ನೆಹೆಮೀಯ 9:25 - ಪರಿಶುದ್ದ ಬೈಬಲ್25 ಬಲಾಢ್ಯ ನಗರಗಳನ್ನು ಸ್ವಾಧೀನಪಡಿಸಿಕೊಂಡರು. ಉತ್ತಮವಾದ ಭೂಮಿಯನ್ನು ವಶಪಡಿಸಿಕೊಂಡರು. ಒಳ್ಳೆಯ ವಸ್ತುಗಳಿಂದ ತುಂಬಿದ್ದ ಮನೆಗಳನ್ನು ಅವರು ವಶಪಡಿಸಿಕೊಂಡರು. ಅಗೆದು ತಯಾರಾಗಿದ್ದ ಬಾವಿಗಳನ್ನು ಅವರಿಗೆ ನೀನು ಕೊಟ್ಟೆ, ದ್ರಾಕ್ಷಿತೋಟವನ್ನು, ಎಣ್ಣೆಮರಗಳ ತೋಪನ್ನು, ಬೇಕಾದಷ್ಟು ಹಣ್ಣಿನ ಮರಗಳನ್ನು ನೀನು ಅವರಿಗೆ ಕೊಟ್ಟೆ. ಅವರ ಹೊಟ್ಟೆ ತುಂಬಿ ಕೊಬ್ಬೇರುವಷ್ಟು ಅವರಿಗೆ ಕೊಟ್ಟೆ. ನೀನು ಕೊಟ್ಟ ಉತ್ತಮವಾದ ವಸ್ತುಗಳಲ್ಲಿ ಅವರು ಆನಂದಿಸಿದರು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201925 ಅವರು ಕೋಟೆಕೊತ್ತಲುಗಳುಳ್ಳ ಪಟ್ಟಣಗಳನ್ನೂ, ಸಾರವುಳ್ಳ ಭೂಮಿಯನ್ನೂ, ಸಮಸ್ತ ವಿಧವಾದ ಉತ್ತಮ ವಸ್ತುಗಳಿಂದ ತುಂಬಿದ ಮನೆಗಳನ್ನೂ, ತೋಡಿದ ಬಾವಿಗಳನ್ನೂ, ದ್ರಾಕ್ಷಿತೋಟಗಳನ್ನೂ, ಎಣ್ಣೇಮರಗಳ ತೋಪುಗಳನ್ನೂ, ಹೆಚ್ಚಾದ ಹಣ್ಣಿನ ಮರ ಇವುಗಳನ್ನೂ ವಶಮಾಡಿಕೊಂಡು ಚೆನ್ನಾಗಿ ತಿಂದು, ಕುಡಿದು ತೃಪ್ತರಾಗಿ ಕೊಬ್ಬಿ, ನೀನು ಕೊಟ್ಟ ಸಮೃದ್ಧಿಯಲ್ಲಿ ಆನಂದಿಸುತ್ತಿದ್ದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)25 ವಶಮಾಡಿಕೊಂಡರು ಕೋಟೆಕೊತ್ತಲುಗಳುಳ್ಳ ಪಟ್ಟಣಗಳನು ಸಾರವತ್ತಾದ ಹೊಲಗಳನು, ಧಾನ್ಯ ತುಂಬಿದ ಮನೆಗಳನು, ತೋಡಿದ ಬಾವಿಗಳನು ದ್ರಾಕ್ಷೀತೋಟಗಳನು, ಎಣ್ಣೇಮರ ತೋಪುಗಳನು, ನಾನಾಫಲವೃಕ್ಷಗಳನು. ತಿಂದು ತೃಪ್ತರಾದರು, ಕೊಬ್ಬಿದರು, ನೀವಿತ್ತ ಸಮೃದ್ಧಿಯಲಿ ನಲಿದಾಡಿದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)25 ಅವರು ಕೋಟೆ ಕೊತ್ತಲುಗಳುಳ್ಳ ಪಟ್ಟಣಗಳನ್ನೂ ಸಾರವುಳ್ಳ ಭೂವಿುಯನ್ನೂ ಸಮಸ್ತ ವಿಧವಾದ ಉತ್ತಮವಸ್ತುಗಳಿಂದ ತುಂಬಿದ ಮನೆಗಳನ್ನೂ ತೋಡಿದ ಬಾವಿಗಳನ್ನೂ ದ್ರಾಕ್ಷೇತೋಟ, ಎಣ್ಣೇಮರಗಳ ತೋಪು, ಎಷ್ಟೋ ಹಣ್ಣಿನ ಮರ ಇವುಗಳನ್ನೂ ವಶಮಾಡಿಕೊಂಡು ಚೆನ್ನಾಗಿ ತಿಂದು ತೃಪ್ತರಾಗಿ ಕೊಬ್ಬಿ ನೀನು ಕೊಟ್ಟ ಸಮೃದ್ಧಿಯಲ್ಲಿ ಆನಂದಿಸುತ್ತಿದ್ದರು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ25 ಅವರು ಕೋಟೆ ಪಟ್ಟಣಗಳನ್ನೂ, ರಸವತ್ತಾದ ಭೂಮಿಯನ್ನೂ ವಶಪಡಿಸಿಕೊಂಡರು. ಉತ್ತಮವಾದವುಗಳಿಂದ ತುಂಬಿದ ಮನೆಗಳನ್ನೂ, ಅಗಿದ ಬಾವಿಗಳನ್ನೂ, ದ್ರಾಕ್ಷಿತೋಟಗಳನ್ನೂ, ಓಲಿವ್ ತೋಪುಗಳನ್ನೂ, ಸಮೃದ್ಧಿಯಾದ ಹಣ್ಣಿನ ಮರಗಳನ್ನೂ ಸ್ವಾಧೀನಮಾಡಿಕೊಂಡರು. ಹೀಗೆ ಅವರು ತಿಂದು ತೃಪ್ತಿಪಟ್ಟು, ಪುಷ್ಟಿಯಾಗಿ ನಿಮ್ಮ ಮಹಾ ಉಪಕಾರದಲ್ಲಿ ಆನಂದಿಸುತ್ತಿದ್ದರು. ಅಧ್ಯಾಯವನ್ನು ನೋಡಿ |
“ಶ್ರೀಮಂತ ದೇಶಗಳು ನೆಮ್ಮದಿಯಿಂದಿರುವಾಗ ಈ ಕ್ರೂರಿಯು ಪೂರ್ವ ಸೂಚನೆಯಿಲ್ಲದೆ ಅವುಗಳ ಮೇಲೆ ದಾಳಿ ಮಾಡುವನು. ಅವನು ಸರಿಯಾದ ಸಮಯಕ್ಕೆ ದಾಳಿಮಾಡುವನು; ಅವನ ಪೂರ್ವಿಕರು ವಿಫಲರಾದ ದೇಶಗಳಲ್ಲಿ ಜಯ ಸಂಪಾದಿಸುವನು. ಅವನು ಸೋಲಿಸಿದ ದೇಶಗಳನ್ನು ಕೊಳ್ಳೆಹೊಡೆದು ದೊರೆತ ಸಂಪತ್ತನ್ನು ತನ್ನ ಅನುಯಾಯಿಗಳಲ್ಲಿ ಹಂಚುವನು. ಅವನು ಭದ್ರವಾದ ನಗರಗಳನ್ನು ಹಿಡಿದುಕೊಳ್ಳಲು ಮತ್ತು ನಾಶಮಾಡಲು ಯೋಜನೆಗಳನ್ನು ಮಾಡುವನು. ಅವನಿಗೆ ಜಯಸಿಕ್ಕಿದರೂ ಅದು ಸ್ವಲ್ಪ ಕಾಲದವರೆಗೆ ಮಾತ್ರ ಇರುತ್ತದೆ.