Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ನ್ಯಾಯಸ್ಥಾಪಕರು 14:8 - ಪರಿಶುದ್ದ ಬೈಬಲ್‌

8 ಕೆಲವು ದಿನಗಳಾದ ಮೇಲೆ ಸಂಸೋನನು ಆ ಫಿಲಿಷ್ಟಿಯ ಸ್ತ್ರೀಯನ್ನು ಮದುವೆಯಾಗುವುದಕ್ಕೋಸ್ಕರ ತಿರುಗಿ ಹೋಗುತ್ತಿದ್ದನು. ದಾರಿಯಲ್ಲಿ ಅವನು ಆ ಸತ್ತಸಿಂಹವನ್ನು ನೋಡುವುದಕ್ಕೆ ಹೋದನು. ಅವನು ಆ ಸತ್ತಸಿಂಹದ ದೇಹದಲ್ಲಿ ಒಂದು ಜೇನುಗೂಡನ್ನು ಕಂಡನು. ಅದರಲ್ಲಿ ಜೇನುತುಪ್ಪವಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

8 ಕೆಲವು ದಿನಗಳಾದ ಮೇಲೆ ಅವನು ಆಕೆಯನ್ನು ವರಿಸುವುದಕ್ಕೋಸ್ಕರ ತಿರುಗಿ ಆ ಊರಿಗೆ ಹೋಗುತ್ತಿದ್ದಾಗ ದಾರಿಯ ಸಮೀಪದಲ್ಲಿ ಬಿದ್ದಿದ್ದ ಸಿಂಹದ ಹೆಣವನ್ನು ನೋಡುವುದಕ್ಕೆ ಹೋಗಲು ಅದರ ಒಡಲಲ್ಲಿ ಜೇನುಹುಳಗಳನ್ನೂ, ಜೇನನ್ನೂ ಕಂಡು,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

8 ಕೆಲವು ದಿವಸಗಳಾದ ಮೇಲೆ ಅವನು ಆಕೆಯನ್ನು ವರಿಸುವುದಕ್ಕಾಗಿ ಮತ್ತೆ ಆ ಊರಿಗೆ ಹೋಗುತ್ತಿದ್ದಾಗ, ದಾರಿ ಬಿಟ್ಟು, ಸಿಂಹದ ಹೆಣವನ್ನು ನೋಡುವುದಕ್ಕೆ ಹೋದನು. ಅದರ ಒಡಲಲ್ಲಿ ಜೇನುಹುಳುಗಳನ್ನೂ ಜೇನನ್ನೂ ಕಂಡು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

8 ಕೆಲವು ದಿವಸಗಳಾದ ಮೇಲೆ ಅವನು ಆಕೆಯನ್ನು ವರಿಸುವದಕ್ಕೋಸ್ಕರ ತಿರಿಗಿ ಆ ಊರಿಗೆ ಹೋಗುತ್ತಿದ್ದಾಗ ದಾರೀ ಬಿಟ್ಟು ಸಿಂಹದ ಹೆಣವನ್ನು ನೋಡುವದಕ್ಕೆ ಹೋಗಲು ಅದರ ಒಡಲಲ್ಲಿ ಜೇನುಹುಳಗಳನ್ನೂ ಜೇನನ್ನೂ ಕಂಡು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

8 ಸ್ವಲ್ಪ ಸಮಯವಾದ ಮೇಲೆ ಅವನು ಅವಳನ್ನು ಮದುವೆ ಮಾಡಿಕೊಳ್ಳುವುದಕ್ಕೆ ತಿರುಗಿ ಬರುವಾಗ, ಸಿಂಹದ ಹೆಣವನ್ನು ನೋಡುವುದಕ್ಕೆ ಪಕ್ಕಕ್ಕೆ ಹೋದಾಗ, ಸಿಂಹದ ಹೆಣದಲ್ಲಿ ಜೇನುಹುಳಗಳನ್ನು ಮತ್ತು ಜೇನನ್ನು ಕಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ನ್ಯಾಯಸ್ಥಾಪಕರು 14:8
5 ತಿಳಿವುಗಳ ಹೋಲಿಕೆ  

ಯೋಸೇಫನು ಹೀಗೆ ಆಲೋಚಿಸಿಕೊಂಡನಂತರ, ಪ್ರಭುವಿನ ದೂತನು ಯೋಸೇಫನಿಗೆ ಕನಸಿನಲ್ಲಿ ಕಾಣಿಸಿಕೊಂಡನು. ಆ ದೂತನು, “ದಾವೀದನ ಮಗನಾದ ಯೋಸೇಫನೇ, ಮರಿಯಳನ್ನು ನಿನ್ನ ಹೆಂಡತಿಯಾಗಿ ಸ್ವೀಕರಿಸಲು ಭಯಪಡಬೇಡ. ಆಕೆ ಪವಿತ್ರಾತ್ಮನ ಪ್ರಭಾವದಿಂದ ಗರ್ಭಿಣಿಯಾಗಿದ್ದಾಳೆ.


ಏಳು ವರ್ಷಗಳಾದ ಮೇಲೆ ಯಾಕೋಬನು ಲಾಬಾನನಿಗೆ, “ನನಗೆ ರಾಹೇಲಳನ್ನು ಮದುವೆ ಮಾಡಿಕೊಡು. ನನ್ನ ಸೇವೆಯ ಕಾಲ ಮುಗಿದುಹೋಯಿತು” ಎಂದು ಹೇಳಿದನು.


ಸಂಸೋನನು ನಗರಕ್ಕೆ ಹೋಗಿ ಆ ಫಿಲಿಷ್ಟಿಯ ಸ್ತ್ರೀಯೊಂದಿಗೆ ಮಾತನಾಡಿ ಅವಳನ್ನು ಇಷ್ಟಪಟ್ಟನು.


ಸಂಸೋನನು ತನ್ನ ಕೈಯಿಂದ ಸ್ವಲ್ಪ ಜೇನುತುಪ್ಪವನ್ನು ತೆಗೆದುಕೊಂಡು ಅದನ್ನು ತಿನ್ನುತ್ತಾ ನಡೆದನು. ತಂದೆತಾಯಿಗಳ ಹತ್ತಿರ ಬಂದು ಅವರಿಗೆ ಸ್ವಲ್ಪ ಜೇನುತುಪ್ಪವನ್ನು ಕೊಟ್ಟನು. ಅವರೂ ತಿಂದರು. ಆದರೆ ಆ ಸತ್ತಸಿಂಹದ ದೇಹದಿಂದ ಜೇನುತುಪ್ಪವನ್ನು ತೆಗೆದುಕೊಂಡ ಸಂಗತಿಯನ್ನು ಸಂಸೋನನು ಅವರಿಗೆ ಹೇಳಲಿಲ್ಲ.


ಜೇನುತುಪ್ಪ ಒಳ್ಳೆಯದು. ಆದರೆ ಅತಿಯಾಗಿ ತಿನ್ನಬೇಡ. ಇಲ್ಲವಾದರೆ, ಕಾಯಿಲೆಬೀಳುವೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು