ಶಲ್ಲೂಮನು ಕೋರೇಯ ಮಗನು. ಕೋರೇಯ ಎಬ್ಯಾಸಾಫನ ಮಗನು. ಎಬ್ಯಾಸಾಫನು ಕೋರಹನ ಮಗನು. ಶಲ್ಲೂಮನೂ ಅವನ ಸಹೋದರರೂ ದ್ವಾರಪಾಲಕರಾಗಿದ್ದರು. ಅವರೆಲ್ಲರೂ ಕೋರಹನ ಸಂತತಿಯವರು. ಪವಿತ್ರಗುಡಾರದ ಬಾಗಿಲುಗಳನ್ನು ಕಾಯುವ ಜವಾಬ್ದಾರಿಕೆ ಇವರದಾಗಿತ್ತು. ತಮ್ಮ ಪೂರ್ವಿಕರು ಮಾಡಿದ್ದಂತೆಯೇ ಅವರು ಈ ಕೆಲಸವನ್ನು ಮಾಡಿದರು. ಯೆಹೋವನ ಪಾಳೆಯದ ಪ್ರವೇಶದ್ವಾರವನ್ನು ಕಾಯುವುದು ಅವರ ಪೂರ್ವಿಕರ ಉದ್ಯೋಗವಾಗಿತ್ತು.