ಧರ್ಮೋಪದೇಶಕಾಂಡ 3:20 - ಪರಿಶುದ್ದ ಬೈಬಲ್20 ಜೋರ್ಡನ್ ನದಿಯ ಮತ್ತೊಂದು ಕಡೆಯಲ್ಲಿರುವ ದೇಶವನ್ನು ಯೆಹೋವನು ನಿಮ್ಮ ಸಂಬಂಧಿಕರಾದ ಇಸ್ರೇಲರಿಗೆ ಕೊಡಲಿದ್ದಾನೆ. ಆ ದೇಶವನ್ನು ಇಸ್ರೇಲರು ತೆಗೆದುಕೊಳ್ಳುವ ತನಕ ನೀವು ಅವರಿಗೆ ಸಹಾಯ ಮಾಡಲೇಬೇಕು. ಇಲ್ಲಿ ಯೆಹೋವನು ನಿಮಗೆ ಶಾಂತಿಯನ್ನು ದಯಪಾಲಿಸಿದಂತೆ ಅಲ್ಲಿಯೂ ದಯಪಾಲಿಸುವ ತನಕ ಅವರಿಗೆ ಸಹಾಯ ಮಾಡಿರಿ. ಬಳಿಕ ನಾನು ನಿಮಗೆ ಕೊಟ್ಟಿರುವ ಈ ದೇಶಕ್ಕೆ ನೀವು ಮರಳಿ ಬರಬಹುದು.’ ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201920 ಅನಂತರ ನಿಮ್ಮಂತೆ ನಿಮ್ಮ ಸಹೋದರರಿಗೂ ಯೆಹೋವನಿಂದ ವಿಶ್ರಾಂತಿ ದೊರಕಿದಾಗ ನಿಮ್ಮಲ್ಲಿ ಪ್ರತಿಯೊಬ್ಬನೂ ನಾನು ಕೊಟ್ಟ ಸ್ವತ್ತಿಗೆ ಹಿಂತಿರುಗಿ ಬರಬಹುದು” ಎಂದು ಆಜ್ಞಾಪಿಸಿದೆನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)20 ಅನಂತರ ನಿಮ್ಮಂತೆ ನಿಮ್ಮ ಸಹೋದರರಿಗೂ ಸರ್ವೇಶ್ವರನಿಂದ ವಿಶ್ರಾಂತಿ ದೊರಕಿದಾಗ ನಿಮ್ಮಲ್ಲಿ ಪ್ರತಿ ಒಬ್ಬನೂ ನಾನು ಕೊಟ್ಟ ಸೊತ್ತಿಗೆ ತಿರುಗಿ ಬರಬಹುದು’ ಎಂದು ಆಜ್ಞಾಪಿಸಿದೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)20 ಅನಂತರ ನಿಮ್ಮಂತೆ ನಿಮ್ಮ ಸಹೋದರರಿಗೂ ಯೆಹೋವನಿಂದ ವಿಶ್ರಾಂತಿ ದೊರಕಿದಾಗ ನಿಮ್ಮಲ್ಲಿ ಪ್ರತಿಯೊಬ್ಬನೂ ನಾನು ಕೊಟ್ಟ ಸ್ವಾಸ್ತ್ಯಕ್ಕೆ ತಿರಿಗಿ ಬರಬಹುದು ಎಂದು ಆಜ್ಞಾಪಿಸಿದೆನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ20 ಯೆಹೋವ ದೇವರು ನಿಮಗೆ ವಿಶ್ರಾಂತಿ ಕೊಟ್ಟ ಹಾಗೆಯೇ ನಿಮ್ಮ ಸಹೋದರರಿಗೂ ವಿಶ್ರಾಂತಿಯನ್ನು ಕೊಡುವರು. ನಿಮ್ಮ ದೇವರಾದ ಯೆಹೋವ ದೇವರು ಯೊರ್ದನಿನ ಆಚೆಯಲ್ಲಿ ಅವರಿಗೆ ಕೊಟ್ಟ ದೇಶವನ್ನು ಅವರು ಸ್ವಾಧೀನಪಡಿಸಿಕೊಳ್ಳುವರು. ಅದುವರೆಗೆ ನೀವು ಅವರೊಂದಿಗೆ ಸೇರಿ ಯುದ್ಧಕ್ಕೆ ಹೋಗಿರಿ. ಅನಂತರ ನಿಮ್ಮಲ್ಲಿ ಪ್ರತಿಯೊಬ್ಬನೂ ನಾನು ನಿಮಗೆ ಕೊಟ್ಟ ಸ್ಥಳಗಳಗೆ ಹಿಂತಿರುಗಿ ಬರಬಹುದು.” ಅಧ್ಯಾಯವನ್ನು ನೋಡಿ |
ಯೆಹೋವನು ನಿಮ್ಮ ವಿಶ್ರಾಂತಿಗಾಗಿ ಒಂದು ಸ್ಥಳವನ್ನು ಕೊಟ್ಟಿದ್ದಾನೆ. ಯೆಹೋವನು ನಿಮ್ಮ ಸಹೋದರರಿಗಾಗಿಯೂ ಒಂದು ಸ್ಥಳವನ್ನು ಕೊಡುತ್ತಾನೆ. ಆದರೆ ನಿಮ್ಮ ದೇವರಾದ ಯೆಹೋವನು ಅವರಿಗೆ ಕೊಡುವ ದೇಶವನ್ನು ಅವರು ಪಡೆದುಕೊಳ್ಳುವವರೆಗೆ ನೀವು ನಿಮ್ಮ ಸಹೋದರರಿಗೆ ಸಹಾಯ ಮಾಡಬೇಕು. ಆಮೇಲೆ ನೀವು ಜೋರ್ಡನ್ ನದಿಯ ಪೂರ್ವದಿಕ್ಕಿನಲ್ಲಿರುವ ನಿಮ್ಮ ದೇಶಕ್ಕೆ ಹೋಗಬಹುದು. ಯೆಹೋವನ ಸೇವಕನಾದ ಮೋಶೆಯು ನಿಮಗೆ ಕೊಟ್ಟ ದೇಶವು ಅದೇ ಆಗಿದೆ” ಎಂದನು.
ಆದ್ದರಿಂದ ರೂಬೇನ್ ಕುಲದವರು, ಗಾದ್ಯರು, ಮನಸ್ಸೆಕುಲದ ಅರ್ಧಜನರು ಇಸ್ರೇಲಿನ ಬೇರೆ ಕುಲದ ಜನರನ್ನು ಬಿಟ್ಟು ಹೊರಟರು. ಅವರು ಕಾನಾನಿನ ಶೀಲೋವಿನಲ್ಲಿದ್ದರು. ಅವರು ಆ ಸ್ಥಳವನ್ನು ಬಿಟ್ಟು ಗಿಲ್ಯಾದ್‌ಗೆ ಹಿಂದಿರುಗಿ ಹೋದರು. ಮೋಶೆಯು ಅವರಿಗೆ ಸ್ವಾಸ್ತ್ಯವಾಗಿ ಕೊಟ್ಟಿದ್ದ ತಮ್ಮ ಪ್ರದೇಶಕ್ಕೆ ಅವರು ಹೋದರು. ಅವರಿಗೆ ಈ ಪ್ರದೇಶವನ್ನು ಕೊಡಬೇಕೆಂದು ಯೆಹೋವನು ಮೋಶೆಗೆ ಆಜ್ಞಾಪಿಸಿದ್ದನು.