ನೆಹೆಮೀಯ 5:2 - ಪರಿಶುದ್ದ ಬೈಬಲ್2 ಕೆಲವರು ಹೀಗಂದರು: “ನಮ್ಮ ಮನೆಯಲ್ಲಿ ಬಹಳ ಮಕ್ಕಳಿದ್ದಾರೆ. ನಮಗೆ ಊಟಮಾಡಲು ಸಾಕಷ್ಟು ದವಸಧಾನ್ಯವಿಲ್ಲ; ಹೀಗಿರಲು ನಾವು ಜೀವಂತವಾಗಿ ಉಳಿಯುವ ಸಾಧ್ಯತೆಯಿಲ್ಲ.” ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20192 ಅವರಲ್ಲಿ ಕೆಲವರು, “ನಾವೂ ನಮ್ಮ ಗಂಡು ಹೆಣ್ಣು ಮಕ್ಕಳೂ ಬಹು ಮಂದಿ ಇದ್ದೇವೆ; ನಮ್ಮ ಜೀವನಕ್ಕಾಗಿ ಧಾನ್ಯವು ಬೇಕಾಗಿದೆ” ಎಂದು ಹೇಳಿದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)2 ಕೆಲವರು, “ನಮಗೆ ಗಂಡುಹೆಣ್ಣು ಮಕ್ಕಳು ಬಹುಮಂದಿ ಇದ್ದಾರೆ; ನಮ್ಮ ಜೀವನಕ್ಕಾಗಿ ಕಾಳುಕಡ್ಡಿಗಳನ್ನು ಹೇಗಾದರೂ ಸಂಪಾದಿಸಿಕೊಳ್ಳಬೇಕಾಗಿ ಇದೆ,” ಎಂದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)2 ಕೆಲವರು - ನಾವೂ ನಮ್ಮ ಗಂಡುಹೆಣ್ಣು ಮಕ್ಕಳೂ ಬಹುಮಂದಿ ಇದ್ದೇವೆ; ನಮ್ಮ ಜೀವನಕ್ಕಾಗಿ ಕಾಳುಕಡ್ಡಿಗಳನ್ನು ಹೇಗಾದರೂ ಸಂಪಾದಿಸಿಕೊಳ್ಳೋಣ; ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ2 ಅವರಲ್ಲಿ ಕೆಲವರು, “ನಾವೂ, ನಮ್ಮ ಪುತ್ರರೂ, ನಮ್ಮ ಪುತ್ರಿಯರೂ ಅನೇಕರಾದುದರಿಂದ ನಾವು ಬದುಕುವ ಹಾಗೆ ಧಾನ್ಯವನ್ನು ತೆಗೆದುಕೊಳ್ಳೋಣ,” ಎಂದರು. ಅಧ್ಯಾಯವನ್ನು ನೋಡಿ |
ಒಂದು ದಿನ ಪ್ರವಾದಿಮಂಡಲಿಯವರಲ್ಲೊಬ್ಬನ ಪತ್ನಿಯು ಗೋಳಾಡುತ್ತಾ ಎಲೀಷನಲ್ಲಿಗೆ ಹೋಗಿ, “ನನ್ನ ಗಂಡನು ನಿನಗೆ ಸೇವಕನಂತಿದ್ದನು. ಈಗ ನನ್ನ ಗಂಡ ಸತ್ತಿದ್ದಾನೆ! ಅವನು ಯೆಹೋವನಲ್ಲಿ ಭಯಭಕ್ತಿ ಉಳ್ಳವನಾಗಿದ್ದದು ನಿನಗೆ ತಿಳಿದಿದೆ. ಆದರೆ ಅವನು ಒಬ್ಬ ಮನುಷ್ಯನಿಗೆ ಹಣವನ್ನು ಕೊಡಬೇಕಾಗಿದೆ. ಈಗ ಆ ಮನುಷ್ಯನು ನನ್ನ ಎರಡು ಗಂಡುಮಕ್ಕಳನ್ನು ತೆಗೆದುಕೊಂಡು ತನ್ನ ಗುಲಾಮರನ್ನಾಗಿ ಮಾಡಿಕೊಳ್ಳಲು ಬರುತ್ತಿದ್ದಾನೆ!” ಎಂದು ಹೇಳಿದಳು.
ನೀವು ಬಹಳ ಬೀಜವನ್ನು ಭೂಮಿಯಲ್ಲಿ ಬಿತ್ತಿದ್ದರೂ ಸ್ವಲ್ಪವೇ ಪೈರನ್ನು ಕೊಯ್ದಿದ್ದೀರಿ. ನಿಮಗೆ ಊಟಮಾಡಲು ಆಹಾರವಿದ್ದರೂ ತೃಪ್ತಿಯಾಗುವಷ್ಟಿಲ್ಲ. ನಿಮ್ಮಲ್ಲಿ ಕುಡಿಯಲು ಸ್ವಲ್ಪ ಪಾನೀಯವಿದ್ದರೂ ಕುಡಿದು ಅಮಲೇರುವಷ್ಟು ಇಲ್ಲ. ನಿಮ್ಮಲ್ಲಿ ತೊಟ್ಟುಕೊಳ್ಳಲು ಸ್ವಲ್ಪ ಬಟ್ಟೆಯಿದ್ದರೂ ನಿಮ್ಮನ್ನು ಬೆಚ್ಚಗಿಟ್ಟುಕೊಳ್ಳುವಷ್ಟು ಇಲ್ಲ. ನೀವು ಸ್ವಲ್ಪ ಹಣ ಸಂಪಾದನೆ ಮಾಡಿದರೂ ಅದು ಹೇಗೆ ಖರ್ಚಾಗುತ್ತದೋ ನಿಮಗೆ ತಿಳಿಯುವುದಿಲ್ಲ. ನಿಮ್ಮ ಜೇಬಿಗೆ ರಂಧ್ರ ಇದೆಯೋ ಎಂಬಂತೆ ಅದು ಖರ್ಚಾಗುತ್ತದೆ.’”