Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಧರ್ಮೋಪದೇಶಕಾಂಡ 4:21 - ಪರಿಶುದ್ದ ಬೈಬಲ್‌

21 “ನಿಮ್ಮ ದೆಸೆಯಿಂದ ಯೆಹೋವನು ನನ್ನ ಮೇಲೆ ಸಿಟ್ಟುಗೊಂಡನು. ಆ ಕಾರಣದಿಂದ ಕಾನಾನ್ ದೇಶವನ್ನು ನಾನು ಪ್ರವೇಶಿಸಬಾರದು ಎಂದು ನನಗೆ ಹೇಳಿರುತ್ತಾನೆ. ಜೋರ್ಡನ್ ನದಿಯಾಚೆ ನಿಮಗೆ ಕೊಡುವ ಆ ಉತ್ತಮ ದೇಶವನ್ನು ನಾನು ನೋಡುವುದಿಲ್ಲವೆಂದು ಪ್ರಮಾಣ ಮಾಡಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

21 ಅದಲ್ಲದೆ ಯೆಹೋವನು ನಿಮ್ಮ ದೆಸೆಯಿಂದ ನನ್ನ ಮೇಲೆಯೂ ಕೋಪಗೊಂಡು ನಾನು ಯೊರ್ದನ್ ನದಿಯನ್ನು ದಾಟಿ, ನಿಮ್ಮ ದೇವರಾದ ಯೆಹೋವನು ನಿಮಗೆ ಸ್ವದೇಶವಾಗುವುದಕ್ಕೆ ಕೊಡುವ ಆ ಒಳ್ಳೆಯ ದೇಶವನ್ನು ಸೇರದೆ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

21 “ಇದಲ್ಲದೆ, ಸರ್ವೇಶ್ವರ ನಿಮ್ಮ ದೆಸೆಯಿಂದ ನನ್ನ ಮೇಲೆ ಕೋಪಗೊಂಡರು. ನಾನು ಜೋರ್ಡನ್ ನದಿಯನ್ನು ದಾಟಿ ನಿಮ್ಮ ದೇವರಾದ ಸರ್ವೇಶ್ವರ ನಿಮಗೆ ಸ್ವದೇಶವನ್ನಾಗಿ ಕೊಡುವ ಆ ಚೆಲುವ ನಾಡನ್ನು ನಾನು ಸೇರಬಾರದೆಂದೂ ಇಲ್ಲಿಯೇ ಸಾಯಬೇಕೆಂದೂ ಖಂಡಿತವಾಗಿ ಹೇಳಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

21 ಅದಲ್ಲದೆ ಯೆಹೋವನು ನಿಮ್ಮ ದೆಸೆಯಿಂದ ನನ್ನ ಮೇಲೆಯೂ ಕೋಪಗೊಂಡು ನಾನು ಯೊರ್ದನ್ ಹೊಳೆಯನ್ನು ದಾಟಿ ನಿಮ್ಮ ದೇವರಾದ ಯೆಹೋವನು ನಿಮಗೆ ಸ್ವದೇಶವಾಗುವದಕ್ಕೆ ಕೊಡುವ ಆ ಒಳ್ಳೆಯ ದೇಶವನ್ನು ಸೇರದೆ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

21 ನಾನು ಯೊರ್ದನಿನ ಆಚೆಗೆ ಹೋಗದ ಹಾಗೆಯೂ, ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಸೊತ್ತಾಗಿ ಕೊಡುವ ಆ ಒಳ್ಳೆಯ ದೇಶದಲ್ಲಿ ಪ್ರವೇಶಿಸದಂತೆ, ನಿಮ್ಮ ನಿಮಿತ್ತ ಯೆಹೋವ ದೇವರು ನನ್ನ ಮೇಲೆ ಕೋಪಮಾಡಿಕೊಂಡು ಪ್ರಮಾಣ ಮಾಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಧರ್ಮೋಪದೇಶಕಾಂಡ 4:21
13 ತಿಳಿವುಗಳ ಹೋಲಿಕೆ  

“ದೇವರಾದ ಯೆಹೋವನು ನಿಮ್ಮಿಂದಾಗಿ ನನ್ನ ಮೇಲೂ ಸಿಟ್ಟುಗೊಂಡು, ‘ಮೋಶೆಯೇ, ನೀನೂ ಸಹ ವಾಗ್ದಾನದ ದೇಶವನ್ನು ಪ್ರವೇಶಿಸುವುದಿಲ್ಲ.


ಆದರೆ ಯೆಹೋವನು ಮೋಶೆ ಆರೋನರಿಗೆ, “ನೀವು ನನ್ನನ್ನು ನಂಬದವರಾಗಿ ಇಸ್ರೇಲರ ಎದುರಿನಲ್ಲಿ ನನ್ನ ಪವಿತ್ರತೆಯನ್ನು ತೋರಿಸದೆ ಹೋದದ್ದರಿಂದ ಈ ಸಮುದಾಯದವರಿಗೆ ಕೊಡಲಿರುವ ದೇಶಕ್ಕೆ ನೀವು ಅವರನ್ನು ಕರೆದುಕೊಂಡು ಹೋಗುವುದಿಲ್ಲ.” ಎಂದು ಹೇಳಿದನು.


“ನಾನು ಈಗ ನೂರಿಪ್ಪತ್ತು ವರ್ಷದವನಾಗಿದ್ದೇನೆ. ನನಗೆ ನಿಮ್ಮನ್ನು ಇನ್ನೂ ನಡೆಸಲು ಸಾಧ್ಯವಿಲ್ಲ. ಯೆಹೋವನು, ‘ನೀನು ಜೋರ್ಡನ್ ಹೊಳೆಯನ್ನು ದಾಟಕೂಡದು’ ಎಂದು ಹೇಳಿರುತ್ತಾನೆ.


“ಆದರೆ ನಿಮ್ಮ ಕಾರಣದಿಂದ ಯೆಹೋವನು ನನ್ನ ಮೇಲೆ ಕೋಪಗೊಂಡಿದ್ದನು. ಆತನು ನನಗೆ ಕಿವಿಗೊಡಲಿಲ್ಲ. ಆತನು ನನಗೆ ಹೇಳಿದ್ದೇನೆಂದರೆ: ‘ಅಷ್ಟೇ ಸಾಕು! ಇನ್ನು ಈ ವಿಷಯವನ್ನು ನೀನು ಎತ್ತಬಾರದು.


ನಿಮ್ಮ ದೇಶದಲ್ಲಿ ಯಾರೂ ಬಡವರಾಗಿರಬಾರದು. ಯಾಕೆಂದರೆ ಯೆಹೋವನೇ ನಿಮಗೆ ಈ ದೇಶವನ್ನು ಕೊಡುತ್ತಿದ್ದಾನೆ; ಮತ್ತು ಯೆಹೋವನು ನಿಮ್ಮನ್ನು ಅಧಿಕವಾಗಿ ಆಶೀರ್ವದಿಸುತ್ತಾನೆ.


ಆಗ ಯೆಹೋವನು ನಿಮಗೆ ಕೊಡಲಿರುವ ದೇಶದಲ್ಲಿ ಅಂಥ ನಿರಪರಾಧಿಗಳು ಕೊಲ್ಲಲ್ಪಡುವುದಿಲ್ಲ; ನೀವು ಯಾವ ಮರಣದ ವಿಷಯದಲ್ಲಿಯೂ ದೋಷಿಗಳಾಗಿರುವುದಿಲ್ಲ.


“ಆದರೆ ನಿಮಗೆ ವಾಗ್ದಾನ ಮಾಡಿದ ದೇಶದ ಪಟ್ಟಣಗಳನ್ನು ಸ್ವಾಧೀನ ಮಾಡುವಾಗ ನೀವು ಪಟ್ಟಣದಲ್ಲಿರುವವರೆಲ್ಲರನ್ನು ಕೊಲ್ಲಬೇಕು.


ಇಡೀ ರಾತ್ರಿ ಆ ಮರದಲ್ಲಿ ಅವನ ಶರೀರ ನೇತಾಡುವಂತೆ ಮಾಡಬಾರದು. ಅದೇ ದಿವಸದಲ್ಲಿ ಅವನ ಶವವು ಹೂಳಲ್ಪಡಬೇಕು. ಯಾಕೆಂದರೆ ಮರದಲ್ಲಿ ತೂಗುಹಾಕಲ್ಪಟ್ಟ ಮನುಷ್ಯನು ದೇವರಿಂದ ಶಪಿಸಲ್ಪಟ್ಟವನು. ನಿಮ್ಮ ದೇವರಾದ ಯೆಹೋವನು ನಿಮಗೆ ಕೊಟ್ಟ ದೇಶವನ್ನು ನೀವು ಹೊಲಸು ಮಾಡಬೇಡಿರಿ.


“ನಿಮ್ಮ ದೇವರಾದ ಯೆಹೋವನು ನಿಮಗೆ ಕೊಡುವ ದೇಶವನ್ನು ನೀವು ಬೇಗನೆ ಪ್ರವೇಶಿಸಲಿದ್ದೀರಿ. ಆ ದೇಶವನ್ನು ಸ್ವಾಧೀನಮಾಡಿಕೊಂಡು ಅಲ್ಲಿ ನೆಲೆಸುವಿರಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು