ನಹೂಮ 3:7 - ಪರಿಶುದ್ದ ಬೈಬಲ್7 ನಿನ್ನನ್ನು ನೋಡಿದವರೆಲ್ಲರು ದಂಗುಬಡಿಯಲ್ಪಡುವರು. ‘ನಿನೆವೆಯು ನಾಶವಾಯಿತು. ಆಕೆಗಾಗಿ ಯಾರು ಮರುಗುವರು?’ ಎಂದು ಜನರು ಹೇಳುವರು. ನಿನ್ನನ್ನು ಸಂತೈಸುವವರು ಯಾರೂ ಸಿಗುವುದಿಲ್ಲವಲ್ಲಾ?” ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20197 ನಿನ್ನನ್ನು ನೋಡುವ ಪ್ರತಿಯೊಬ್ಬನು ನಿನ್ನ ಕಡೆಯಿಂದ ಓಡಿಹೋಗಿ, ‘ನಿನವೆಯೂ ಹಾಳಾಯಿತಲ್ಲಾ, ಅದಕ್ಕಾಗಿ ಯಾರು ಗೋಳಾಡುವರು?’ ನಿನ್ನನ್ನು ಸಂತೈಸುವವರು ನನಗೆ ಎಲ್ಲಿ ಸಿಕ್ಕಾರು?” ಅಂದುಕೊಳ್ಳುವನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)7 ನಿನ್ನ ನೋಡುವವರು ನಿನ್ನಿಂದ ದೂರ ಓಡುವರು “ನಿನೆವೆ ಹಾಳುಬಿದ್ದಿದೆ, ಅದಕ್ಕೆ ಗೋಳಿಡುವರಾರು? ಅದನ್ನು ಸಂತೈಸುವವರು ನಮಗೆಲ್ಲಿ ಸಿಕ್ಕಿಯಾರು?, ಎಂದುಕೊಳ್ಳುವರು.” ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)7 ನಿನ್ನನ್ನು ನೋಡುವ ಪ್ರತಿಯೊಬ್ಬನು ನಿನ್ನ ಕಡೆಯಿಂದ ಓಡಿಹೋಗಿ - ನಿನೆವೆಯೂ ಹಾಳಾಯಿತಲ್ಲಾ, ಯಾರು ಗೋಳಾಡಾರು, ನಿನ್ನನ್ನು ಸಂತೈಸತಕ್ಕವರು ನನಗೆ ಎಲ್ಲಿ ಸಿಕ್ಕಾರು ಅಂದುಕೊಳ್ಳುವನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ7 ನಿನ್ನನ್ನು ನೋಡುವವರೆಲ್ಲರೂ ನಿನ್ನಿಂದ ಓಡಿಹೋಗಿ ಹೀಗೆ ಹೇಳುವರು, ‘ನಿನೆವೆ ಹಾಳಾಯಿತು, ಅದಕ್ಕೆ ಯಾರು ಚಿಂತೆಪಡುವರು?’ ನಿನ್ನನ್ನು ಆದರಿಸುವವರನ್ನು ನಾನು ಎಲ್ಲಿಂದ ಹುಡುಕಲಿ.” ಅಧ್ಯಾಯವನ್ನು ನೋಡಿ |