Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ನ್ಯಾಯಸ್ಥಾಪಕರು 14:2 - ಪರಿಶುದ್ದ ಬೈಬಲ್‌

2 ಅವನು ಮನೆಗೆ ಹಿಂದಿರುಗಿ ತನ್ನ ತಂದೆತಾಯಿಗಳಿಗೆ, “ನಾನು ತಿಮ್ನಾ ನಗರದಲ್ಲಿ ಒಬ್ಬ ಫಿಲಿಷ್ಟಿಯರ ಸ್ತ್ರೀಯನ್ನು ನೋಡಿದ್ದೇನೆ. ನೀವು ಅವಳನ್ನು ನನಗೆ ಮದುವೆ ಮಾಡಿಸಿಕೊಡಿ” ಎಂದು ಕೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

2 ಅವರಿಗೆ, “ನಾನು ತಿಮ್ನಾ ಊರಲ್ಲಿ ಒಬ್ಬ ಫಿಲಿಷ್ಟಿಯ ಹೆಣ್ಣನ್ನು ನೋಡಿದ್ದೇನೆ; ಆಕೆಯನ್ನು ನನಗೆ ಮದುವೆ ಮಾಡಿಕೊಡಿರಿ” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

2 ತಂದೆ ತಾಯಿಗಳ ಬಳಿಗೆ ಬಂದು ಅವರಿಗೆ, “ನಾನು ತಿಮ್ನಾ ಊರಲ್ಲಿ ಒಬ್ಬ ಫಿಲಿಷ್ಟಿಯ ಹೆಣ್ಣನ್ನು ನೋಡಿ ಇದ್ದೇನೆ; ಆಕೆಯನ್ನು ನನಗೆ ಮದುವೆ ಮಾಡಿಕೊಡಿ,” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

2 ತಿರಿಗಿ ತಂದೆತಾಯಿಗಳ ಬಳಿಗೆ ಬಂದು ಅವರಿಗೆ - ನಾನು ತಿಮ್ನಾ ಊರಲ್ಲಿ ಒಬ್ಬ ಫಿಲಿಷ್ಟಿಯ ಹೆಣ್ಣನ್ನು ನೋಡಿದ್ದೇನೆ; ಆಕೆಯನ್ನು ನನಗೆ ಮದುವೆ ಮಾಡಿಕೊಡಿರಿ ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

2 ತನ್ನ ತಂದೆತಾಯಿಗಳ ಬಳಿಗೆ ಬಂದು ಅವರಿಗೆ, “ನಾನು ತಿಮ್ನಾತಿನಲ್ಲಿ ಫಿಲಿಷ್ಟಿಯರ ಪುತ್ರಿಯರೊಳಗೆ ಒಬ್ಬ ಸ್ತ್ರೀಯನ್ನು ಕಂಡೆನು. ಈಗ ಅವಳನ್ನು ನನಗೆ ಮದುವೆ ಮಾಡಿರಿ,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ನ್ಯಾಯಸ್ಥಾಪಕರು 14:2
8 ತಿಳಿವುಗಳ ಹೋಲಿಕೆ  

ಶೆಕೆಮನು ತನ್ನ ತಂದೆಗೆ, “ದಯವಿಟ್ಟು ಈ ಹುಡುಗಿಯನ್ನು ನನಗೆ ಮದುವೆಮಾಡಿಸು” ಎಂದು ಕೇಳಿಕೊಂಡನು.


ಅವನ ತಾಯಿಯು ಅವನಿಗೆ ಈಜಿಪ್ಟಿನ ಹುಡುಗಿಯನ್ನು ತಂದು ಮದುವೆ ಮಾಡಿಸಿದಳು. ಅವರು ಪಾರಾನ್ ಕಾಡಿನಲ್ಲಿ ತಮ್ಮ ವಾಸವನ್ನು ಮುಂದುವರಿಸಿದರು.


ಇಸ್ರೇಲಿನ ರಾಜನಾದ ಯೋವಾಷನು ಯೆಹೂದದ ರಾಜನಾದ ಅಮಚ್ಯನಿಗೆ, “ಲೆಬನೋನಿನ ಒಂದು ಮುಳ್ಳುಗಿಡವು ಲೆಬನೋನಿನ ದೇವದಾರುಮರಕ್ಕೆ ಒಂದು ಸಂದೇಶವನ್ನು ಕಳುಹಿಸಿತು. ಅದು, ‘ನನ್ನ ಮಗನಿಗೆ ನಿನ್ನ ಮಗಳನ್ನು ಕೊಟ್ಟು ಮದುವೆ ಮಾಡು’ ಎಂದಿತು. ಆದರೆ ಲೆಬನೋನಿನ ಒಂದು ಕಾಡುಮೃಗವು ಆ ದಾರಿಯಲ್ಲಿ ಹೋಗುವಾಗ, ಮುಳ್ಳುಗಿಡದ ಮೇಲೆ ಹಾದುಹೋಯಿತು.


ಯೆಹೂದನು ತನ್ನ ಮೊದಲನೆ ಮಗನಾದ ಏರನಿಗಾಗಿ ಒಬ್ಬ ಕನ್ನಿಕೆಯನ್ನು ಆಯ್ಕೆಮಾಡಿದನು. ಆಕೆಯ ಹೆಸರು ತಾಮಾರ.


ಸಂಸೋನನು ತಿಮ್ನಾ ನಗರಕ್ಕೆ ಹೋದನು. ಅವನು ಅಲ್ಲಿ ಒಬ್ಬ ಫಿಲಿಷ್ಟಿಯರ ತರುಣಿಯನ್ನು ನೋಡಿದನು.


ಅವನ ತಂದೆತಾಯಿಗಳು, “ಇಸ್ರೇಲರಲ್ಲಿಯೇ ಒಬ್ಬ ಸ್ತ್ರೀ ಇದ್ದಾಳೆ. ನೀನು ಅವಳನ್ನು ಮದುವೆಯಾಗು. ನೀನು ಫಿಲಿಷ್ಟಯರ ಹೆಣ್ಣನ್ನು ಮದುವೆಯಾಗುವುದೇಕೆ? ಅವರು ಸುನ್ನತಿಯನ್ನು ಮಾಡಿಸಿಕೊಂಡವರಲ್ಲ” ಎಂದರು. ಆದರೆ ಸಂಸೋನನು, “ನನಗೆ ಆಕೆಯೊಡನೇ ಮದುವೆಮಾಡಿಸಿ. ನಾನು ಆಕೆಯನ್ನೇ ಮೆಚ್ಚಿಕೊಂಡಿದ್ದೇನೆ” ಎಂದನು.


ಮದುವೆ ಮಾಡಿಕೊಳ್ಳಿರಿ; ಗಂಡು ಮತ್ತು ಹೆಣ್ಣುಮಕ್ಕಳನ್ನು ಪಡೆಯಿರಿ. ನಿಮ್ಮ ಗಂಡುಮಕ್ಕಳಿಗೂ ನಿಮ್ಮ ಹೆಣ್ಣುಮಕ್ಕಳಿಗೂ ಮದುವೆ ಮಾಡಿರಿ. ಅವರಿಗೂ ಗಂಡು ಮತ್ತು ಹೆಣ್ಣು ಮಕ್ಕಳಾಗಲಿ. ಅನೇಕ ಮಕ್ಕಳನ್ನು ಹೆತ್ತು ಬಾಬಿಲೋನಿನಲ್ಲಿ ಬಹುಸಂಖ್ಯಾತರಾಗಿ. ಅಲ್ಪಸಂಖ್ಯಾತರಾಗಬೇಡಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು