ನ್ಯಾಯಸ್ಥಾಪಕರು 11:39 - ಪರಿಶುದ್ದ ಬೈಬಲ್39 ಎರಡು ತಿಂಗಳು ಗತಿಸಿದ ಮೇಲೆ ಯೆಫ್ತಾಹನ ಮಗಳು ತನ್ನ ತಂದೆಯಲ್ಲಿಗೆ ಬಂದಳು. ಯೆಫ್ತಾಹನು ದೇವರಿಗೆ ಹರಕೆ ಹೊತ್ತಂತೆ ಮಾಡಿದನು. ಯೆಫ್ತಾಹನ ಮಗಳು ಎಂದೂ ಯಾರೊಂದಿಗೂ ಲೈಂಗಿಕ ಸಂಬಂಧ ಹೊಂದಲಿಲ್ಲ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201939 ಎರಡು ತಿಂಗಳು ಕಳೆದ ನಂತರ ಆಕೆ ಪುನಃ ತಂದೆಯ ಹತ್ತಿರ ಬರಲು ಅವನು ತನ್ನ ಹರಕೆಯನ್ನು ತೀರಿಸಿದನು. ಆಕೆಯು ಪುರುಷನನ್ನರಿಯದವಳು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)39 ಎರಡು ತಿಂಗಳು ಕಳೆದ ನಂತರ ಆಕೆ ಮರಳಿ ತಂದೆಯ ಹತ್ತಿರ ಬಂದಳು. ಅವನು ತನ್ನ ಹರಕೆಯನ್ನು ತೀರಿಸಿದನು. ಆಕೆ ಕನ್ಯೆಯಾಗಿಯೇ ಸತ್ತಳು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)39 ಎರಡು ತಿಂಗಳು ಕಳೆದನಂತರ ಆಕೆಯು ತಿರಿಗಿ ತಂದೆಯ ಹತ್ತಿರ ಬರಲು ಅವನು ತನ್ನ ಹರಕೆಯನ್ನು ತೀರಿಸಿದನು. ಆಕೆಯು ಪುರುಷನನ್ನರಿಯದವಳು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ39 ಎರಡು ತಿಂಗಳು ತೀರಿದಾಗ ತನ್ನ ತಂದೆಯ ಬಳಿಗೆ ಬಂದಳು. ಆಗ ಅವನು ಮಾಡಿದ್ದ ತನ್ನ ಪ್ರಮಾಣದ ಪ್ರಕಾರ ಅವಳಿಗೆ ತೀರ್ಪನ್ನು ಈಡೇರಿಸಿದನು. ಅವಳು ಕನ್ಯೆಯಾಗಿಯೇ ಮರಣಹೊಂದಿದಳು. ಅಧ್ಯಾಯವನ್ನು ನೋಡಿ |
ಕೆಲವರು ಒಂದು ಕಡೆಯಲ್ಲಿ ಹೋರಿಯನ್ನು ಯಜ್ಞಮಾಡುವರು. ಇನ್ನೊಂದು ಕಡೆಯಲ್ಲಿ ಜನರಿಗೆ ಹಿಂಸೆ ಕೊಡುವರು. ಅವರು ಬಲಿಯರ್ಪಿಸಲು ಕುರಿಗಳನ್ನು ಕೊಯ್ಯುವರು, ಅದೇ ಸಮಯದಲ್ಲಿ ನಾಯಿಗಳ ಕುತ್ತಿಗೆಗಳನ್ನು ಮುರಿಯುವರು. ಅವರು ನನಗೆ ಹಂದಿಗಳ ರಕ್ತವನ್ನು ಅರ್ಪಿಸುವರು. ನನಗೆ ಧೂಪವನ್ನು ಹಾಕಲು ಯಾವಾಗಲೂ ತಯಾರಿರುವರು. ಅದೇ ಸಮಯದಲ್ಲಿ ಅಯೋಗ್ಯವಾದ ತಮ್ಮ ವಿಗ್ರಹಗಳನ್ನು ಪ್ರೀತಿಸುವರು. ಅವರು ನನ್ನ ಮಾರ್ಗವನ್ನು ಅನುಸರಿಸದೆ ತಮ್ಮ ಮಾರ್ಗವನ್ನು ಆರಿಸಿಕೊಳ್ಳುತ್ತಾರೆ. ಅವರು ತಮ್ಮ ಭಯಂಕರವಾದ ವಿಗ್ರಹಗಳನ್ನು ಪೂಜಿಸುತ್ತಾರೆ.
ಅವಳು ದೇವರಲ್ಲಿ ಒಂದು ವಿಶೇಷ ವಾಗ್ದಾನವನ್ನು ಮಾಡಿದಳು. ಅವಳು, “ಯೆಹೋವನೇ, ಸರ್ವಶಕ್ತನೇ, ನಾನು ಎಷ್ಟು ದುಃಖಿತಳೆಂಬುದನ್ನು ನೋಡು, ನನ್ನನ್ನು ಜ್ಞಾಪಿಸಿಕೊ! ನನ್ನನ್ನು ಮರೆಯದಿರು. ನೀನು ನನಗೊಬ್ಬ ಮಗನನ್ನು ಕರುಣಿಸಿದರೆ, ಅವನು ಜೀವದಿಂದಿರುವ ತನಕ ನಿನ್ನವನಾಗಿರುವಂತೆ ನಿನಗೇ ಪ್ರತಿಷ್ಠಿಸುತ್ತೇನೆ. ಅವನು ನಾಜೀರನಾಗಿರುವನು. ಅವನು ದ್ರಾಕ್ಷಾರಸವನ್ನಾಗಲಿ ಇತರೆ ಮದ್ಯವನ್ನಾಗಲಿ ಸೇವಿಸುವುದಿಲ್ಲ. ಅವನ ತಲೆಕೂದಲನ್ನು ಕ್ಷೌರ ಕತ್ತಿಯಿಂದ ಕತ್ತರಿಸುವುದಿಲ್ಲ” ಎಂದು ಹೇಳಿದಳು