ಧರ್ಮೋಪದೇಶಕಾಂಡ 29:7 - ಪರಿಶುದ್ದ ಬೈಬಲ್7 “ನಾವು ಈ ಸ್ಥಳಕ್ಕೆ ಬಂದಾಗ ಹೆಪ್ಬೋನಿನ ರಾಜ ಸೀಹೋನ ಮತ್ತು ಬಾಷಾನಿನ ರಾಜ ಓಗನು ನಮ್ಮೊಂದಿಗೆ ಯುದ್ಧ ಮಾಡಲು ಬಂದರು. ನಾವು ಅವರನ್ನು ಸೋಲಿಸಿದೆವು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20197 ನೀವು ಈ ಸ್ಥಳಕ್ಕೆ ಬಂದಾಗ ಹೆಷ್ಬೋನಿನ ಅರಸನಾದ ಸೀಹೋನನೂ, ಬಾಷಾನಿನ ಅರಸನಾದ ಓಗನೂ ನಮ್ಮೊಡನೆ ಯುದ್ಧಮಾಡುವುದಕ್ಕೆ ಬರಲಾಗಿ ನಾವು ಅವರನ್ನು ಸೋಲಿಸಿದೆವು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)7 ನೀವು ಈ ಸ್ಥಳಕ್ಕೆ ಬಂದಾಗ ಹೆಷ್ಬೋನಿನ ಅರಸ ಸೀಹೋನನೂ ಬಾಷಾನಿನ ಅರಸ ಓಗನೂ ನಮ್ಮೊಡನೆ ಯುದ್ಧಮಾಡುವುದಕ್ಕೆ ಬಂದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)7 ನೀವು ಈ ಸ್ಥಳಕ್ಕೆ ಬಂದಾಗ ಹೆಷ್ಬೋನಿನ ಅರಸನಾದ ಸೀಹೋನನೂ ಬಾಷಾನಿನ ಅರಸನಾದ ಓಗನೂ ನಮ್ಮೊಡನೆ ಯುದ್ಧಮಾಡುವದಕ್ಕೆ ಬರಲಾಗಿ ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ7 ನೀವು ಈ ಸ್ಥಳಕ್ಕೆ ಬಂದಾಗ, ಹೆಷ್ಬೋನಿನ ಅರಸನಾದ ಸೀಹೋನನೂ, ಬಾಷಾನಿನ ಅರಸನಾದ ಓಗನೂ ನಮ್ಮೆದುರಿಗೆ ಯುದ್ಧಕ್ಕೆ ಹೊರಟರು. ನಾವು ಅವರನ್ನು ಸೋಲಿಸಿ, ಅಧ್ಯಾಯವನ್ನು ನೋಡಿ |
“ನಾವು ಗೆದ್ದುಕೊಂಡಿದ್ದ ಆ ದೇಶಗಳನ್ನು ನಮ್ಮದಾಗಿ ಮಾಡಿಕೊಂಡೆವು. ಇದರ ಒಂದು ಭಾಗವನ್ನು ನಾನು ರೂಬೇನ್ ಮತ್ತು ಗಾದ್ ಕುಲದವರಿಗೆ ಹಂಚಿಕೊಟ್ಟೆನು. ಅದು ಅರೋಯೇರ್‌ನಿಂದ ಹಿಡಿದು ಗಿಲ್ಯಾದ್ ಪ್ರದೇಶದವರೆಗೆ ಅಂದರೆ ಅರ್ನೋನ್ ಕಣಿವೆಯಲ್ಲಿರುವ ಅರೋಯೇರ್‌ನಿಂದ ಮೊದಲುಗೊಂಡು ಗಿಲ್ಯಾದ್ ಬೆಟ್ಟಪ್ರದೇಶದವರೆಗೂ ಅದರ ಎಲ್ಲಾ ಪಟ್ಟಣಗಳ ಸಮೇತವಾಗಿ ನಾನು ಕೊಟ್ಟೆನು. ಬೆಟ್ಟಪ್ರದೇಶವಾದ ಗಿಲ್ಯಾದಿನಲ್ಲಿ ಅರ್ಧಭಾಗ ಅವರಿಗೆ ದೊರೆಯಿತು.