ನ್ಯಾಯಸ್ಥಾಪಕರು 1:17 - ಪರಿಶುದ್ದ ಬೈಬಲ್17 ಕಾನಾನ್ಯರಾಗಿದ್ದ ಕೆಲವರು ಚೆಫತ್ ಎಂಬ ನಗರದಲ್ಲಿ ವಾಸ ಮಾಡಿಕೊಂಡಿದ್ದರು. ಯೆಹೂದ್ಯರು ಮತ್ತು ಸಿಮೆಯೋನ್ಯರು ಆ ಕಾನಾನ್ಯರ ಮೇಲೆ ಧಾಳಿಮಾಡಿ ಆ ನಗರವನ್ನು ಸಂಪೂರ್ಣವಾಗಿ ನಾಶಮಾಡಿದರು; ಅಲ್ಲದೆ ಆ ನಗರಕ್ಕೆ ಹೊರ್ಮಾ ಎಂದು ಹೆಸರಿಟ್ಟರು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201917 ತರುವಾಯ ಯೆಹೂದ್ಯರು ತಮ್ಮ ಬಂಧುಗಳಾದ ಸಿಮೆಯೋನ್ಯರ ಸಂಗಡ ಹೋಗಿ ಚೆಫತ್ ಎಂಬ ಪಟ್ಟಣದಲ್ಲಿದ್ದ ಕಾನಾನ್ಯರನ್ನು ಸೋಲಿಸಿ, ಆ ಪಟ್ಟಣವನ್ನು ಹಾಳುಮಾಡಿ ಅದನ್ನು ಹೊರ್ಮಾ ಎಂದು ಕರೆದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)17 ತರುವಾಯ ಯೆಹೂದಕುಲದವರು ತಮ್ಮ ಬಂಧುಗಳಾದ ಸಿಮೆಯೋನ್ ಕುಲದವರ ಸಂಗಡ ಹೋಗಿ ‘ಚೆಫತ್’ ಎಂಬ ಪಟ್ಟಣದಲ್ಲಿದ್ದ ಕಾನಾನ್ಯರನ್ನು ಸೋಲಿಸಿ ಆ ಪಟ್ಟಣವನ್ನು ಹಾಳುಮಾಡಿ ಅದನ್ನು ‘ಹೋರ್ಮಾ’ ಎಂದು ಕರೆದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)17 ತರುವಾಯ ಯೆಹೂದ್ಯರು ತಮ್ಮ ಬಂಧುಗಳಾದ ಸಿಮೆಯೋನ್ಯರ ಸಂಗಡ ಹೋಗಿ ಚೆಫತ್ ಎಂಬ ಪಟ್ಟಣದಲ್ಲಿದ್ದ ಕಾನಾನ್ಯರನ್ನು ಸೋಲಿಸಿ ಆ ಪಟ್ಟಣವನ್ನು ಹಾಳುಮಾಡಿ ಅದನ್ನು ಹೊರ್ಮಾ ಎಂದು ಕರೆದರು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ17 ಯೆಹೂದ ಗೋತ್ರದವರು ತನ್ನ ಸಹೋದರರಾದ ಸಿಮೆಯೋನ್ಯರ ಸಂಗಡ ಹೊರಟು, ಚೆಫೆತ್‌ನಲ್ಲಿ ವಾಸವಾಗಿರುವ ಕಾನಾನ್ಯರ ಮೇಲೆ ದಾಳಿಮಾಡಿ, ಆ ಪಟ್ಟಣವನ್ನು ನಿರ್ಮೂಲ ಮಾಡಿದರು. ಆ ಪಟ್ಟಣವು ಹೊರ್ಮಾ ಎಂದು ಕರೆಯಲಾಗಿತ್ತು. ಅಧ್ಯಾಯವನ್ನು ನೋಡಿ |
ಯೆಹೂದ್ಯರು ತಮ್ಮ ಸಹೋದರರಾದ ಸಿಮೆಯೋನ್ಯರಿಂದ ಸಹಾಯವನ್ನು ಕೇಳಿದರು; ಯೆಹೂದ್ಯರು, “ಸಹೋದರರೇ, ಯೆಹೋವನು ನಮ್ಮಲ್ಲಿ ಪ್ರತಿಯೊಬ್ಬರಿಗೂ ಸ್ವಲ್ಪಸ್ವಲ್ಪ ಭೂಮಿಯನ್ನು ಕೊಡುವುದಾಗಿ ವಾಗ್ದಾನ ಮಾಡಿದ್ದಾನೆ. ನೀವು ಬಂದು ನಮ್ಮ ಭೂಮಿಗಾಗಿ ಹೋರಾಡುವ ಯುದ್ಧದಲ್ಲಿ ಸಹಾಯ ಮಾಡಿದರೆ, ನಿಮ್ಮ ಭೂಮಿಗಾಗಿ ಹೋರಾಡುವ ಯುದ್ಧದಲ್ಲಿ ನಾವು ನಿಮಗೆ ಸಹಾಯ ಮಾಡುತ್ತೇವೆ” ಎಂದು ಹೇಳಿದರು. ಸಿಮೆಯೋನ್ಯರು ತಮ್ಮ ಸಹೋದರರಾದ ಯೆಹೂದ್ಯರಿಗೆ ಯುದ್ಧದಲ್ಲಿ ಸಹಾಯ ಮಾಡಲು ಒಪ್ಪಿಕೊಂಡರು.