ನೆಹೆಮೀಯ 4:7 - ಪರಿಶುದ್ದ ಬೈಬಲ್7 ಸನ್ಬಲ್ಲಟನು, ಟೋಬೀಯನು, ಅರಬಿಯರು, ಅಮ್ಮೋನಿಯರು ಮತ್ತು ಅಷ್ಡೋದಿನವರು ತುಂಬಾ ಕೋಪಗೊಂಡಿದ್ದರು. ಯಾಕೆಂದರೆ ಜೆರುಸಲೇಮಿನ ಗೋಡೆಯ ಕೆಲಸ ಮುಂದುವರಿಯುತ್ತಿದೆಯೆಂದೂ ಮತ್ತು ಗೋಡೆಗಳ ಕಿಂಡಿಗಳನ್ನು ರಿಪೇರಿ ಮಾಡಲಾಗುತ್ತಿದೆಯೆಂದೂ ಅವರು ಕೇಳಿದ್ದರು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20197 ಸನ್ಬಲ್ಲಟನೂ, ಟೋಬೀಯನೂ, ಅರಬಿಯರೂ, ಅಮ್ಮೋನಿಯರೂ, ಅಷ್ಡೋದಿನವರೂ ಯೆರೂಸಲೇಮಿನ ಗೋಡೆಯ ಜೀರ್ಣೋದ್ಧಾರ ಕಾರ್ಯವು ಮುಂದುವರಿದು, ಅದರ ಸಂದುಗಳು ತಿರುಗಿ ಸರಿಯಾಗುತ್ತಾ ಬರುವುದನ್ನು ಕೇಳಿ ಬಹುಕೋಪಗೊಂಡರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)7 ಸನ್ಬಲ್ಲಟನು, ಟೋಬೀಯನು, ಅರೇಬಿಯರು, ಅಮ್ಮೋನಿಯರು ಹಾಗು ಅಷ್ಡೋದಿನವರು ಜೆರುಸಲೇಮಿನ ಗೋಡೆಯ ದುರಸ್ತಿಕಾರ್ಯ ಮುಂದುವರಿದಿದೆ ಹಾಗು ಅದರ ಸಂದುಗಳು ಮತ್ತೆ ಮುಚ್ಚಿಕೊಳ್ಳುತ್ತಿವೆ ಎಂಬುದನ್ನು ಕೇಳಿದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)7 ಸನ್ಬಲ್ಲಟನೂ ಟೋಬೀಯನೂ ಅರಬಿಯರೂ ಅಮ್ಮೋನಿಯರೂ ಅಷ್ಡೋದಿನವರೂ ಯೆರೂಸಲೇವಿುನ ಗೋಡೆಯ ಜೀರ್ಣೋದ್ಧಾರಕಾರ್ಯವು ಮುಂದರಿದು ಅದರ ಸಂದುಗಳು ತಿರಿಗಿ ಕೂಡುತ್ತಾ ಬರುವದನ್ನು ಕೇಳಿ ಬಹುಕೋಪವುಳ್ಳವರಾಗಿ - ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ7 ಯೆರೂಸಲೇಮಿನ ಗೋಡೆಯ ದುರಸ್ತಿಕಾರ್ಯ ಮುಂದುವರಿದಿದೆ ಹಾಗು ಅದರ ಸಂದುಗಳು ಮತ್ತೆ ಮುಚ್ಚಿಕೊಳ್ಳುತ್ತಿವೆ ಎಂದು ಸನ್ಬಲ್ಲಟನೂ ಟೋಬೀಯನೂ ಅರಬಿಯರೂ ಅಮ್ಮೋನ್ಯರೂ ಅಷ್ಡೋದ್ಯರೂ ಕೇಳಿದಾಗ ಬಹು ಕೋಪಗೊಂಡರು. ಅಧ್ಯಾಯವನ್ನು ನೋಡಿ |
ರಾಜನೇ, ನಾವು ಯೆಹೂದ ಪ್ರಾಂತ್ಯವನ್ನು ಸಂದರ್ಶಿಸಿದ್ದೇವೆಂದು ನಿಮಗೆ ತಿಳಿಸುತ್ತೇವೆ. ಅಲ್ಲಿ ಮಹೋನ್ನತ ದೇವರ ಆಲಯವನ್ನು ನೋಡಿದೆವು. ಯೆಹೂದ ಪ್ರಾಂತ್ಯದ ಜನರು ದೊಡ್ಡ ಕಲ್ಲುಗಳಿಂದ ದೇವಾಲಯವನ್ನು ಕಟ್ಟುತ್ತಿದ್ದಾರೆ. ದೊಡ್ಡದೊಡ್ಡ ಮರದ ತೊಲೆಗಳನ್ನು ಗೋಡೆಯ ಮೇಲೆ ಕುಳ್ಳಿರಿಸಿದ್ದಾರೆ. ಯೆಹೂದ ಪ್ರಾಂತ್ಯದ ಜನರು ಜಾಗರೂಕತೆಯಿಂದಲೂ ತುಂಬ ಪ್ರಯಾಸದಿಂದಲೂ ಕಾರ್ಯವನ್ನು ನಡಿಸುತ್ತಿದ್ದಾರೆ. ಬಹಳ ವೇಗವಾಗಿ ಕೆಲಸ ಮುಂದುವರಿಯುತ್ತಿರುವದರಿಂದ ದೇವಾಲಯವು ಬೇಗನೆ ಸಂಪೂರ್ಣವಾಗಬಹುದು.
ಅಷ್ಡೋದ್ ಮತ್ತು ಈಜಿಪ್ಟಿನ ಉನ್ನತ ಬುರುಜುಗಳ ಬಳಿಗೆ ಹೋಗಿ ಈ ಸಂದೇಶವನ್ನು ಸಾರಿರಿ, “ಸಮಾರ್ಯದ ಪರ್ವತಗಳ ಬಳಿಗೆ ಬನ್ನಿರಿ. ಅಲ್ಲಿ ಒಂದು ದೊಡ್ಡ ಗಲಿಬಿಲಿಯನ್ನು ನೋಡುವಿರಿ. ಯಾಕೆಂದರೆ ಜನರಿಗೆ ಸರಿಯಾಗಿ ಜೀವಿಸುವ ರೀತಿ ಗೊತ್ತಿಲ್ಲ. ಅವರು ಜನರೊಂದಿಗೆ ಕ್ರೂರವಾಗಿ ವರ್ತಿಸುವರು. ಬೇರೆ ಜನರಿಂದ ವಸ್ತುಗಳನ್ನು ತೆಗೆದುಕೊಂಡು ಅವುಗಳನ್ನು ಉನ್ನತ ಬುರುಜುಗಳಲ್ಲಿ ಅಡಗಿಸಿಡುವರು. ಯುದ್ಧದಲ್ಲಿ ಸೂರೆ ಮಾಡಿದ ವಸ್ತುಗಳಿಂದ ಅವರ ಖಜಾನೆಯು ತುಂಬಿರುವದು.”
ಮಿಚ್ಫ ನಗರದಲ್ಲಿ ಉಳಿದೆಲ್ಲ ಜನರನ್ನು ಇಷ್ಮಾಯೇಲನು ವಶಪಡಿಸಿಕೊಂಡನು. ಅವರಲ್ಲಿ ರಾಜನ ಹೆಣ್ಣಮಕ್ಕಳು ಮತ್ತು ಅಲ್ಲಿದ್ದ ಬೇರೆ ಜನರೂ ಸೇರಿದ್ದರು. ಆ ಜನರನ್ನು ನೋಡಿಕೊಳ್ಳಲೆಂದು ನೆಬೂಜರದಾನನು ಗೆದಲ್ಯನನ್ನು ನೇಮಿಸಿದ್ದನು. ನೆಬೂಜರದಾನನು ಬಾಬೆಲಿನ ರಾಜನ ವಿಶೇಷ ರಕ್ಷಕದಳದ ಅಧಿಪತಿಯಾಗಿದ್ದನು. ಇಷ್ಮಾಯೇಲನು ಆ ಜನರನ್ನು ಸೆರೆಹಿಡಿದು ಅವರನ್ನು ತೆಗೆದುಕೊಂಡು ಅಮ್ಮೋನ್ಯರ ಸೀಮೆಗೆ ಹೊರಟನು.