ಧರ್ಮೋಪದೇಶಕಾಂಡ 33:11 - ಪರಿಶುದ್ದ ಬೈಬಲ್11 “ಯೆಹೋವನೇ, ಲೇವಿಯರಿಗೆ ಇರುವಂಥದನ್ನು ಆಶೀರ್ವದಿಸು; ಅವರು ಮಾಡಿದ್ದೆಲ್ಲಾ ನಿನಗೆ ಮೆಚ್ಚಿಕೆಯಾಗಲಿ. ಅವರ ಮೇಲೆ ಬೀಳುವವರನ್ನು ನಾಶಮಾಡು, ಅವರ ವೈರಿಗಳನ್ನು ಸೋಲಿಸು; ಅವರು ಮತ್ತೆ ಲೇವಿಯರ ಮೇಲೆ ಬೀಳದಂತೆ ಮಾಡು.” ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201911 ಯೆಹೋವನೇ, ಅವರ ಆಸ್ತಿಯನ್ನು ವೃದ್ಧಿಪಡಿಸು; ಅವರ ಸೇವೆಯು ನಿನಗೆ ಸಮರ್ಪಕವಾಗಿರಲಿ; ಅವರಿಗೆ ವಿರುದ್ಧವಾಗಿ ಬರುವವರ ನಡುವನ್ನು ಮುರಿದು ಅವರ ವೈರಿಗಳು ಪುನಃ ಎದ್ದು ಬಾರದಂತೆ ಮಾಡು” ಎಂದು ಹೇಳಿದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)11 ಸರ್ವೇಶ್ವರಾ, ವೃದ್ಧಿಪಡಿಸು ಇವನ ಆಸ್ತಿಯನು ಸಮರ್ಪಕವಾಗಿರಲಿ ನಿನಗೆ ಇವನ ಸೇವೆಯು ಇವನ ಶತ್ರುಗಳ ನಡುವನ್ನು ಮುರಿ ಮರಲಿ ಏಳದಂತೆ ಮಾಡು ಇವನ ವೈರಿ.” ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)11 ಯೆಹೋವನೇ, ಅವರ ಆಸ್ತಿಯನ್ನು ವೃದ್ಧಿಪಡಿಸು; ಅವರ ಸೇವೆಯು ನಿನಗೆ ಸಮರ್ಪಕವಾಗಿರಲಿ; ಅವರಿಗೆ ವಿರೋಧವಾಗಿ ಬರುವವರ ನಡುವನ್ನು ಮುರಿದು ಅವರ ವೈರಿಗಳು ಪುನಃ ಶ್ವಾಸಬಿಡದಂತೆ ಮಾಡು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ11 ಯೆಹೋವ ದೇವರೇ, ಅವನ ಎಲ್ಲ ಕೌಶಲ್ಯಗಳನ್ನು ಆಶೀರ್ವದಿಸಿರಿ. ಅವನ ಕೈಕೆಲಸವನ್ನು ಅಂಗೀಕರಿಸಿರಿ. ಅವನಿಗೆ ವಿರೋಧವಾಗಿ ಏಳುವವರ ನಡು ಮುರಿದು ಹೋಗಲಿ. ಅವನನ್ನು ದ್ವೇಷಿಸುವವರು ತಿರುಗಿ ಏಳದ ಹೋಗಲಿ.” ಅಧ್ಯಾಯವನ್ನು ನೋಡಿ |