ಧರ್ಮೋಪದೇಶಕಾಂಡ 23:4 - ಪರಿಶುದ್ದ ಬೈಬಲ್4 ಯಾಕೆಂದರೆ ಇಸ್ರೇಲರು ಈಜಿಪ್ಟಿನಿಂದ ಹೊರಟುಬಂದು ಪ್ರಯಾಣದಲ್ಲಿದ್ದಾಗ ಅವರಿಗೆ ರೊಟ್ಟಿಯನ್ನಾಗಲಿ ನೀರನ್ನಾಗಲಿ ಕೊಡಲು ಅವರು ನಿರಾಕರಿಸಿದ್ದರು. ಅವರು ಮೆಸಪೊಟೋಮಿಯದಿಂದ ಬಿಳಾಮನನ್ನು ಕರೆಸಿ ಇಸ್ರೇಲರನ್ನು ಶಪಿಸುವಂತೆ ಬಲವಂತಪಡಿಸಿದರು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20194 ಯಾಕೆಂದರೆ ನೀವು ಐಗುಪ್ತದೇಶದಿಂದ ಬಂದಾಗ ಅಮ್ಮೋನಿಯರು ಅನ್ನಪಾನಗಳನ್ನು ತಂದು ನಿಮ್ಮನ್ನು ಎದುರುಗೊಳ್ಳಲಿಲ್ಲ; ಮೋವಾಬ್ಯರು ನಿಮ್ಮನ್ನು ಶಪಿಸುವುದಕ್ಕಾಗಿ ಬೆಯೋರನ ಮಗನಾದ ಬಿಳಾಮನಿಗೆ ಹಣಕೊಟ್ಟು ಎರಡು ನದಿಗಳ ಮಧ್ಯದಲ್ಲಿರುವ ಅರಾಮಿನ ಪೆತೋರ್ ಊರಿನಿಂದ ಅವನನ್ನು ಕರೆಯಿಸಿದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)4 ಏಕೆಂದರೆ ನೀವು ಈಜಿಪ್ಟ್ ದೇಶದಿಂದ ಬಂದಾಗ ಅವರು ಅನ್ನಪಾನಗಳನ್ನು ತಂದು ನಿಮ್ಮನ್ನು ಎದುರುಗೊಳ್ಳಲಿಲ್ಲ; ನಿಮ್ಮನ್ನು ಶಪಿಸುವುದಕ್ಕಾಗಿ ಬೆಯೋರನ ಮಗ ಬಿಳಾಮನಿಗೆ ಹಣಕೊಟ್ಟು ಎರಡು ನದಿಗಳ ಮಧ್ಯದಲ್ಲಿರುವ ಅರಾಮಿನ ಪೆತೋರೂರಿನಿಂದ ಅವನನ್ನು ಕರೆಸಿದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)4 ಯಾಕಂದರೆ ನೀವು ಐಗುಪ್ತದೇಶದಿಂದ ಬಂದಾಗ [ಅಮ್ಮೋನಿಯರು] ಅನ್ನ ಪಾನಗಳನ್ನು ತಂದು ನಿಮ್ಮನ್ನು ಎದುರುಗೊಳ್ಳಲಿಲ್ಲ; [ಮೋವಾಬ್ಯರು] ನಿಮ್ಮನ್ನು ಶಪಿಸುವದಕ್ಕಾಗಿ ಬೆಯೋರನ ಮಗನಾದ ಬಿಳಾಮನಿಗೆ ಹಣ ಕೊಟ್ಟು ಎರಡು ನದಿಗಳ ಮಧ್ಯದಲ್ಲಿರುವ ಅರಾವಿುನ ಪೆತೋರೂರಿನಿಂದ ಅವನನ್ನು ಕರಿಸಿದರು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ4 ಏಕೆಂದರೆ ನೀವು ಈಜಿಪ್ಟನ್ನು ಬಿಟ್ಟು ಬರುವಾಗ, ಅವರು ನಿಮಗೆ ರೊಟ್ಟಿಯನ್ನೂ ನೀರನ್ನೂ ಕೊಡುವುದಕ್ಕೆ ಎದುರುಗೊಳ್ಳಲಿಲ್ಲ. ನಿಮ್ಮನ್ನು ಶಪಿಸುವುದಕ್ಕೆ ಮೆಸೊಪೊತಾಮ್ಯದಲ್ಲಿರುವ ಪೆತೋರಿನಿಂದ ಬೆಯೋರನ ಮಗ ಬಿಳಾಮನಿಗೆ ಕೂಲಿ ಕೊಟ್ಟು ನಿಮಗೆ ವಿರೋಧವಾಗಿ ಕರೆಸಿದರು. ಅಧ್ಯಾಯವನ್ನು ನೋಡಿ |
ಒಂದು ಕಾಲದಲ್ಲಿ ಈಜೆಬೆಲಳು ಯೆಹೋವನ ಪ್ರವಾದಿಗಳನ್ನೆಲ್ಲ ಕೊಲ್ಲುತ್ತಿದ್ದಳು. ಓಬದ್ಯನು ನೂರು ಮಂದಿ ಪ್ರವಾದಿಗಳನ್ನು ಕರೆದೊಯ್ದು, ಅವರನ್ನು ಗುಹೆಗಳಲ್ಲಿ ಅಡಗಿಸಿಟ್ಟನು. ಓಬದ್ಯನು ಐವತ್ತು ಮಂದಿ ಪ್ರವಾದಿಗಳನ್ನು ಒಂದು ಗುಹೆಯಲ್ಲಿಯೂ ಉಳಿದ ಐವತ್ತು ಮಂದಿ ಪ್ರವಾದಿಗಳನ್ನು ಮತ್ತೊಂದು ಗುಹೆಯಲ್ಲಿಯೂ ಇಟ್ಟನು. ಓಬದ್ಯನು ಅವರಿಗೆ ಆಹಾರವನ್ನೂ ನೀರನ್ನೂ ಒದಗಿಸುತ್ತಿದ್ದನು.)
ಇವೆಲ್ಲಾ ಆದ ಬಳಿಕ ಇಸ್ರೇಲರ ಪ್ರಧಾನರು ನನ್ನ ಬಳಿಗೆ ಬಂದು, “ಎಜ್ರನೇ, ಇಸ್ರೇಲ್ ಜನರು ಸುತ್ತಲೂ ವಾಸಿಸುವ ಅನ್ಯಜನರಿಂದ ತಮ್ಮನ್ನು ಪ್ರತ್ಯೇಕಿಸಿಕೊಳ್ಳಲಿಲ್ಲ. ಯಾಜಕರಾಗಲಿ ಲೇವಿಯರಾಗಲಿ ತಮ್ಮನ್ನು ಪ್ರತ್ಯೇಕಿಸಿಕೊಳ್ಳಲಿಲ್ಲ. ದೇಶದಲ್ಲಿ ವಾಸವಾಗಿರುವ ಕಾನಾನ್ಯರ, ಹಿತ್ತಿಯರ, ಪೆರಿಜ್ಜೀಯರ, ಯೆಬೂಸಿಯರ, ಅಮ್ಮೋನಿಯರ, ಮೋವಾಬ್ಯರ, ಅಮೋರಿಯರ, ಈಜಿಪ್ಟಿನವರ ಕೆಟ್ಟ ಜೀವಿತವು ಇಸ್ರೇಲರ ಮೇಲೆ ಪ್ರಭಾವಬೀರಿದೆ.