ನಮ್ಮ ದೇವರೇ, ನೀನು ಮಹಾ ದೇವರು, ಭಯಂಕರನೂ ಬಲಿಷ್ಠ ಸೈನಿಕನೂ ಆಗಿರುವ ದೇವರು! ನೀನು ದಯಾಪರನೂ ನಂಬಿಗಸ್ತನೂ ಆಗಿರುವಿ. ನಿನ್ನ ಒಡಂಬಡಿಕೆಯನ್ನು ನೆರವೇರಿಸುವ ದೇವರು. ನಾವು ತುಂಬಾ ಸಂಕಟಗಳನ್ನು ಅನುಭವಿಸಿದೆವು. ನಮ್ಮ ಸಂಕಟಗಳು ನಿನಗೆ ವಿಶೇಷವಾದವುಗಳಾಗಿವೆ. ನಮ್ಮ ಜನರಿಗೆಲ್ಲಾ ತೊಂದರೆಗಳುಂಟಾದವು. ನಮ್ಮ ನಾಯಕರಿಗೂ ರಾಜನಿಗೂ ನಮ್ಮ ಯಾಜಕರಿಗೂ ಪ್ರವಾದಿಗಳಿಗೂ ಅಶ್ಶೂರ್ಯದ ರಾಜನ ಸಮಯದಿಂದ ಈ ದಿವಸದ ತನಕ ಭಯಂಕರ ಕಷ್ಟಗಳು ಬಂದೊದಗಿದವು.