ನ್ಯಾಯಸ್ಥಾಪಕರು 1:35 - ಪರಿಶುದ್ದ ಬೈಬಲ್35 ಅಮೋರಿಯರು ಹರ್‌ಹೆರೆಸ್ ಪರ್ವತ, ಅಯ್ಯಾಲೋನ್ ಮತ್ತು ಶಾಲ್ಬೀಮ್‌ಗಳಲ್ಲಿ ವಾಸಿಸಬೇಕೆಂದು ನಿರ್ಧರಿಸಿದರು. ತರುವಾಯ ಯೋಸೇಫ್ಯರು ಪ್ರಬಲರಾದರು. ಆಗ ಅವರು ಅಮೋರಿಯರನ್ನು ತಮ್ಮ ಗುಲಾಮರನ್ನಾಗಿ ಮಾಡಿಕೊಂಡರು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201935 ಹೀಗೆ ಅಮೋರಿಯರು ಅಯ್ಯಾಲೋನ್, ಶಾಲ್ಬೀಮ್ ಎಂಬ ಊರುಗಳ ಬಳಿ ಇದ್ದ ಹರ್ ಹೆರೆಸ್ ಎಂಬ ಬೆಟ್ಟದ ಹತ್ತಿರ ವಾಸಿಸಲು ನಿರ್ಧಾರಮಾಡಿಕೊಂಡರು. ಆದರೆ ಯೋಸೇಫನ ಕುಲದವರು ಅವರನ್ನು ಸೋಲಿಸಿ ಗುಲಾಮರನ್ನಾಗಿ ಮಾಡಿಕೊಂಡರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)35 ಹೀಗೆ ಅಮೋರಿಯರು ಹರ್ ಹೆರೆಸ್, ಅಯ್ಯಾಲೋನ್, ಶಾಲ್ಬೀಮ್ ಎಂಬ ಊರುಗಳಲ್ಲೇ ವಾಸಿಸಲು ನಿರ್ಧಾರಮಾಡಿದರು. ಆದರೆ ಜೋಸೆಫ್ ಕುಲದವರ ಪ್ರಭಾವ ಹೆಚ್ಚಾದ ಮೇಲೆ ಅವರಿಗೆ ಗುಲಾಮರಾದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)35 ಹೀಗೆ ಅಮೋರಿಯರು ಹರ್‍ಹೆರೆಸ್, ಅಯ್ಯಾಲೋನ್, ಶಾಲ್ಬೀಮ್ ಎಂಬ ಊರುಗಳಲ್ಲೇ ವಾಸಿಸ ದೃಢಮಾಡಿದರು. ಆದರೆ ಯೋಸೇಫ್ಯರ ಹಸ್ತವು ಭಾರವಾದ ಮೇಲೆ ಅವರಿಗೆ ದಾಸರಾದರು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ35 ಹೀಗೆ ಅಮೋರಿಯರು ಹರ್‌ಹೆರೆಸ್ ಬೆಟ್ಟದಲ್ಲಿಯೂ ಅಯ್ಯಾಲೋನಿನಲ್ಲಿಯೂ ಶಾಲ್ಬೀಮಿನಲ್ಲಿಯೂ ವಾಸಿಸಬೇಕೆಂದಿದ್ದರು. ಆದರೆ ಯೋಸೇಫನ ಗೋತ್ರದವರ ಕೈ ಬಲ ಹೆಚ್ಚಾದದ್ದರಿಂದ ಅವರಿಗೆ ದಾಸರಾದರು. ಅಧ್ಯಾಯವನ್ನು ನೋಡಿ |