Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ನೆಹೆಮೀಯ 3:8 - ಪರಿಶುದ್ದ ಬೈಬಲ್‌

8 ಹರ್ಹಯನ ಮಗನಾದ ಉಜ್ಜೀಯೇಲನು ಅಲ್ಲಿಂದಾಚೆಗೆ ಕಟ್ಟಿದನು. ಉಜ್ಜೀಯೇಲನು ಅಕ್ಕಸಾಲಿಗನಾಗಿದ್ದನು; ಹನನ್ಯನು ಸುಗಂಧದ್ರವ್ಯವನ್ನು ತಯಾರುಮಾಡುತ್ತಿದ್ದನು. ಇವರು, “ಅಗಲಗೋಡೆ”ಯವರೆಗೂ ಜೆರುಸಲೇಮ್ ಗೋಡೆಯನ್ನು ಕಟ್ಟಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

8 ಇದಾದ ನಂತರ ಹರ್ಹಯನ ಮಗನಾದ ಅಕ್ಕಸಾಲಿಗನಾದ ಉಜ್ಜೀಯೇಲ್; ಆ ಮೇಲೆ ಗಾಣಿಗನಾದ ಹನನ್ಯ; ಇವರು ಅಗಲವಾದ ಗೋಡೆಯವರೆಗೂ ಯೆರೂಸಲೇಮನ್ನು ಕಟ್ಟಿ ಭದ್ರಪಡಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

8 ಇವರ ಆಚೆಗೆ ಹರ್ಹಯನ ಮಗನಾದ ಅಕ್ಕಸಾಲಿಗರ ಉಜ್ಜೀಯೇಲ್; ಆಮೇಲೆ ಬುಕ್ಕಿಟ್ಟುಗಾರರ ಹನನ್ಯ; ಇವರು ಅಗಲಗೋಡೆಯೆನಿಸಿಕೊಳ್ಳುವ ಗೋಡೆಯ ಆಚೆಗಿರುವ ಜೆರುಸಲೇಮಿನ ಭಾಗವನ್ನು ಗೋಡೆಯೊಳಗೆ ಸೇರಿಸಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

8 ಇದರ ಆಚೆಗೆ ಹರ್ಹಯನ ಮಗನಾದ ಅಕ್ಕಸಾಲಿಗರ ಉಜ್ಜೀಯೇಲ್; ಆಮೇಲೆ ಬುಕ್ಕಿಟ್ಟುಗಾರರ ಹನನ್ಯ; ಇವರು ಅಗಲ ಗೋಡೆಯೆನಿಸಿಕೊಳ್ಳುವ ಗೋಡೆಯ ಈಚೆಗಿರುವ ಯೆರೂಸಲೇವಿುನ ಭಾಗವನ್ನು ಗೋಡೆಯೊಳಗೆ ಸೇರಿಸಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

8 ಇದರ ಆಚೆಗೆ ಹರ್ಹಯನ ಮಗನಾದ ಅಕ್ಕಸಾಲಿಗರ ಉಜ್ಜೀಯೇಲ್, ಆಮೇಲೆ ಗಾಣಿಗನಾದ ಹನನ್ಯ, ಇವರು ಅಗಲವಾದ ಗೋಡೆಯವರೆಗೂ ಯೆರೂಸಲೇಮನ್ನು ಕಟ್ಟಿ ಭದ್ರಪಡಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ನೆಹೆಮೀಯ 3:8
6 ತಿಳಿವುಗಳ ಹೋಲಿಕೆ  

ಗಾಯಕರ ಇನ್ನೊಂದು ಗುಂಪು ಮೊದಲಿನವರನ್ನು ಎದುರುಗೊಳ್ಳುವಂತೆ ಎಡಗಡೆಗೆ ತಿರುಗಿದರು. ನಾನು ಅವರನ್ನು ಹಿಂಬಾಲಿಸುತ್ತಾ ಗೋಡೆಯ ಮೇಲೆ ಬಂದೆನು. ಅರ್ಧಜನರು ಅವರನ್ನು ಹಿಂಬಾಲಿಸಿ ಕುಲುಮೆಯ ಬುರುಜು ದಾಟಿ ಅಗಲದ ಗೋಡೆಗೆ ಬಂದರು.


ಕೆಲವರು ಬೆಳ್ಳಿಬಂಗಾರಗಳಲ್ಲಿ ಐಶ್ವರ್ಯವಂತರಾಗಿದ್ದಾರೆ. ಅವರ ಕೈಚೀಲಗಳಿಂದ ಬಂಗಾರವು ಉದುರುತ್ತವೆ, ಅವರು ತಕ್ಕಡಿಯಲ್ಲಿ ಬೆಳ್ಳಿಯನ್ನು ತೂಗುತ್ತಾರೆ; ಕುಶಲಕರ್ಮಿಗಳಿಗೆ ಹಣಕೊಟ್ಟು ಮರದಿಂದ ವಿಗ್ರಹವನ್ನು ಮಾಡಿಸಿಕೊಳ್ಳುತ್ತಾರೆ. ಆಮೇಲೆ ಅವರು ಆ ವಿಗ್ರಹಕ್ಕೆ ಅಡ್ಡಬಿದ್ದು ಪೂಜೆ ಮಾಡುತ್ತಾರೆ.


ಸತ್ತ ನೊಣಗಳಿಂದ ಉತ್ತಮವಾದ ಪರಿಮಳತೈಲವು ದುರ್ವಾಸನೆ ಬೀರುವುದು. ಅದೇರೀತಿಯಲ್ಲಿ ಚಿಕ್ಕ ಮೂಢತನವು ಬಹುಜ್ಞಾನವನ್ನೂ ಸನ್ಮಾನವನ್ನೂ ಹಾಳುಮಾಡಬಲ್ಲದು.


“ಸುವಾಸನೆಯುಳ್ಳ ಪವಿತ್ರ ಅಭಿಷೇಕತೈಲವನ್ನು ಮಾಡಲು ಇವುಗಳನ್ನೆಲ್ಲ ಒಟ್ಟಿಗೆ ಬೆರೆಸು.


ಯೋಸೇಫನು ತನ್ನ ತಂದೆಯ ಶವವನ್ನು ಸಿದ್ಧಪಡಿಸಲು ತನ್ನ ಸೇವಕರಾದ ವೈದ್ಯರಿಗೆ ಹೇಳಿದನು. ಆ ವೈದ್ಯರು ಯಾಕೋಬನ ಶರೀರವನ್ನು ಸಮಾಧಿಮಾಡಲು ಸಿದ್ಧಪಡಿಸಿದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು