5 ನೀವು ಆ ಬೆಂಕಿಯ ಜ್ವಾಲೆಯ ದೆಸೆಯಿಂದ ಭಯಪಟ್ಟು, ಬೆಟ್ಟವನ್ನು ಹತ್ತದೆ ಇದ್ದುದರಿಂದ ನಾನು ಯೆಹೋವನಿಗೂ ಮತ್ತು ನಿಮಗೂ ನಡುವೆ ನಿಂತು ಆತನು ಹೇಳಿದ ಮಾತುಗಳನ್ನು ನಿಮಗೆ ತಿಳಿಸಿದೆನು. ಆತನು ಹೇಳಿದ್ದೇನೆಂದರೆ,
5 ನೀವು ಆ ಅಗ್ನಿಜ್ವಾಲೆಯನ್ನು ನೋಡಿ ಭಯಪಟ್ಟಿರಿ; ಬೆಟ್ಟವನ್ನು ಹತ್ತದೆ ಹೋದಿರಿ! ಆಗ ನಾನು ಸರ್ವೇಶ್ವರನಿಗೂ ನಿಮಗೂ ನಡುವೆ ನಿಂತು ಅವರು ನುಡಿದ ಮಾತುಗಳನ್ನು ನಿಮಗೆ ತಿಳಿಸಿದೆನು. ಅವರು ನುಡಿದದ್ದು ಇದು:
5 ನೀವು ಆ ಬೆಂಕಿಯ ಜ್ವಾಲೆಯ ದೆಸೆಯಿಂದ ಭಯಪಟ್ಟು ಬೆಟ್ಟವನ್ನು ಹತ್ತದೆಹೋಗಲಾಗಿ ನಾನು ಯೆಹೋವನಿಗೂ ನಿಮಗೂ ನಡುವೆ ನಿಂತು ಆತನು ಆಡಿದ ಮಾತುಗಳನ್ನು ನಿಮಗೆ ತಿಳಿಸಿದೆನು. ಆತನು ಹೇಳಿದ್ದೇನಂದರೆ -
5 ಆ ಕಾಲದಲ್ಲಿ ನಾನು ಯೆಹೋವ ದೇವರ ವಾಕ್ಯವನ್ನು ನಿಮಗೆ ತಿಳಿಸಿದ ಹಾಗೆ ಯೆಹೋವ ದೇವರಿಗೂ, ನಿಮಗೂ ನಡುವೆ ನಿಂತಿದ್ದೆನು. ಏಕೆಂದರೆ ನೀವು ಆ ಬೆಂಕಿಗೆ ಭಯಪಟ್ಟು, ಬೆಟ್ಟದ ಮೇಲೆ ಏರಲಿಲ್ಲ. ದೇವರು ಹೇಳಿದ್ದೇನೆಂದರೆ:
ಹಾಗಾದರೆ ಧರ್ಮಶಾಸ್ತ್ರವಿದ್ದದ್ದು ಯಾಕೆ? ಜನರ ಅಪರಾಧಗಳನ್ನು ತೋರಿಸುವುದಕ್ಕಾಗಿ ಧರ್ಮಶಾಸ್ತ್ರವನ್ನು ಕೊಡಲಾಯಿತು. ಅಬ್ರಹಾಮನ ವಿಶೇಷ ಸಂತಾನವು ಬರುವ ತನಕ ಧರ್ಮಶಾಸ್ತ್ರವಿತ್ತು. ಈ ಸಂತಾನದ (ಕ್ರಿಸ್ತನು) ಬಗ್ಗೆಯೇ ದೇವರು ವಾಗ್ದಾನ ಮಾಡಿದನು. ಧರ್ಮಶಾಸ್ತ್ರವನ್ನು ದೇವದೂತರ ಮೂಲಕ ಕೊಡಲಾಯಿತು. ಜನರಿಗೆ ಧರ್ಮಶಾಸ್ತ್ರವನ್ನು ಕೊಡುವುದಕ್ಕಾಗಿ ದೇವದೂತರು ಮೋಶೆಯನ್ನು ಮಧ್ಯವರ್ತಿಯನ್ನಾಗಿ ಉಪಯೋಗಿಸಿದರು.
ಮೂರನೆಯ ದಿನದ ಮುಂಜಾನೆಯಲ್ಲಿ ಆ ಬೆಟ್ಟದ ಮೇಲೆ ಗುಡುಗು ಮಿಂಚುಗಳು ಉಂಟಾದವು. ಒಂದು ಕಾರ್ಮುಗಿಲು ಬೆಟ್ಟದ ಮೇಲೆ ಇಳಿದುಬಂತು; ತುತ್ತೂರಿಯ ಮಹಾ ಧ್ವನಿಯು ಕೇಳಿಸಿತು. ಪಾಳೆಯದಲ್ಲಿದ್ದ ಜನರೆಲ್ಲರೂ ಭಯಭೀತರಾದರು.
ಕ್ರಿಸ್ತನು ಮಹಾ ಪವಿತ್ರಸ್ಥಳದೊಳಕ್ಕೆ ಹೋದನು. ಆದರೆ ಆತನು ಮಾನವನಿರ್ಮಿತವಾದ ಮಹಾಪವಿತ್ರಸ್ಥಳಕ್ಕೆ ಹೋಗಲಿಲ್ಲ. ಈ ಮಹಾಪವಿತ್ರಸ್ಥಳವು ನಿಜವಾದದ್ದರ ಪ್ರತಿರೂಪ ಮಾತ್ರವಾಗಿದೆ. ಆತನು ಪರಲೋಕಕ್ಕೆ ಹೋದನು; ನಮಗೆ ಸಹಾಯ ಮಾಡುವುದಕ್ಕೋಸ್ಕರ ಈಗ ದೇವರ ಸನ್ನಿಧಿಯಲ್ಲಿದ್ದಾನೆ.
ಅವರಲ್ಲೇ ಒಬ್ಬನು ಅವರಿಗೆ ನಾಯಕನಾಗಿರುವನು. ಆ ನಾಯಕನು ನನ್ನ ಜನರಿಂದಲೇ ಬರುವನು. ನಾನು ಹೇಳಿದರೆ ಮಾತ್ರ ಜನರು ನನ್ನ ಹತ್ತಿರಕ್ಕೆ ಬರಲು ಸಾಧ್ಯ. ಆದ್ದರಿಂದ ನಾನು ಆ ನಾಯಕನನ್ನು ನನ್ನ ಹತ್ತಿರ ಬರಲು ಹೇಳುವೆನು. ಅವನು ನನಗೆ ತುಂಬಾ ಹತ್ತಿರದವನಾಗುವನು.
ಹಿಜ್ಕೀಯನು ಉನ್ನತಸ್ಥಳಗಳನ್ನು ನಾಶಗೊಳಿಸಿದನು. ಅವನು ಸ್ಮಾರಕಕಲ್ಲುಗಳನ್ನು ಒಡೆದುಹಾಕಿದನು ಮತ್ತು ಅಶೇರ ಕಲ್ಲುಗಳನ್ನು ಕತ್ತರಿಸಿಹಾಕಿದನು. ಆ ಸಮಯದಲ್ಲಿ ಇಸ್ರೇಲರು ಮೋಶೆಯು ಮಾಡಿದ ತಾಮ್ರಸರ್ಪಕ್ಕೆ ಧೂಪವನ್ನು ಸುಡುತ್ತಿದ್ದರು. ಈ ತಾಮ್ರಸರ್ಪವನ್ನು “ನೆಹುಷ್ಟಾನ್” ಎಂದು ಕರೆಯುತ್ತಿದ್ದರು. ಜನರು ಈ ಸರ್ಪವನ್ನು ಆರಾಧಿಸುತ್ತಿದ್ದುದರಿಂದ ಹಿಜ್ಕೀಯನು ಈ ತಾಮ್ರಸರ್ಪವನ್ನು ಒಡೆದು ಚೂರುಚೂರು ಮಾಡಿದನು.