Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಧರ್ಮೋಪದೇಶಕಾಂಡ 4:30 - ಪರಿಶುದ್ದ ಬೈಬಲ್‌

30 ನೀವು ಕಷ್ಟದಲ್ಲಿ ಬಿದ್ದಾಗ, ಅವೆಲ್ಲಾ ನಿಮಗೆ ಸಂಭವಿಸಿದಾಗ ನೀವು ನಿಮ್ಮ ದೇವರಾದ ಯೆಹೋವನ ಬಳಿಗೆ ಹಿಂದಿರುಗಿಬಂದು ಆತನಿಗೆ ವಿಧೇಯರಾಗುವಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

30 ಮೇಲೆ ಹೇಳಿದ ಎಲ್ಲಾ ಕಷ್ಟಗಳು ನಿಮಗೆ ಸಂಭವಿಸಿ, ನೀವು ಸಂಕಟದಲ್ಲಿರುವಾಗ ಅಂತ್ಯದಲ್ಲಿ ನೀವು ಆತನ ಕಡೆಗೆ ತಿರುಗಿಕೊಂಡು ಆತನ ಮಾತಿಗೆ ಕಿವಿಗೊಡುವಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

30 ಮೇಲೆ ಹೇಳಿದ ಎಲ್ಲ ಕಷ್ಟಸಂಕಟಗಳು ನಿಮಗೆ ಸಂಭವಿಸಿ, ಕೊನೆಗೆ ನೀವು ಅವರಿಗೆ ಅಭಿಮುಖರಾಗಿ ಅವನ ಮಾತಿಗೆ ಕಿವಿಗೊಡುವಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

30 ಮೇಲೆ ಹೇಳಿದ ಎಲ್ಲಾ ಕಷ್ಟಗಳು ನಿಮಗೆ ಸಂಭವಿಸಿ ನೀವು ಸಂಕಟದಲ್ಲಿರುವಾಗ ಅಂತ್ಯದಲ್ಲಿ ನೀವು ಆತನ ಕಡೆಗೆ ತಿರುಗಿಕೊಂಡು ಆತನ ಮಾತಿಗೆ ಕಿವಿಗೊಡುವಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

30 ನೀವು ಇಕ್ಕಟ್ಟಿಗೆ ಗುರಿಯಾಗಿ ಇವೆಲ್ಲವುಗಳು ನಿಮಗೆ ಸಂಭವಿಸಿದಾಗ, ಕಡೇ ದಿವಸಗಳಲ್ಲಿ ನಿಮ್ಮ ದೇವರಾದ ಯೆಹೋವ ದೇವರ ಕಡೆಗೆ ತಿರುಗಿಕೊಂಡು ವಿಧೇಯರಾಗಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಧರ್ಮೋಪದೇಶಕಾಂಡ 4:30
31 ತಿಳಿವುಗಳ ಹೋಲಿಕೆ  

ಹೀಗೆ ಇದ್ದ ಬಳಿಕ ಇಸ್ರೇಲರು ಹಿಂತಿರುಗಿ ಬರುವರು. ಆಗ ಅವರು ತಮ್ಮ ದೇವರಾದ ಯೆಹೋವನನ್ನೂ ಅವರ ಅರಸನಾದ ದಾವೀದನನ್ನೂ ಹುಡುಕುವರು. ಕೊನೆಯ ದಿವಸಗಳಲ್ಲಿ ತಮ್ಮ ದೇವರಾದ ಯೆಹೋವನನ್ನೂ ಆತನ ಒಳ್ಳೆಯತನವನ್ನೂ ಗೌರವಿಸಲು ಬರುವರು.


ಆತನು ಮಾಡಬೇಕೆಂದು ಯೋಜಿಸಿದ್ದನ್ನು ಮಾಡಿ ಮುಗಿಸುವವರೆಗೆ ಆತನ ಕೋಪವು ಕಡಿಮೆಯಾಗುವುದಿಲ್ಲ. ಆ ದಿನವಾದ ಮೇಲೆ ನೀವು ಇದನ್ನು ಸರಿಯಾಗಿ ಅರ್ಥಮಾಡಿಕೊಳ್ಳುವಿರಿ.


ನಾನು ಅವರಿಗೆ, ‘ನನಗೆ ವಿಧೇಯರಾಗಿರಿ. ನಾನು ನಿಮಗೆ ದೇವರಾಗಿರುತ್ತೇನೆ, ನೀವು ನನ್ನ ಭಕ್ತರಾಗಿರುತ್ತೀರಿ. ನಾನು ಆಜ್ಞಾಪಿಸಿದ್ದನ್ನೆಲ್ಲವನ್ನು ಮಾಡಿರಿ, ಅದರಿಂದ ನಿಮಗೆ ಒಳ್ಳೆಯದಾಗುವುದು’ ಎಂದು ಮಾತ್ರ ಆಜ್ಞಾಪಿಸಿದ್ದೆ.


“ನೀವು ನನ್ನ ಮಾತನ್ನು ಕೇಳಿದರೆ ನಿಮ್ಮ ದೇಶದ ಉತ್ತಮ ಫಸಲುಗಳಿಂದ ಆನಂದಿಸುವಿರಿ.


ನನ್ನ ಮರಣದ ಬಳಿಕ ನೀವು ಕೆಟ್ಟಕಾರ್ಯಗಳನ್ನು ಮಾಡುವಿರೆಂದು ನನಗೆ ಗೊತ್ತಿದೆ; ನನ್ನ ಅಪ್ಪಣೆಗಳನ್ನು ಮೀರುವಿರಿ. ನಿಮಗೆ ಭಯಂಕರ ಸಂಗತಿಗಳು ಸಂಭವಿಸುವವು. ಯಾಕೆಂದರೆ ಯೆಹೋವನನ್ನು ನೀವು ಸಿಟ್ಟಿಗೆಬ್ಬಿಸುವಿರಿ” ಎಂದು ಹೇಳಿದನು.


ಬಳಿಕ ಯಾಕೋಬನು ತನ್ನ ಗಂಡುಮಕ್ಕಳನ್ನು ತನ್ನ ಬಳಿಗೆ ಕರೆಯಿಸಿ, “ನನ್ನ ಎಲ್ಲಾ ಗಂಡುಮಕ್ಕಳೇ, ನನ್ನ ಬಳಿಗೆ ಬನ್ನಿರಿ. ನಿಮಗೆ ಮುಂದೆ ಏನು ಸಂಭವಿಸುವುದೆಂದು ತಿಳಿಸುತ್ತೇನೆ.


“ತರುವಾಯ ಬಿಳಾಮನು ಅಮಾಲೇಕ್ಯರನ್ನು ನೋಡಿ ಹೀಗೆಂದನು: “ಅಮಾಲೇಕ್ಯರು ಎಲ್ಲಾ ಜನಾಂಗಗಳಲ್ಲಿ ಬಲಿಷ್ಠರು; ಅಮಾಲೇಕ್ಯರು ಎಲ್ಲಾ ಜನಾಂಗಗಳಲ್ಲಿ ಮೊದಲನೆಯವರು; ಆದರೆ ಕೊನೆಯಲ್ಲಿ ಅವರು ನಾಶವಾಗುವರು.”


ಈಗ, ಕೊನೆಯ ದಿನಗಳಲ್ಲಿ ದೇವರು ಮತ್ತೆ ನಮ್ಮ ಜೊತೆಯಲ್ಲಿ ತನ್ನ ಮಗನ ಮೂಲಕ ಮಾತನಾಡಿದನು. ದೇವರು ತನ್ನ ಮಗನ ಮೂಲಕ ಲೋಕವನ್ನೆಲ್ಲ ಸೃಷ್ಟಿಸಿ, ಸಮಸ್ತಕ್ಕೂ ಆತನನ್ನೇ ಬಾಧ್ಯಸ್ತನನ್ನಾಗಿ ಮಾಡಿದನು.


ನಾನು ಜನರಿಗೆ, ‘ನಿಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಳ್ಳಿರಿ’ ಎಂತಲೂ ಅವರಿಗಾಗಿರುವ ಮಾನಸಾಂತರವನ್ನು ಯೋಗ್ಯವಾದ ಕಾರ್ಯಗಳ ಮೂಲಕ ತೋರ್ಪಡಿಸಬೇಕೆಂತಲೂ ಹೇಳಿದೆನು. ಮೊದಲನೆಯದಾಗಿ ದಮಸ್ಕಕ್ಕೂ ಬಳಿಕ ಜೆರುಸಲೇಮಿಗೂ ಜುದೇಯದ ಪ್ರತಿಯೊಂದು ಭಾಗಕ್ಕೂ ಹೋಗಿ ಅಲ್ಲಿರುವ ಜನರಿಗೆ ಈ ಸಂಗತಿಗಳನ್ನು ತಿಳಿಸಿದೆನು. ಅಲ್ಲದೆ ಯೆಹೂದ್ಯರಲ್ಲದ ಜನರ ಬಳಿಗೂ ಹೋದೆನು.


ಆದ್ದರಿಂದ ನೀವು ನಿಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಳ್ಳಿ. ಆಗ ಆತನು ನಿಮ್ಮ ಪಾಪಗಳನ್ನು ಕ್ಷಮಿಸುವನು.


ದೂರದಲ್ಲಿ ವಾಸಿಸುವ ಜನರು ಬಂದು ಆಲಯವನ್ನು ಕಟ್ಟುವರು. ಆಗ ಯೆಹೋವನು ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದ್ದಾನೆಂದು ನೀವು ತಿಳಿಯುವಿರಿ. ಯೆಹೋವನು ಹೇಳಿದಂತೆ ನೀವು ಮಾಡಿದರೆ ಇವೆಲ್ಲಾ ನೆರವೇರುವುದು.


ದಾನಿಯೇಲನೇ, ಭವಿಷ್ಯದಲ್ಲಿ ನಿನ್ನ ಜನರಿಗೆ ಏನಾಗುವದೆಂಬುದನ್ನು ನಿನಗೆ ವಿವರಿಸಲು ನಾನು ಈಗ ಇಲ್ಲಿಗೆ ಬಂದೆನು. ಈ ಕನಸು ಭವಿಷ್ಯದ ಒಂದು ಕಾಲದ ಕುರಿತಾಗಿದೆ” ಎಂದು ಹೇಳಿದನು.


ನಾವು ಏನು ಮಾಡಿದ್ದೇವೆ ಎಂಬುದನ್ನು ಪರಿಶೀಲಿಸಿ ನೋಡೋಣ. ಬಳಿಕ ಯೆಹೋವನಿಗೆ ಅಭಿಮುಖರಾಗೋಣ.


ಆಗ ನಾನು ಅವರ ಮೇಲೆ ತುಂಬಾ ಕೋಪವುಳ್ಳವನಾಗಿರುವೆನು. ಅವರಿಗೆ ಸಹಾಯ ಮಾಡದೆ ಅವರನ್ನು ಬಿಟ್ಟುಬಿಡುವೆನು; ಅವರು ನಾಶವಾಗುವರು; ಅವರಿಗೆ ಭಯಂಕರ ಸಂಗತಿಗಳು ಸಂಭವಿಸುವವು; ಅನೇಕ ಕೇಡುಗಳಾಗುವುವು; ಆಗ, ‘ನಮ್ಮ ದೇವರು ನಮ್ಮ ಮಧ್ಯದಲ್ಲಿ ಇಲ್ಲದಿರುವ ಕಾರಣ ಇವೆಲ್ಲಾ ನಮಗೆ ಸಂಭವಿಸುತ್ತವೆ’ ಎಂದು ಅವರು ಹೇಳುವರು.


ಆತನು ಹೇಳಿದಂತೆ ನೀವು ನಡೆದುಕೊಳ್ಳಬೇಕು. ಈ ಧರ್ಮೋಪದೇಶ ಪುಸ್ತಕದಲ್ಲಿ ಬರೆದಿರುವ ಬೋಧನೆಗಳನ್ನು ನೀವು ಅನುಸರಿಸಬೇಕು. ನಿಮ್ಮ ಪೂರ್ಣಪ್ರಾಣದಿಂದಲೂ ಪೂರ್ಣಆತ್ಮದಿಂದಲೂ ನಿಮ್ಮ ದೇವರಾದ ಯೆಹೋವನನ್ನು ಆರಾಧಿಸಬೇಕು; ಆಗ ನಿಮಗೆ ಈ ಎಲ್ಲಾ ಒಳ್ಳೆಯ ಸಂಗತಿಗಳು ಸಂಭವಿಸುತ್ತವೆ.


ಯೆಹೋವನು ಇಸ್ರೇಲರಿಗೆ ಮಾಡಿದ ಪ್ರತಿಯೊಂದು ಸಂಗತಿಯನ್ನು ಮೋಶೆ ಇತ್ರೋನನಿಗೆ ಹೇಳಿದನು. ಯೆಹೋವನು ಫರೋಹನಿಗೆ ಮತ್ತು ಈಜಿಪ್ಟಿನವರಿಗೆ ಮಾಡಿದ ಸಂಗತಿಗಳ ಬಗ್ಗೆ ಮೋಶೆಯು ಹೇಳಿದನು. ದಾರಿಯ ಉದ್ದಕ್ಕೂ ತಮಗೆ ಬಂದೊದಗಿದ ಎಲ್ಲಾ ಸಮಸ್ಯೆಗಳ ಬಗ್ಗೆ ಮತ್ತು ತೊಂದರೆ ಬಂದೊದಗಿದ ಪ್ರತಿ ಸಾರಿಯೂ ಯೆಹೋವನು ಇಸ್ರೇಲರನ್ನು ಹೇಗೆ ರಕ್ಷಿಸಿದನೆಂಬುದನ್ನು ಮೋಶೆಯು ತನ್ನ ಮಾವನಿಗೆ ತಿಳಿಸಿದನು.


ಹೀಗಿರಲಾಗಿ ಆತನು ಪರಿಶುದ್ಧನಾಗಿದ್ದನು. ದೇವರಿಗೆ ವಿಧೇಯರಾಗುವ ಜನರೆಲ್ಲರೂ ಶಾಶ್ವತವಾದ ರಕ್ಷಣೆಯನ್ನು ಹೊಂದಿಕೊಳ್ಳಲು ಆತನೇ ಕಾರಣ.


ನೀವೂ ನಿಮ್ಮ ಸಂತತಿಯವರೂ ಯೆಹೋವನ ಬಳಿಗೆ ಬರುವಿರಿ. ನಿಮ್ಮ ಹೃದಯಪೂರ್ವಕವಾಗಿ ಆತನನ್ನು ಹಿಂಬಾಲಿಸುವಿರಿ ಮತ್ತು ಆಜ್ಞೆಗಳಿಗೆ ಸಂಪೂರ್ಣವಾಗಿ ವಿಧೇಯರಾಗುವಿರಿ.


ಆಗ ಭಯಂಕರವಾದ ಸಂಗತಿಗಳು ಅವರಿಗೆ ಉಂಟಾಗುವವು. ಅವರಿಗೆ ಅನೇಕ ಸಂಕಟಗಳು ಉಂಟಾಗುವವು. ಆಗ ಆ ಜನರಿಗೆ ಈ ಹಾಡು ತಿಳಿದಿರುವುದರಿಂದ ತಾವು ಎಷ್ಟು ತಪ್ಪಿತಸ್ಥರು ಎಂದು ತಿಳಿಯುವುದು. ನಾನು ಕೊಡುವುದಾಗಿ ವಾಗ್ದಾನ ಮಾಡಿರುವ ದೇಶಕ್ಕೆ ಅವರನ್ನು ಇನ್ನೂ ಕರೆದುಕೊಂಡು ಹೋಗಿಲ್ಲ. ಆದರೆ ಅವರು ಅಲ್ಲಿ ಏನು ಮಾಡುತ್ತಾರೆಂಬುದು ನನಗೆ ಆಗಲೇ ಗೊತ್ತಿದೆ.”


ಆಗ ನಾನು ಸಹಾಯಕ್ಕಾಗಿ ಯೆಹೋವನನ್ನು ಕೂಗಿಕೊಂಡೆನು; ನನ್ನ ದೇವರಿಗೆ ಮೊರೆಯಿಟ್ಟೆನು. ಆತನು ತನ್ನ ಆಲಯದಲ್ಲಿ ನನ್ನ ಸ್ವರವನ್ನು ಕೇಳಿದನು; ನನ್ನ ಮೊರೆಗೆ ಕಿವಿಗೊಟ್ಟನು.


ನಾನಾದರೋ ಮುಂಜಾನೆ ನಿನಗೆ ಸ್ತುತಿಗೀತೆಗಳನ್ನು ಹಾಡುವೆ; ನಿನ್ನ ಪ್ರೀತಿಯ ಕುರಿತು ಕೊಂಡಾಡುವೆನು; ಯಾಕೆಂದರೆ ಇಕ್ಕಟ್ಟಿನಲ್ಲಿ ನೀನೇ ನನಗೆ ಆಶ್ರಯದುರ್ಗವಾಗಿರುವೆ.


ಆಗ ಅವರು ಯೆಹೋವನಿಗೆ ಮೊರೆಯಿಡಲು ಆತನು ಅವರನ್ನು ಎಲ್ಲಾ ಆಪತ್ತುಗಳಿಂದ ರಕ್ಷಿಸಿದನು.


ಅವರು ಆಪತ್ತಿನಲ್ಲಿದ್ದಾಗ ಯೆಹೋವನಿಗೆ ಮೊರೆಯಿಟ್ಟರು. ಆತನು ಅವರನ್ನು ಆಪತ್ತುಗಳಿಂದ ಬಿಡಿಸಿದನು.


ಇದು ಯೆಹೋವನ ಸಂದೇಶ: “ಇಸ್ರೇಲೇ, ನೀನು ಹಿಂತಿರುಗಿ ಬರಲು ಇಚ್ಛಿಸಿದರೆ ನನ್ನಲ್ಲಿಗೆ ಹಿಂತಿರುಗಿ ಬಾ. ನಿನ್ನ ವಿಗ್ರಹಗಳನ್ನು ಎಸೆದುಬಿಡು. ನನ್ನಿಂದ ದೂರಸರಿದು ಅಲೆದಾಡಬೇಡ.


ನೀನು ಹೀಗೆ ಮಾಡಿದರೆ ನನ್ನ ಹೆಸರಿನ ಮೇಲೆ ಪ್ರಮಾಣ ಮಾಡಲು ಶಕ್ತಳಾಗುವೆ. ‘ಹಾದು, ಯೆಹೋವನಾಣೆ’ ಎಂದು ಹೇಳಶಕ್ತಳಾಗುವೆ. ನೀನು ಆ ಪದಗಳನ್ನು ಸತ್ಯವಾಗಿಯೂ ಪ್ರಾಮಾಣಿಕವಾಗಿಯೂ ಸರಿಯಾಗಿ ಉಪಯೋಗಿಸಲು ಸಾಧ್ಯವಾಗುತ್ತದೆ. ನೀನು ಹೀಗೆ ಮಾಡಿದರೆ, ಎಲ್ಲಾ ಜನಾಂಗಗಳು ಯೆಹೋವನ ಆಶೀರ್ವಾದವನ್ನು ಪಡೆಯುತ್ತವೆ. ಆತನ ಕಾರ್ಯಗಳಿಗಾಗಿ ಆತನಿಗೆ ಸ್ತೋತ್ರ ಮಾಡುತ್ತವೆ.”


ಆದರೆ ನೀವು ಹಿಂತಿರುಗಿ ನನ್ನ ಬಳಿಗೆ ಬಂದು, ನನ್ನ ಕಟ್ಟಳೆಗಳಿಗೆ ವಿಧೇಯರಾದರೆ, ನಿಮ್ಮ ಜನರನ್ನು ಬಲವಂತವಾಗಿ ಭೂಲೋಕದ ಕಟ್ಟಕಡೆಯವರೆಗೆ ಕೊಂಡೊಯ್ದಿದ್ದರೂ ಅಲ್ಲಿಂದ ನನ್ನ ಹೆಸರನ್ನು ನೆಲೆಗೊಳಿಸುವುದಕ್ಕಾಗಿ ನಾನು ಆರಿಸಿಕೊಂಡ ಸ್ಥಳಕ್ಕೆ ಕರೆದುಕೊಂಡು ಬರುವೆನು” ಎಂದು ಹೇಳಿರುವೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು