ನೆಹೆಮೀಯ 7:1 - ಪರಿಶುದ್ದ ಬೈಬಲ್1 ಗೋಡೆಯ ಕೆಲಸ ಪೂರ್ತಿಯಾದ ಬಳಿಕ ದ್ವಾರಗಳಿಗೆ ಬಾಗಿಲುಗಳನ್ನು ಇಡಲು ಪ್ರಾರಂಭಿಸಿದೆವು; ಬಾಗಿಲುಗಳಿಗೆ ಕಾವಲುಗಾರರನ್ನು ನೇಮಿಸಿದೆವು. ದೇವಾಲಯದಲ್ಲಿ ಬೇಕಾಗಿರುವ ಗಾಯಕರನ್ನು ಮತ್ತು ಯಾಜಕರಿಗೆ ಬೇಕಾದ ಸಹಾಯಕರನ್ನು ಆರಿಸಿದೆವು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20191 ಗೋಡೆಯನ್ನು ಕಟ್ಟಿ ಮುಗಿಸಿದ ನಂತರ ನಾನು ಬಾಗಿಲುಗಳನ್ನು ಇರಿಸಿದೆನು; ದ್ವಾರಪಾಲಕರನ್ನೂ, ಗಾಯಕರನ್ನೂ, ಲೇವಿಯರನ್ನೂ ನೇಮಿಸಲಾಯಿತು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)1 ಗೋಡೆಯನ್ನು ಕಟ್ಟಿ ಮುಗಿಸಿದನಂತರ ನಾನು ಕದಗಳನ್ನು ಹಚ್ಚಿಸಿದೆ; ದ್ವಾರಪಾಲಕರನ್ನೂ ಗಾಯಕರನ್ನೂ ಲೇವಿಯರನ್ನೂ ನೇಮಿಸಲಾಯಿತು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)1 ಗೋಡೆಯನ್ನು ಕಟ್ಟಿ ತೀರಿಸಿದ ನಂತರ ನಾನು ಕದಗಳನ್ನು ಹಚ್ಚಿಸಿದೆನು; ದ್ವಾರಪಾಲಕರೂ ಗಾಯಕರೂ ಲೇವಿಯರೂ ನೇವಿುಸಲ್ಪಟ್ಟರು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ1 ನಾನು ಗೋಡೆಯನ್ನು ಪುನಃ ಕಟ್ಟಿಸಿ, ಬಾಗಿಲುಗಳನ್ನು ನಿಲ್ಲಿಸಿ, ತರುವಾಯ ಬಾಗಿಲು ಕಾಯುವವರನ್ನು, ಹಾಡುಗಾರರನ್ನು, ಲೇವಿಯರನ್ನು ನೇಮಿಸಿದೆನು. ಅಧ್ಯಾಯವನ್ನು ನೋಡಿ |
ಯಾಜಕರೂ ಲೇವಿಯರೂ ಬೇರೆಬೇರೆ ಗುಂಪುಗಳಾಗಿ ವಿಭಾಗಿಸಲ್ಪಟ್ಟಿದ್ದರು. ಪ್ರತಿಯೊಂದು ಗುಂಪಿನವರಿಗೂ ಪ್ರತ್ಯೇಕವಾದ ಸೇವಾಕಾರ್ಯವು ಕೊಡಲ್ಪಟ್ಟಿತ್ತು. ಅರಸನಾದ ಹಿಜ್ಕೀಯನು ಅವರ ಕೆಲಸಗಳನ್ನು ಮತ್ತೆ ಪ್ರಾರಂಭಿಸಲು ಈ ಗುಂಪಿನವರಿಗೆ ಹೇಳಿದನು. ಹೀಗೆ ಯಾಜಕರೂ ಲೇವಿಯರೂ ಮತ್ತೆ ಸರ್ವಾಂಗಹೋಮಗಳನ್ನೂ ಸಮಾಧಾನಯಜ್ಞಗಳನ್ನೂ ಸಮರ್ಪಿಸುತ್ತಿದ್ದರು. ಅಲ್ಲದೆ ದೇವಾಲಯದೊಳಗೆ ದೇವರಿಗೆ ಸ್ತುತಿಗೀತೆ ಹಾಡುವ ಕೆಲಸವೂ ಅವರದೇ ಆಗಿತ್ತು.
ಇಸ್ರೇಲ್ ಜನರು ಮತ್ತು ಲೇವಿಯರು ತಮ್ಮ ಕಾಣಿಕೆಗಳಾದ ದವಸಧಾನ್ಯ, ಹೊಸ ದ್ರಾಕ್ಷಾರಸ, ಎಣ್ಣೆ ಇವುಗಳನ್ನು ತಂದು ದೇವಾಲಯದ ಉಗ್ರಾಣಗಳಲ್ಲಿ ಇಡಬೇಕು. ದೇವಾಲಯಕ್ಕೋಸ್ಕರ ಮೀಸಲಾದ ಎಲ್ಲಾ ವಸ್ತುಗಳನ್ನು ಆ ಉಗ್ರಾಣಗಳಲ್ಲಿ ಇಡಬೇಕು. ಕೆಲಸದಲ್ಲಿ ನಿರತರಾಗಿರುವ ಯಾಜಕರು, ಗಾಯಕರು, ದ್ವಾರಪಾಲಕರು ಅಲ್ಲೇ ಇರಬೇಕು. “ನಮ್ಮ ದೇವರ ಆಲಯವನ್ನು ನಾವು ನೋಡಿಕೊಳ್ಳುವುದಾಗಿ ನಾವೆಲ್ಲರೂ ಪ್ರಮಾಣಮಾಡುತ್ತೇವೆ!”
ಜೆರುಸಲೇಮಿನ ದೇವಾಲಯಕ್ಕೆ ಬಂದ ಎರಡನೆಯ ವರ್ಷದ ಎರಡನೆಯ ತಿಂಗಳಲ್ಲಿ ಶೆಯಲ್ತಿಯೇಲನ ಮಗನಾದ ಜೆರುಬ್ಬಾಬೆಲ್ ಮತ್ತು ಯೋಚಾದಾಕನ ಮಗನಾದ ಯೇಷೂವನು ಕೆಲಸವನ್ನು ಪ್ರಾರಂಭಿಸಿದರು. ಅವರ ಸಹೋದರರು, ಯಾಜಕರು, ಲೇವಿಯರು ಮತ್ತು ಅವರೊಂದಿಗೆ ಸೆರೆಯಿಂದ ಬಂದವರೆಲ್ಲರೂ ಕೆಲಸ ಮಾಡಿದರು. ಇಪ್ಪತ್ತು ವರ್ಷ ಮತ್ತು ಅದಕ್ಕೆ ಮೇಲ್ಪಟ್ಟ ಲೇವಿಯವರನ್ನು ಮೇಲ್ವಿಚಾರಕರನ್ನಾಗಿ ಅವರು ನೇಮಿಸಿದರು.