ನೆಹೆಮೀಯ 7:5 - ಪರಿಶುದ್ದ ಬೈಬಲ್5 ಆದ್ದರಿಂದ ನನ್ನ ದೇವರು ನಮ್ಮ ಜನರನ್ನು ಒಟ್ಟುಗೂಡಿಸುವಂತೆ ನನ್ನನ್ನು ಪ್ರೇರೇಪಿಸಿದನು. ಅಂತೆಯೇ ನಾನು ಎಲ್ಲಾ ಗಣ್ಯರನ್ನು, ಅಧಿಕಾರಿಗಳನ್ನು ಮತ್ತು ಸಾಮಾನ್ಯರನ್ನು ಒಟ್ಟಾಗಿ ಸೇರಿಬರಲು ಆಮಂತ್ರಿಸಿದೆನು. ಇವರ ಕುಟುಂಬಗಳ ಪಟ್ಟಿಯನ್ನು ನಾನು ಮಾಡಬೇಕಿತ್ತು. ಮೊಟ್ಟಮೊದಲನೆಯ ಸಾರಿ ಸೆರೆಯಿಂದ ಹಿಂತಿರುಗಿ ಬಂದ ಸಂಸಾರಗಳ ಪಟ್ಟಿಯು ನನಗೆ ದೊರೆಯಿತು. ಅದರ ವಿವರ ಹೀಗಿದೆ: ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20195 ಹೀಗಿರಲಾಗಿ ನಾನು ನನ್ನ ದೇವರ ಪ್ರೇರಣೆಯಿಂದ ಗಣ್ಯರನ್ನು, ಶ್ರೀಮಂತರನ್ನೂ, ಅಧಿಕಾರಿಗಳನ್ನೂ, ಸಾಧಾರಣ ಜನರನ್ನೂ ಜನಗಣತಿಗಾಗಿ ಸಭೆಸೇರಿಸಿದನು. ಆಗ ಯೆರೂಸಲೇಮಿಗೆ ಮೊದಲು ಬಂದವರ ಹೆಸರುಗಳ ಪಟ್ಟಿಯು ನನಗೆ ಸಿಕ್ಕಿತು. ಅದರಲ್ಲಿ ಬರೆದಿದ್ದೇನೆಂದರೆ, ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)5 ಹೀಗಿರಲು, ನಾನು ನನ್ನ ದೇವರ ಪ್ರೇರಣೆಯಿಂದ ಶ್ರೀಮಂತರನ್ನು, ಅಧಿಕಾರಿಗಳನ್ನು ಹಾಗು ಜನಸಾಮಾನ್ಯರನ್ನು ಜನಗಣತಿಗಾಗಿ ಸಭೆಸೇರಿಸಿದೆ. ಆಗ ಜೆರುಸಲೇಮಿಗೆ ಮೊದಲು ಹಿಂದಿರುಗಿ ಬಂದವರ ಹೆಸರುಗಳ ಪಟ್ಟಿ ನನಗೆ ಸಿಕ್ಕಿತು. ಅದರಲ್ಲಿ ಹೀಗೆ ಬರೆದಿತ್ತು: ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)5 ಹೀಗಿರಲಾಗಿ ನಾನು ನನ್ನ ದೇವರ ಪ್ರೇರಣೆಯಿಂದ ಶ್ರೀಮಂತರನ್ನೂ ಅಧಿಕಾರಿಗಳನ್ನೂ ಸಾಧಾರಣಜನರನ್ನೂ ಖಾನೇಷುಮಾರಿಗೋಸ್ಕರ ಕೂಡಿಸಿದೆನು. ಆಗ [ಯೆರೂಸಲೇವಿುಗೆ] ಮೊದಲು ಬಂದವರ ಹೆಸರುಗಳ ಪಟ್ಟಿಯು ನನಗೆ ಸಿಕ್ಕಿತು. ಅದರಲ್ಲಿ ಬರೆದಿದ್ದದ್ದೇನಂದರೆ - ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ5 ತರುವಾಯ ಅವರು ವಂಶಾವಳಿಯಿಂದ ಲೆಕ್ಕಿಸುವ ಹಾಗೆ ಶ್ರೇಷ್ಠರನ್ನೂ, ಅಧಿಕಾರಸ್ಥರನ್ನೂ, ಸಾಮಾನ್ಯ ಜನರನ್ನೂ ಸಭೆಯಾಗಿಸೇರಲು, ನನ್ನ ದೇವರು ನನ್ನ ಹೃದಯದಲ್ಲಿ ಪ್ರೇರೇಪಿಸಿದರು. ಆಗ ನಾನು ಮೊದಲು ಬಂದವರ ವಂಶಾವಳಿಯ ಪಟ್ಟಿಯನ್ನು ಕಂಡೆನು. ಅದರಲ್ಲಿ ಬರೆದದ್ದೇನೆಂದರೆ: ಅಧ್ಯಾಯವನ್ನು ನೋಡಿ |