಯಿಂದ ಹಿಂದಕ್ಕೆ ಬಾಗಿಲಿನ ಸಮೀಪದಲ್ಲಿ ಬಿದ್ದನು; ಅವನ ಕುತ್ತಿಗೆಯು ಮುರಿದು ಬಿತ್ತು. ಏಲಿಯು ಮುದುಕನೂ ಬೊಜ್ಜುಳ್ಳವನೂ ಆಗಿದ್ದುದರಿಂದ ಸತ್ತನು. ಅವನು ಇಸ್ರೇಲರನ್ನು ನಲವತ್ತು ವರ್ಷ ನಡೆಸಿದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು