ಧರ್ಮೋಪದೇಶಕಾಂಡ 3:11 - ಪರಿಶುದ್ದ ಬೈಬಲ್11 (ಓಗನು ಬಾಷಾನಿನ ರಾಜನಾಗಿದ್ದನು. ಎದ್ರೈ ಮತ್ತು ಸಲ್ಕಾ ಬಾಷಾನಿನಲ್ಲಿದ್ದ ಓಗನ ರಾಜ್ಯದ ಪಟ್ಟಣಗಳಾಗಿದ್ದವು. ಅವನು ರೆಫಾಯರಲ್ಲಿ ಅಳಿದುಳಿದವರಲ್ಲಿ ಒಬ್ಬನಾಗಿದ್ದನು. ಅವನ ಮಂಚವು ಕಬ್ಬಿಣದಿಂದ ಮಾಡಲ್ಪಟ್ಟಿತ್ತು. ಅದು ಹದಿಮೂರು ಅಡಿ ಉದ್ದವಿತ್ತು ಮತ್ತು ಆರು ಅಡಿ ಅಗಲವಿತ್ತು. ಆ ಮಂಚವು ಈಗಲೂ ಅಮ್ಮೋನಿಯರು ವಾಸಿಸುವ ರಬ್ಬಾದಲ್ಲಿದೆ.) ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201911 (ರೆಫಾಯರೊಳಗೆ ಬಾಷಾನಿನ ಅರಸನಾದ ಓಗನೊಬ್ಬನೇ ಉಳಿದಿದ್ದನು. ಅವನ ಮಂಚ ಕಬ್ಬಿಣದ್ದು; ಅಮ್ಮೋನಿಯರ ರಬ್ಬಾ ಎಂಬ ಪಟ್ಟಣದಲ್ಲಿ ಅದನ್ನು ಈಗಲೂ ನೋಡಬಹುದು. ಪುರುಷನ ಕೈ ಅಳತೆಯ ಪ್ರಕಾರ ಅದರ ಉದ್ದ ಒಂಭತ್ತು ಮೊಳ, ಅಗಲ ನಾಲ್ಕು ಮೊಳ.) ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)11 (ರೆಫಾಯರೊಳಗೆ ಬಾಷಾನಿನ ಓಗನೊಬ್ಬನೇ ಉಳಿದಿದ್ದನು. ಅವನ ಮಂಚ ಕಬ್ಬಿಣದ್ದು; ಅಮ್ಮೋನಿಯರ ರಬ್ಬಾ ಎಂಬ ಪಟ್ಟಣದಲ್ಲಿ ಅದನ್ನು ಈಗಲೂ ನೋಡಬಹುದು. ಪುರುಷನ ಕೈಯಳತೆಯ ಪ್ರಕಾರ ಅದರ ಉದ್ದ ಒಂಭತ್ತು ಮೊಳ, ಅಗಲ ನಾಲ್ಕು ಮೊಳ.) ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)11 (ರೆಫಾಯರೊಳಗೆ ಬಾಷಾನಿನ ಅರಸನಾದ ಓಗನೊಬ್ಬನೇ ಉಳಿದಿದ್ದನು. ಅವನ ಮಂಚ ಕಬ್ಬಿಣದು; ಅಮ್ಮೋನಿಯರ ರಬ್ಬಾ ಎಂಬ ಪಟ್ಟಣದಲ್ಲಿ ಅದನ್ನು ಈಗಲೂ ನೋಡಬಹುದು. ಪುರುಷನ ಕೈಯಳತೆಯ ಪ್ರಕಾರ ಅದರ ಉದ್ದ ಒಂಭತ್ತು ಮೊಳ; ಅಗಲ ನಾಲ್ಕು ಮೊಳ.) ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ11 ರೆಫಾಯರಲ್ಲಿ ಬಾಷಾನಿನ ಅರಸನಾದ ಓಗನು ಮಾತ್ರ ಉಳಿದಿದ್ದನು. ಅವನ ಮಂಚವು ಕಬ್ಬಿಣದ ಮಂಚ. ಅದು ಅಮ್ಮೋನಿಯರ ರಬ್ಬಾದಲ್ಲಿ ಈಗಲೂ ಉಂಟಲ್ಲವೋ? ಅದರ ಉದ್ದ ಪುರುಷನ ಕೈ ಅಳತೆಯ ಪ್ರಕಾರ ಒಂಬತ್ತು ಮೊಳ, ಅಗಲ ನಾಲ್ಕು ಮೊಳ ಇತ್ತು. ಅಧ್ಯಾಯವನ್ನು ನೋಡಿ |
ಯೆಹೋವನು ಹೀಗೆನ್ನುತ್ತಾನೆ: “ಅಮ್ಮೋನಿನ ರಬ್ಬಾ ನಿವಾಸಿಗಳು ಯುದ್ಧದ ಧ್ವನಿಗಳನ್ನು ಕೇಳುವ ಕಾಲ ಬರಲಿದೆ. ಅಮ್ಮೋನಿನ ರಬ್ಬಾ ನಾಶವಾಗಿ ಹಾಳಾದ ಕಟ್ಟಡಗಳ ಗುಡ್ಡವಾಗುವುದು. ಅದರ ಸುತ್ತಮುತ್ತಲಿನ ಪಟ್ಟಣಗಳನ್ನು ಸುಟ್ಟುಹಾಕಲಾಗುವುದು. ಆ ಜನರು ಇಸ್ರೇಲರಿಗೆ ಆ ಪ್ರದೇಶವನ್ನು ಬಿಟ್ಟುಹೋಗುವಂತೆ ಒತ್ತಾಯಿಸಿದರು. ಆದರೆ ಇಸ್ರೇಲರು ಆ ಪ್ರದೇಶವನ್ನು ಬಿಟ್ಟುಹೋಗುವಂತೆ ಅವರನ್ನು ಒತ್ತಾಯಿಸುವರು.” ಯೆಹೋವನು ಹೀಗೆನ್ನುತ್ತಾನೆ: