8 ಯೆಹೋವ ದೇವರೇ, ನೀವು ವಿಮೋಚಿಸಿದ ನಿಮ್ಮ ಜನರಾದ ಇಸ್ರಾಯೇಲರಿಗೆ ಕರುಣೆ ಹೊದಿಸಿರಿ. ನಿಮ್ಮ ಜನರಾದ ಇಸ್ರಾಯೇಲರ ಮೇಲೆ ನಿರ್ದೋಷವಾದ ರಕ್ತಾಪರಾಧವನ್ನು ಹೊರಿಸಬೇಡಿರಿ,” ಎಂದು ಹೇಳಬೇಕು. ಆ ರಕ್ತಾಪರಾಧವು ಅವರಿಗೆ ಮುಚ್ಚಲಾಗುವುದು.
ಆಗ ಆ ಜನರು ಯೆಹೋವನಿಗೆ, “ಯೆಹೋವನೇ, ಈ ಮನುಷ್ಯನು ಕೆಟ್ಟಕಾರ್ಯ ಮಾಡಿದ್ದರಿಂದ ನಾವು ಇವನನ್ನು ಸಮುದ್ರಕ್ಕೆ ಬಿಸಾಡುತ್ತೇವೆ. ನಾವು ಒಬ್ಬ ನಿರಪರಾಧಿಯನ್ನು ಕೊಂದೆವು ಎಂಬ ಅಪರಾಧವನ್ನು ನಮ್ಮ ಮೇಲೆ ಹೊರಿಸಬೇಡ. ಅವನನ್ನು ಕೊಂದದ್ದಕ್ಕಾಗಿ ನಮ್ಮನ್ನು ಕೊಲ್ಲಬೇಡ. ನೀನು ಯೆಹೋವನೆಂದು ನಮಗೆ ಗೊತ್ತಿದೆ. ನಿನಗೆ ಇಷ್ಟಬಂದದ್ದನ್ನು ನೀನು ನೆರವೇರಿಸುವೆ. ಆದ್ದರಿಂದ ದಯವಿಟ್ಟು ನಮಗೆ ಕರುಣೆ ತೋರಿಸು” ಅಂದರು.
“ಆದ್ದರಿಂದ ಭೂಮಿಯ ಮೇಲೆ ಕೊಲ್ಲಲ್ಪಟ್ಟ ಎಲ್ಲಾ ಸತ್ಪುರುಷರ ಕೊಲೆಯ ಅಪರಾಧಕ್ಕೆ ನೀವು ಗುರಿಯಾಗುವಿರಿ. ಸತ್ಪುರುಷನಾದ ಹೇಬೆಲನನ್ನು ಮೊದಲುಗೊಂಡು ಬರಕೀಯನ ಮಗನಾದ ಜಕರೀಯನನ್ನು ಕೊಂದದ್ದಕ್ಕೆ ನೀವು ಅಪರಾಧಿಗಳಾಗುವಿರಿ. ಜಕರೀಯನು ದೇವಾಲಯಕ್ಕೂ ಯಜ್ಞವೇದಿಕೆಗೂ ನಡುವೆ ಕೊಲ್ಲಲ್ಪಟ್ಟನು.
ಅವರು ಈಜಿಪ್ಟಿನಲ್ಲಿ ಇನ್ನೂ ಎಳೆ ಪ್ರಾಯದಲ್ಲಿರುವಾಗಲೇ ಸೂಳೆಯರಾದರು. ಈಜಿಪ್ಟಿನಲ್ಲಿ ಅವರು ಮೊದಲ ಬಾರಿ ಸಂಭೋಗಿಸಿದರು. ಪುರುಷರು ತಮ್ಮ ಮೊಲೆತೊಟ್ಟುಗಳನ್ನು ಮುಟ್ಟಿ ಅವರ ಎಳೆಸ್ತನಗಳನ್ನು ಹಿಡಿಯಲು ಬಿಟ್ಟರು.
ಆದರೆ ನೀವು ನನ್ನನ್ನು ಕೊಂದರೆ ಒಬ್ಬ ನಿರಪರಾಧಿಯನ್ನು ಕೊಂದದೋಷಕ್ಕೆ ಗುರಿಯಾಗುವಿರೆಂಬುದನ್ನು ಸ್ಪಷ್ಟವಾಗಿ ತಿಳಿದುಕೊಳ್ಳಿರಿ. ನೀವು ಈ ನಗರವನ್ನೂ ಇದರ ಪ್ರತಿಯೊಬ್ಬ ನಿವಾಸಿಯನ್ನೂ ಸಹ ದೋಷಿಗಳನ್ನಾಗಿ ಮಾಡುವಿರಿ. ನಿಜವಾಗಿಯೂ, ಯೆಹೋವನು ನನ್ನನ್ನು ನಿಮ್ಮಲ್ಲಿಗೆ ಕಳಿಸಿದ್ದಾನೆ. ನೀವು ಕೇಳಿದ ಸಂದೇಶವು ನಿಜವಾಗಿಯೂ ಯೆಹೋವನಿಂದ ಬಂದದ್ದು.”
ಆಗ ರಾಜನು ಬೆನಾಯನಿಗೆ, “ಅವನು ಹೇಳಿದಂತೆ ಮಾಡು! ಅವನನ್ನು ಅಲ್ಲಿಯೇ ಕೊಂದುಬಿಡು. ನಂತರ ಅವನನ್ನು ಸಮಾಧಿ ಮಾಡು. ಆಗ ನನ್ನ ಕುಟುಂಬದವರು ಮತ್ತು ನಾನು ಯೋವಾಬನ ದೋಷದಿಂದ ಮುಕ್ತರಾಗುವೆವು. ಮುಗ್ಧ ಜನರು ಯೋವಾಬನಿಂದ ಕೊಲ್ಲಲ್ಪಟ್ಟ ಕಾರಣ ಈ ದೋಷವುಂಟಾಯಿತು.
ಅವನು ಆ ಪ್ರಾಣಿಯನ್ನು ದೇವದರ್ಶನಗುಡಾರದ ಬಾಗಿಲಿಗೆ ತರಬೇಕು. ಅವನು ಆ ಪಶುವಿನ ಒಂದು ಭಾಗವನ್ನು ಯೆಹೋವನಿಗೆ ಕಾಣಿಕೆಯಾಗಿ ಕೊಡಬೇಕು. ಅವನು ರಕ್ತವನ್ನು ಸುರಿಸಿದ್ದರಿಂದ ತನ್ನ ಕಾಣಿಕೆಯನ್ನು ಯೆಹೋವನ ಪವಿತ್ರ ಗುಡಾರದೊಳಗೆ ತೆಗೆದುಕೊಂಡು ಹೋಗಬೇಕು. ಅವನು ಪ್ರಾಣಿಯ ಒಂದು ಭಾಗವನ್ನು ಯೆಹೋವನಿಗೆ ಉಡುಗೊರೆಯಾಗಿ ತೆಗೆದುಕೊಂಡು ಹೋಗದಿದ್ದರೆ, ಅವನನ್ನು ಅವನ ಜನರಿಂದ ಬಹಿಷ್ಕರಿಸಬೇಕು.