ನೆಹೆಮೀಯ 13:27 - ಪರಿಶುದ್ದ ಬೈಬಲ್27 ಈಗ ನೀವು ಸಹ ಅನ್ಯಸ್ತ್ರೀಯರನ್ನು ಮದುವೆಯಾಗಿ ಭಯಂಕರವಾದ ಪಾಪಗಳನ್ನು ಮಾಡುತ್ತಿದ್ದೀರಿ. ನೀವು ದೇವರಿಗೆ ವಿಧೇಯರಾಗಲಿಲ್ಲ” ಎಂದು ಹೇಳಿದೆನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201927 ಹೀಗಿರಲಾಗಿ ನೀವೂ ಅನ್ಯಸ್ತ್ರೀಯರನ್ನು ಮದುವೆಮಾಡಿಕೊಂಡು ಅದೇ ಘೋರವಾದ ದುಷ್ಟತ್ವವನ್ನು ಮಾಡಿ ದೇವರಿಗೆ ದ್ರೋಹಿಗಳಾಗುವುದನ್ನು ನಾವು ಒಪ್ಪಿಕೊಳ್ಳಬೇಕೋ? ಎಂದು ಅವರನ್ನು ಗದರಿಸಿ “ಅವರ ಮಕ್ಕಳಿಗೆ ಹೆಣ್ಣನ್ನು ಕೊಡಬಾರದು, ನಿಮಗಾಗಲಿ ನಿಮ್ಮ ಮಕ್ಕಳಿಗಾಗಲಿ ಅವರಿಂದ ತರಲೂಬಾರದು” ಎಂಬ ಧರ್ಮವಿಧಿಯನ್ನು ಕೈಕೊಳ್ಳುವುದಾಗಿ ದೇವರ ಹೆಸರಿನಲ್ಲಿ ಪ್ರಮಾಣ ಮಾಡಿಸಿದೆನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)27 ಹೀಗಿರಲಾಗಿ, ನೀವೂ ಅನ್ಯಮಹಿಳೆಯರನ್ನು ಮದುವೆಮಾಡಿಕೊಂಡು, ಅದೇ ಘೋರವಾದ ದುಷ್ಕೃತ್ಯವನ್ನು ನಡೆಸಿ, ದೇವರಿಗೆ ದ್ರೋಹಿಗಳಾಗುವುದನ್ನು ನಾವು ಒಪ್ಪಿಕೊಳ್ಳುವುದಿಲ್ಲ,” ಎಂದು ಅವರನ್ನು ಗದರಿಸಿದೆ.”ಅನ್ಯರ ಮಕ್ಕಳಿಗೆ ಹೆಣ್ಣು ಕೊಡಬಾರದು; ನಮಗಾಗಲಿ ನಮ್ಮ ಮಕ್ಕಳಿಗಾಗಲಿ ಅವರಿಂದ ಹೆಣ್ಣು ತರಲೂಬಾರದು” ಎಂಬ ಧರ್ಮವಿಧಿಯನ್ನು ಕೈಗೊಳ್ಳುವುದಾಗಿ ದೇವರ ಹೆಸರಿನಲ್ಲಿ ಅವರಿಂದ ಪ್ರಮಾಣ ಮಾಡಿಸಿದೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)27 ಹೀಗಿರಲಾಗಿ ನೀವು ಅನ್ಯಸ್ತ್ರೀಯರನ್ನು ಮದುವೆಮಾಡಿಕೊಂಡು ಅದೇ ಘೋರವಾದ ದುಷ್ಟತ್ವವನ್ನು ನಡಿಸಿ ದೇವರಿಗೆ ದ್ರೋಹಿಗಳಾಗುವದನ್ನು ನಾವು ಒಪ್ಪಿಕೊಳ್ಳಬೇಕೋ ಎಂದು ಅವರನ್ನು ಗದರಿಸಿ ಅವರಿಂದ - ಅನ್ಯರ ಮಕ್ಕಳಿಗೆ ಹೆಣ್ಣುಕೊಡಬಾರದು, ನಿಮಗಾಗಲಿ ನಿಮ್ಮ ಮಕ್ಕಳಿಗಾಗಲಿ ಅವರಿಂದ ತರಲೂಬಾರದು ಎಂಬ ಧರ್ಮವಿಧಿಯನ್ನು ಕೈಕೊಳ್ಳುವದಾಗಿ ದೇವರ ಹೆಸರಿನಲ್ಲಿ ಪ್ರಮಾಣಮಾಡಿಸಿದೆನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ27 ನೀವು ವಿದೇಶಿ ಸ್ತ್ರೀಯರನ್ನು ಮದುವೆಮಾಡಿಕೊಂಡು, ನಮ್ಮ ದೇವರಿಗೆ ಅಪರಾಧಮಾಡಿ, ಅದೇ ಘೋರವಾದ ದುಷ್ಕೃತ್ಯವನ್ನು ಮಾಡಲು ನಾವು ಒಪ್ಪಿಕೊಳ್ಳುವುದಿಲ್ಲ ನಿಮ್ಮ ಮಾತು ಕೇಳಬಹುದೋ?” ಎಂದು ಗದರಿಸಿದೆನು. ಅಧ್ಯಾಯವನ್ನು ನೋಡಿ |
“ಸಬ್ಬತ್ ದಿನದಲ್ಲಿ ಯಾವ ಕೆಲಸವನ್ನೂ ಮಾಡುವುದಿಲ್ಲವೆಂದು ಪ್ರಮಾಣಮಾಡುತ್ತೇವೆ. ನಮ್ಮ ಸುತ್ತಮುತ್ತಲಿನ ಜನರು ಸಬ್ಬತ್ ದಿನದಲ್ಲಿ ಮಾರಲು ದವಸಧಾನ್ಯವನ್ನಾಗಲಿ ಬೇರೆ ವಸ್ತುಗಳನ್ನಾಗಲಿ ತಂದರೆ ನಾವು ಸಬ್ಬತ್ ದಿನದಲ್ಲಿ ಮತ್ತು ಇತರ ಯಾವುದೇ ಹಬ್ಬದ ದಿನದಲ್ಲಿ ಅವುಗಳನ್ನು ಕೊಂಡುಕೊಳ್ಳುವುದಿಲ್ಲ. ಪ್ರತಿ ಏಳನೆಯ ವರ್ಷ ನಾವು ನೆಡುವುದೂ ಇಲ್ಲ. ಹೊಲದಲ್ಲಿ ಕೆಲಸ ಮಾಡುವುದೂ ಇಲ್ಲ. ನಮಗೆ ಬೇರೆಯವರು ಕೊಡಬೇಕಾಗಿರುವ ಸಾಲವನ್ನು ಏಳನೆಯ ವರ್ಷದಲ್ಲಿ ವಜಾ ಮಾಡುತ್ತೇವೆ.