Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ನೆಹೆಮೀಯ 2:10 - ಪರಿಶುದ್ದ ಬೈಬಲ್‌

10 ನಾನು ಏನು ಮಾಡುತ್ತಿದ್ದೇನೆಂದು ಸನ್ಬಲ್ಲಟ್ ಮತ್ತು ಟೋಬೀಯ ಎಂಬವರಿಬ್ಬರು ಕೇಳಿಸಿಕೊಂಡರು. ಇಸ್ರೇಲ್ ಜನರಿಗೆ ಸಹಾಯ ಮಾಡಲು ಬರುತ್ತಿದ್ದಾರೆಂಬ ವಿಷಯವು ಅವರನ್ನು ತಳಮಳಗೊಳಿಸಿತು ಮತ್ತು ಅವರಿಗೆ ಸಿಟ್ಟೂ ಬಂದಿತು. ಸನ್ಬಲ್ಲಟನು ಹೋರೋನಿನವನು ಮತ್ತು ಟೋಬೀಯನು ಅಮ್ಮೋನಿಯ ಅಧಿಕಾರಿಯಾಗಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

10 ಇಸ್ರಾಯೇಲರ ಹಿತಚಿಂತಕನೊಬ್ಬನು ಬಂದಿದ್ದಾನೆಂಬ ವರ್ತಮಾನವು ಹೋರೋನ್ ಪಟ್ಟಣದವನಾದ ಸನ್ಬಲ್ಲಟನಿಗೂ, ಅಮ್ಮೋನ್ ದೇಶದವನಾದ ಟೋಬೀಯ ಎಂಬ ದಾಸನಿಗೂ ತಲುಪಿದಾಗ ಅವರು ಬಹಳವಾಗಿ ಹೊಟ್ಟೆಕಿಚ್ಚುಪಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

10 ಇಸ್ರಯೇಲರ ಹಿತಚಿಂತಕನು ಒಬ್ಬನು ಬಂದನೆಂಬ ಸಮಾಚಾರ ಹೋರೋನಿನ ಸನ್ಬಲ್ಲಟನಿಗೂ ಅಮ್ಮೋನ್ ದೇಶದವನಾದ ತೊಬೀಯ ಎಂಬ ಅಧಿಕಾರಿಗೂ ಮುಟ್ಟಿತು. ಅವರು ತುಂಬ ಹೊಟ್ಟೆಕಿಚ್ಚುಪಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

10 ಇಸ್ರಾಯೇಲ್ಯರ ಹಿತಚಿಂತಕನೊಬ್ಬನು ಬಂದನೆಂಬ ವರ್ತಮಾನವು ಹೋರೋನಿನ ಸನ್ಬಲ್ಲಟನಿಗೂ ಅಮ್ಮೋನ್‍ದೇಶದವನಾದ ಟೋಬೀಯ ಎಂಬ ದಾಸನಿಗೂ ಮುಟ್ಟಿದಾಗ ಅವರು ಬಹಳವಾಗಿ ಹೊಟ್ಟೆಕಿಚ್ಚುಪಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

10 ಇಸ್ರಾಯೇಲರ ಹಿತಚಿಂತಕನು ಒಬ್ಬನು ಬಂದನೆಂಬ ಸಮಾಚಾರ ಹೋರೋನಿನ ಸನ್ಬಲ್ಲಟನಿಗೂ, ಅಮ್ಮೋನ್ ದೇಶದವನಾದ ಟೋಬೀಯ ಎಂಬ ಅಧಿಕಾರಿಗೂ ಮುಟ್ಟಿತು. ಅವರು ತುಂಬಾ ವಿಚಲಿತರಾದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ನೆಹೆಮೀಯ 2:10
26 ತಿಳಿವುಗಳ ಹೋಲಿಕೆ  

ಸನ್ಬಲ್ಲಟನು, ಟೋಬೀಯನು, ಅರಬಿಯರು, ಅಮ್ಮೋನಿಯರು ಮತ್ತು ಅಷ್ಡೋದಿನವರು ತುಂಬಾ ಕೋಪಗೊಂಡಿದ್ದರು. ಯಾಕೆಂದರೆ ಜೆರುಸಲೇಮಿನ ಗೋಡೆಯ ಕೆಲಸ ಮುಂದುವರಿಯುತ್ತಿದೆಯೆಂದೂ ಮತ್ತು ಗೋಡೆಗಳ ಕಿಂಡಿಗಳನ್ನು ರಿಪೇರಿ ಮಾಡಲಾಗುತ್ತಿದೆಯೆಂದೂ ಅವರು ಕೇಳಿದ್ದರು.


ಆದರೆ ಹೋರೋಬಿನ ಸನ್ಬಲ್ಲಟನು, ಅಮ್ಮೋನಿಯ ಅಧಿಕಾರಿಯಾದ ಟೋಬೀಯ ಮತ್ತು ಅರಬಿಯವನಾದ ಗೆಷೆಮ್ ಇವರುಗಳು ನಾವು ಪೌಳಿ ಗೋಡೆಯನ್ನು ಕಟ್ಟುತ್ತೇವೆಂಬ ಸುದ್ಧಿಯನ್ನು ಕೇಳಿ ಅಸಹ್ಯವಾಗಿ ಗೇಲಿಮಾಡಿ, “ನೀವು ಮಾಡುತ್ತಿರುವುದೇನು? ರಾಜನಿಗೆ ವಿರುದ್ಧವಾಗಿ ದಂಗೆ ಏಳುತ್ತಿರುವಿರೋ?” ಎಂದು ಕೇಳಿದರು.


ಕೋಪವು ಕ್ರೂರ; ಅದು ಪ್ರವಾಹದಂತೆ ನಾಶಕರ. ಹೊಟ್ಟೆಕಿಚ್ಚು ಅದಕ್ಕಿಂತಲೂ ನಾಶಕರ.


ಆದರೆ ಅದಕ್ಕಿಂತ ಮೊದಲು ಎಲ್ಯಾಷೀಬನು ದೇವಾಲಯದ ಒಂದು ಕೋಣೆಯನ್ನು ಟೋಬೀಯನಿಗೆ ಕೊಟ್ಟಿದ್ದನು. ಎಲ್ಯಾಷೀಬನು ದೇವಾಲಯದ ಉಗ್ರಾಣದ ಮುಖ್ಯಸ್ಥನಾಗಿದ್ದನು ಮತ್ತು ಟೋಬೀಯನ ಪ್ರಾಣಸ್ನೇಹಿತನಾಗಿದ್ದನು. ಆ ಕೋಣೆಯಲ್ಲಿ ಧಾನ್ಯಸಮರ್ಪಣೆಯ ಉಳಿದ ಭಾಗ, ಧೂಪ, ದೇವಾಲಯದ ಪಾತ್ರೆಗಳು, ದಶಮಾಂಶ, ದವಸಧಾನ್ಯಗಳು, ಹೊಸ ದ್ರಾಕ್ಷಾರಸ, ಎಣ್ಣೆ ಇವುಗಳನ್ನೆಲ್ಲಾ ಗಾಯಕರಿಗೂ ಲೇವಿಯರಿಗೂ ಮತ್ತು ದ್ವಾರಪಾಲಕರಿಗೂ ಕೊಡುವುದಕ್ಕಾಗಿ ಅಲ್ಲಿಟ್ಟಿದ್ದರು. ಅಲ್ಲಿ ಯಾಜಕರಿಗೆ ಉಡುಗೊರೆಗಳನ್ನು ಸಹ ಇಟ್ಟಿದ್ದರು. ಅದೇ ಕೋಣೆಯನ್ನು ಎಲ್ಯಾಷೀಬನು ಟೋಬೀಯನಿಗೆ ಕೊಟ್ಟಿದ್ದನು.


ಸನ್ಬಲ್ಲಟನಿಗೆ, ಟೋಬೀಯನಿಗೆ, ಅರಬಿಯವನಾದ ಗೆಷೆಮನಿಗೆ ಮತ್ತು ಇನ್ನಿತರ ವೈರಿಗಳಿಗೆ ನಾವು ಗೋಡೆಯನ್ನು ಕಟ್ಟಿ ಮುಗಿಸಿದ್ದು ಗೊತ್ತಾಯಿತು. ಗೋಡೆಯಲ್ಲಿದ್ದ ಎಲ್ಲಾ ಕಿಂಡಿಗಳನ್ನು ನಾವು ಮುಚ್ಚಿದೆವು. ಆದರೆ ಗೋಡೆಯಲ್ಲಿನ ದ್ವಾರಗಳಿಗೆ ಇನ್ನೂ ಬಾಗಿಲುಗಳನ್ನು ಇಟ್ಟಿರಲಿಲ್ಲ.


ದೇವಾಲಯದ ಕಾವಲುಗಾರರ ನಾಯಕನು ಮತ್ತು ಮಹಾಯಾಜಕರು ಇದನ್ನು ಕೇಳಿ ಗಲಿಬಿಲಿಗೊಂಡರು. ಇದರಿಂದ ಏನಾಗುವುದೋ ಎಂದು ಅವರು ಭಯಪಟ್ಟರು.


ಈ ಇಬ್ಬರು ಅಪೊಸ್ತಲರು ಜನರಿಗೆ ಉಪದೇಶ ಮಾಡುತ್ತಿರುವುದನ್ನು ಕಂಡು ಅವರು ಸಿಟ್ಟುಗೊಂಡರು. ಯೇಸುವಿನ ಶಕ್ತಿಯ ಮೂಲಕವಾಗಿ ಜನರು ಪುನರುತ್ಥಾನ ಹೊಂದುತ್ತಾರೆ ಎಂದು ಪೇತ್ರ ಮತ್ತು ಯೋಹಾನ ಬೋಧಿಸುತ್ತಿದ್ದರು.


“ಹೆಷ್ಬೋನ್ ಮತ್ತು ಎಲೆಯಾಲೆ ಎಂಬ ಪಟ್ಟಣಗಳ ಜನರು ಅರಚಿಕೊಳ್ಳುತ್ತಿದ್ದಾರೆ. ಅವರ ಕಿರುಚಾಟವು ದೂರದ ಯಹಚಿನವರೆಗೂ ಕೇಳಿಬರುತ್ತಿದೆ. ಅವರ ಕಿರುಚಾಟವು ಚೋಯರಿನಿಂದ ದೂರದ ಹೊರೊನಯಿಮ್ ಮತ್ತು ಎಗ್ಲತ್ ಶೆಲಿಶೀಯದವರೆಗೆ ಕೇಳಿಬರುತ್ತದೆ. ನಿಮ್ರೀಮ್ ಹಳ್ಳದ ನೀರು ಸಹ ಬತ್ತಿಹೋಗಿದೆ.


ಮೋವಾಬಿನ ಜನರು ಲೂಹೀತಿನ ದಾರಿಹಿಡಿದು ಹೋಗುತ್ತಾರೆ. ಹೋಗುವಾಗ ಅವರು ಬಹಳವಾಗಿ ಗೋಳಾಡುತ್ತಾರೆ. ಅವರ ಕಷ್ಟ ಮತ್ತು ನೋವಿನ ಗೋಳಾಟವು ಆ ದಾರಿಯಿಂದ ಹೊರೊನಯಿಮ್ ಪಟ್ಟಣದವರೆಗೂ ಕೇಳಿಬರುತ್ತದೆ.


ಮೋವಾಬಿನ ಬಗ್ಗೆ ನನ್ನ ಹೃದಯವು ಮರುಗುತ್ತಿದೆ. ಜನರು ಸುರಕ್ಷತೆಗಾಗಿ ಅತ್ತಿತ್ತ ಓಡಾಡುತ್ತಿದ್ದಾರೆ. ಅವರು ಬಹುದೂರವಿರುವ ಚೋಯರಿಗೆ ಓಡುತ್ತಿದ್ದಾರೆ. ಎಗ್ಲತ್ ಶೆಲಿಶೀಯಕ್ಕೂ ಓಡುತ್ತಾರೆ. ಪರ್ವತಮಾರ್ಗವಾಗಿ ಲೂಹೀಥ್ ಗೆ ಹೋಗುತ್ತಿರುವಾಗ ಜನರು ಅಳುತ್ತಾ ಹೋಗುತ್ತಾರೆ. ಹೊರೊನಯಿಮಿಗೆ ಹೋಗುವ ಮಾರ್ಗದಲ್ಲಿ ಜನರು ಜೋರಾಗಿ ಅಳುತ್ತಾ ಹೋಗುತ್ತಿದ್ದಾರೆ.


ಸೇವಕರಾಗಿರಬೇಕಿದ್ದವರು ಕುದುರೆಸವಾರಿ ಮಾಡುವುದನ್ನೂ ಅಧಿಪತಿಗಳಾಗಬೇಕಿದ್ದವರು ಸೇವಕರಂತೆ ನಡೆದುಹೋಗುವುದನ್ನೂ ನಾನು ನೋಡಿದ್ದೇನೆ.


ರಾಜನಾದ ಸೇವಕ, ತನಗೆ ಅಗತ್ಯವಿರುವ ಪ್ರತಿಯೊಂದನ್ನು ಪಡೆದಿರುವ ಮೂಢ,


ದುಷ್ಟರು ಇದನ್ನು ಕಂಡು ಕೋಪಗೊಳ್ಳುವರು; ಕೋಪದಿಂದ ಹಲ್ಲು ಕಡಿಯುತ್ತಾ ಅಳಿದುಹೋಗುವರು. ಅವರ ದುರಾಶೆಯು ಈಡೇರದು.


ಆ ದಿವಸ ಎಲ್ಲಾ ಜನರಿಗೆ ಕೇಳಿಸುವಂತೆ ಮೋಶೆಯ ಗ್ರಂಥಗಳನ್ನು ಓದಲಾಯಿತು. ಅದರಲ್ಲಿ ಈ ಆಜ್ಞೆಯು ಬರೆಯಲ್ಪಟ್ಟಿದ್ದನ್ನು ಕಂಡುಕೊಂಡರು. ಅದೇನೆಂದರೆ: ದೇವರ ಸಭೆಯಲ್ಲಿ ಯಾವ ಅಮ್ಮೋನ್ಯನಾಗಲಿ ಮೋವಾಬ್ಯನಾಗಲಿ ಇರಕೂಡದು.


ನಮ್ಮ ವೈರಿಗಳೆಲ್ಲಾ ಕೆಲಸ ಸಂಪೂರ್ಣವಾದದ್ದನ್ನು ಕೇಳಿದರು. ನಮ್ಮ ಸುತ್ತಮುತ್ತಲಿನ ಪ್ರಾಂತ್ಯಗಳವರಿಗೂ ದೇಶಗಳವರಿಗೂ ಈ ಸುದ್ದಿಮುಟ್ಟಿತು. ಆಗ ಅವರ ಧೈರ್ಯವು ಕುಗ್ಗಿತು. ಯಾಕೆಂದರೆ ಈ ಮಹಾಕಾರ್ಯವನ್ನು ನಮ್ಮ ದೇವರ ಸಹಾಯದಿಂದಲೇ ನಾವು ಮಾಡಿದ್ದೇವೆಂದು ಅವರಿಗೆ ಅರ್ಥವಾಯಿತು.


ಪ್ರಧಾನ ಯಾಜಕನಾದ ಎಲ್ಯಾಷೀಬನ ಮಗನಾದ ಯೋಯಾದನ ಮಕ್ಕಳಲ್ಲಿ ಒಬ್ಬನು ಹೊರೋನಿನ ಸನ್ಬಲ್ಲಟನಿಗೆ ಅಳಿಯನಾದನು. ನಾನು ಅವನನ್ನು ಆ ಸ್ಥಳದಿಂದ ಹೊರಗೆ ಓಡಿಸಿಬಿಟ್ಟೆನು.


ಅರಸನ ನಂತರ ರಾಜ್ಯದಲ್ಲಿ ಯೆಹೂದಿಯಾದ ಮೊರ್ದೆಕೈಯೇ ಮುಖ್ಯ ವ್ಯಕ್ತಿಯಾಗಿದ್ದನು. ರಾಜ್ಯದಲ್ಲಿ ಅವನಿಗೆ ಎರಡನೇ ಸ್ಥಾನವಿತ್ತು. ಯೆಹೂದ್ಯರೊಳಗೆ ಅವನು ಪ್ರಮುಖ ವ್ಯಕ್ತಿಯಾಗಿದ್ದನು. ಯೆಹೂದ್ಯರೆಲ್ಲರೂ ಅವನನ್ನು ಬಹಳವಾಗಿ ಗೌರವಿಸುತ್ತಿದ್ದರು. ತನ್ನ ಜನರ ಒಳಿತಿಗಾಗಿ (ಜನರಿಗೋಸ್ಕರವಾಗಿ) ಮೊರ್ದೆಕೈ ಬಹಳವಾಗಿ ಪ್ರಯಾಸಪಟ್ಟಿದ್ದರಿಂದ ಜನರು ಅವನನ್ನು ಸನ್ಮಾನಿಸಿದರು; ಮೊರ್ದೆಕೈ ಯೆಹೂದ್ಯರೆಲ್ಲರಿಗೆ ಸಮಾಧಾನವನ್ನು ತಂದನು.


ಮಿಚ್ಫ ನಗರದಲ್ಲಿ ಉಳಿದೆಲ್ಲ ಜನರನ್ನು ಇಷ್ಮಾಯೇಲನು ವಶಪಡಿಸಿಕೊಂಡನು. ಅವರಲ್ಲಿ ರಾಜನ ಹೆಣ್ಣಮಕ್ಕಳು ಮತ್ತು ಅಲ್ಲಿದ್ದ ಬೇರೆ ಜನರೂ ಸೇರಿದ್ದರು. ಆ ಜನರನ್ನು ನೋಡಿಕೊಳ್ಳಲೆಂದು ನೆಬೂಜರದಾನನು ಗೆದಲ್ಯನನ್ನು ನೇಮಿಸಿದ್ದನು. ನೆಬೂಜರದಾನನು ಬಾಬೆಲಿನ ರಾಜನ ವಿಶೇಷ ರಕ್ಷಕದಳದ ಅಧಿಪತಿಯಾಗಿದ್ದನು. ಇಷ್ಮಾಯೇಲನು ಆ ಜನರನ್ನು ಸೆರೆಹಿಡಿದು ಅವರನ್ನು ತೆಗೆದುಕೊಂಡು ಅಮ್ಮೋನ್ಯರ ಸೀಮೆಗೆ ಹೊರಟನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು