ನ್ಯಾಯಸ್ಥಾಪಕರು 11:21 - ಪರಿಶುದ್ದ ಬೈಬಲ್21 ಆದರೆ ಇಸ್ರೇಲರ ದೇವರಾದ ಯೆಹೋವನು ಇಸ್ರೇಲರಿಗೆ ಸೀಹೋನ ಮತ್ತು ಅವನ ಜನರನ್ನು ಸೋಲಿಸಲು ಸಹಾಯ ಮಾಡಿದನು. ಆದ್ದರಿಂದ ಅಮೋರಿಯರ ಪ್ರದೇಶವು ಇಸ್ರೇಲರ ಸ್ವತ್ತಾಯಿತು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201921 ಇಸ್ರಾಯೇಲರ ದೇವರಾದ ಯೆಹೋವನು ಸೀಹೋನನನ್ನೂ, ಅವನ ಜನರೆಲ್ಲರನ್ನೂ ಇಸ್ರಾಯೇಲರ ಕೈಗೆ ಒಪ್ಪಿಸಿದ್ದರಿಂದ ಅವರು ಈ ದೇಶದ ನಿವಾಸಿಗಳಾದ ಅಮೋರಿಯರನ್ನು ಹೊಡೆದು, ಅವರ ದೇಶವನ್ನೆಲ್ಲಾ ಸ್ವಾಧೀನಪಡಿಸಿಕೊಂಡರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)21 ಇಸ್ರಯೇಲರ ದೇವರಾದ ಸರ್ವೇಶ್ವರ ಸೀಹೋನನನ್ನೂ ಅವನ ಜನರೆಲ್ಲರನ್ನೂ ಇಸ್ರಯೇಲರ ಕೈಗೆ ಒಪ್ಪಿಸಿದ್ದರಿಂದ ಅವರು ಈ ದೇಶದ ನಿವಾಸಿಗಳಾದ ಅಮೋರಿಯರನ್ನು ಹೊಡೆದು ಅವರ ದೇಶವನ್ನೆಲ್ಲಾ ಸ್ವಾಧೀನಪಡಿಸಿಕೊಂಡರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)21 ಇಸ್ರಾಯೇಲ್ಯರ ದೇವರಾದ ಯೆಹೋವನು ಸೀಹೋನನನ್ನೂ ಅವನ ಜನರೆಲ್ಲರನ್ನೂ ಇಸ್ರಾಯೇಲ್ಯರ ಕೈಗೆ ಒಪ್ಪಿಸಿದ್ದರಿಂದ ಅವರು ಈ ದೇಶದ ನಿವಾಸಿಗಳಾದ ಅಮೋರಿಯರನ್ನು ಹೊಡೆದು ಅವರ ದೇಶವನ್ನೆಲ್ಲಾ ಸ್ವತಂತ್ರಿಸಿಕೊಂಡರು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ21 “ಆಗ ಇಸ್ರಾಯೇಲಿನ ದೇವರಾದ ಯೆಹೋವ ದೇವರು ಸೀಹೋನನನ್ನೂ, ಅವನ ಸಕಲ ಜನರನ್ನೂ ಇಸ್ರಾಯೇಲರ ಕೈಗೆ ಒಪ್ಪಿಸಿಕೊಟ್ಟರು. ಇಸ್ರಾಯೇಲರು ಸೀಹೋನನನ್ನೂ, ಅವನ ಸಕಲ ಜನರನ್ನೂ ಹೊಡೆದುಬಿಟ್ಟರು. ಹಾಗೆಯೇ ಇಸ್ರಾಯೇಲರು ಆ ದೇಶದಲ್ಲಿ ವಾಸಿಸಿದ್ದ ಅಮೋರಿಯರ ದೇಶವನ್ನೆಲ್ಲಾ ಸ್ವಾಧೀನಮಾಡಿಕೊಂಡರು. ಅಧ್ಯಾಯವನ್ನು ನೋಡಿ |