ನ್ಯಾಯಸ್ಥಾಪಕರು 11:13 - ಪರಿಶುದ್ದ ಬೈಬಲ್13 ಅಮ್ಮೋನಿಯರ ಅರಸನು ಯೆಫ್ತಾಹನ ದೂತರಿಗೆ, “ಇಸ್ರೇಲರು ಈಜಿಪ್ಟಿನಿಂದ ಬಂದಾಗ ನಮ್ಮ ಪ್ರದೇಶವನ್ನು ತೆಗೆದುಕೊಂಡರು; ಆದ್ದರಿಂದ ಈಗ ನಾವು ಇಸ್ರೇಲರೊಂದಿಗೆ ಯುದ್ಧ ಮಾಡುತ್ತಿದ್ದೇವೆ. ಅವರು ಅರ್ನೋನ್ ನದಿಯಿಂದ ಯಬ್ಬೋಕ್ ನದಿಯವರೆಗೂ ಜೋರ್ಡನ್ ನದಿಯವರೆಗಿನ ಭೂಮಿಯನ್ನೂ ತೆಗೆದುಕೊಂಡಿದ್ದಾರೆ. ಈಗ ನಮ್ಮ ಭೂಮಿಯನ್ನು ನಮಗೆ ಶಾಂತಿಯಿಂದ ಹಿಂದಿರುಗಿಸಬೇಕು” ಎಂದನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201913 ಆ ಅರಸನು ದೂತರಿಗೆ, “ಇಸ್ರಾಯೇಲರು ಐಗುಪ್ತದಿಂದ ಬಂದಾಗ ಅರ್ನೋನಿನಿಂದ ಯಬ್ಬೋಕ್ ಮತ್ತು ಯೊರ್ದನ್ ಹೊಳೆಗಳವರೆಗೂ ಇದ್ದ ನನ್ನ ದೇಶವನ್ನು ವಶಪಡಿಸಿಕೊಂಡರಲ್ಲಾ; ನೀನು ಈಗ ಅದನ್ನು ಸಮಾಧಾನದಿಂದ ಹಿಂದಕ್ಕೆ ಕೊಡು” ಎಂದು ಹೇಳಿ ಕಳುಹಿಸಿದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)13 ಆ ಅರಸನು ದೂತರಿಗೆ, “ಇಸ್ರಯೇಲರು ಈಜಿಪ್ಟಿನಿಂದ ಬಂದಾಗ ಅರ್ನೋನಿನಿಂದ ಯಬ್ಬೋಕ್, ಜೋರ್ಡನ್ ನದಿಗಳವರೆಗೂ ಇದ್ದು ನನ್ನ ದೇಶವನ್ನು ಕಸಿದುಕೊಂಡರಲ್ಲವೆ? ನೀನು ಈಗ ಅದನ್ನು ಸಮಾಧಾನದಿಂದ ಹಿಂದಕ್ಕೆ ಕೊಡು,” ಎಂದು ಹೇಳಿ ಕಳುಹಿಸಿದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)13 ಆ ಅರಸನು ದೂತರಿಗೆ - ಇಸ್ರಾಯೇಲ್ಯರು ಐಗುಪ್ತದಿಂದ ಬಂದಾಗ ಅರ್ನೋನಿನಿಂದ ಯಬ್ಬೋಕ್, ಯೊರ್ದನ್ ಹೊಳೆಗಳವರೆಗೂ ಇದ್ದ ನನ್ನ ದೇಶವನ್ನು ಕಸಕೊಂಡರಲ್ಲಾ; ನೀನು ಈಗ ಅದನ್ನು ಸಮಾಧಾನದಿಂದ ಹಿಂದಕ್ಕೆ ಕೊಡು ಎಂದು ಹೇಳಿ ಕಳುಹಿಸಿದನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ13 ಅಮ್ಮೋನಿಯ ಅರಸನು ಯೆಫ್ತಾಹನ ದೂತರಿಗೆ, “ಇಸ್ರಾಯೇಲರು ಈಜಿಪ್ಟಿನಿಂದ ಬರುವಾಗ, ಅರ್ನೋನಿನಿಂದ ಯಬ್ಬೋಕಿನವರೆಗೂ ಮತ್ತು ಯೊರ್ದನಿನವರೆಗೂ ಇರುವ ನನ್ನ ದೇಶವನ್ನು ತೆಗೆದುಕೊಂಡರು. ಆದ್ದರಿಂದ ಈಗ ಅದನ್ನು ನನಗೆ ಸಮಾಧಾನವಾಗಿ ತಿರುಗಿಕೊಡು,” ಎಂದನು. ಅಧ್ಯಾಯವನ್ನು ನೋಡಿ |